ದಾವಣಗೆರೆ: ಅಕ್ರಮ ಚುನಾವಣಾ ಪ್ರಚಾರ ಆರೋಪ – ಕಾರ್ಯಕರ್ತರ ಜಟಾಪಟಿ

59 ಲ್ಯಾಪ್ ಟಾಪ್ ಜಪ್ತಿ – ವಿಚಾರಣೆ

ದಾವಣಗೆರೆ, ಸುದ್ದಿ 360: ಅನುಮತಿ ಪಡೆಯದೆ ಟೆಲಿಕಾಲಿಂಗ್ ಮೂಲಕ‌ ಮತಬೇಟೆಯ ತಂತ್ರದಲ್ಲಿ‌ ತೊಡಗಿದ್ದ ಬಿಜೆಪಿಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಟಾಬಯಲು ಮಾಡಿದೆ.

ನಗರದ ಚೇತನಾ ಹೋಟೆಲ್ ಎದುರಿನ ಜೆಪಿ‌ ಫಂಕ್ಷನ್ ಹಾಲ್ನಲ್ಲಿ ಟೆಲಿಕಾಲಿಂಗ್ ಮೂಲಕ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿತ್ತು. ಇದರ ಸುಳಿವು‌ ಪತ್ತೆ ಹಚ್ಚಿದ ಕಾಂಗ್ರೆಸ್‌ ಮುಖಂಡರು ಪ್ರಕರಣ ಕುರಿತಾಗಿ‌‌ ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ಮಾಡಿರುವ ಚುನಾವಣಾಧಿಕಾರಿಗಳು 59 ಲ್ಯಾಪ್ ಟಾಪ್ ಸೇರಿದಂತೆ ಕೆಲವರ  ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕಾಂಗ್ರೆಸ್ ನ ಹೇಮಂತ್ ದೂರು ದಾಖಲಿಸಿದ್ದಾರೆ. 60ರಿಂದ 70 ಮಂದಿ ಟೆಲಿಕಾಲಿಂಗ್ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಕಾಂಗ್ರೆಸ್ ನ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಇವರಿಗೆ 15 ರಿಂದ 18 ಸಾವಿರ ವೇತನ ನೀಡಲಾಗುತ್ತಿದೆ. ಹವಾನಿಯಂತ್ರಿತ ಕೊಠಡಿ, ಲ್ಯಾಪ್ ಟಾಪ್, ಊಟ ವಸತಿಯನ್ನು ಒದಗಿಸಲಾಗಿದೆ. ಇವರ ಹಿಂದಿರುವ ಬಿಜೆಪಿ ನಾಯಕರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ಬಿಗುವಿನ ವಾತಾವರಣ

ಬುಧವಾರ ಸಂಜೆ ಜೆಪಿ ಫಂಕ್ಷನ್ ಹಾಲ್ ಕಟ್ಟಡದ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿ ಜಮಾಯಿಸಿದ ಕಾಂಗ್ರೆಸ್  ಹಾಗೂ ಬಿಜೆಪಿ ಕಾರ್ಯಕರ್ತರು ಪರ ವಿರೋಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿಯನ್ನು ಅವಲೋಕಿಸಿದ ಬಡಾವಣೆ  ಪೊಲೀಸರು ಎರಡೂ ಪಕ್ಷದ ಗುಂಪನ್ನು ಚದುರಿಸಿ ಪರಿಸ್ಥಿಯನ್ನು ನಿಯಂತ್ರಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಗಡಿಗುಡಾಳ್ ಮಂಜುನಾಥ್, ಕೆ.ಜಿ.‌ಶಿವಕುಮಾರ್, ನಿಖಿಲ್ ಕೊಂಡಜ್ಜಿ, ಆವರಗೆರೆ ಮಂಜುನಾಥ್, ರಾಘವೇಂದ್ರ ಗೌಡ, ಹೇಮಂತ್, ನವೀನ್ ನಲ್ವಾಡಿ, ಅಜಿತ್ ಆಲೂರು, ಶಾಮನೂರ್ ಕುಮಾರ್, ಬಸವರಾಜ್ ಆನೆಕೊಂಡ ಸೇರಿದಂತೆ  ಇತರ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಕಾಂಗ್ರಸ್ ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಲ್ಲಿರುವ ಕಂಪ್ಯೂಟರ ಕ್ರೌಡಿಂಗ್ ಸೆಂಟರ್ ಯಾವುದು ಎಂಬುದು ನಮಗೆ ತಿಳಿದಿಲ್ಲ ಎಂದು ಎಸ್ ಟಿ ವೀರೇಶ್ ಹೇಳಿದ್ದಾರೆ. ಕಾಂಗ್ರೆಸ್ ಕಳಪೆ ಕುಕ್ಕರ್ ಅನ್ನು ಮತದಾರಿಗೆ ನೀಡಿ ಆಮಿಶ ತೋರಿಸುತ್ತಿದೆ. ಕಳಪೆ ಕುಕ್ಕರ್ಗಳಿಂದ ಏನಾದರೂ ಅನಾಹುತ ಸಂಭವಿಸಿದರೆ ಕಾಂಗ್ರೆಸ್ ಮುಖಂಡರೇ ಹೊಣೆಗಾರರಾಗುತ್ತಾರೆ ಎಂದು ಇದೇ ಸಂದರ್ಭದಲ್ಇ ಅವರು ಎಚ್ಷರಿಸಿದ್ದಾರೆ.

Leave a Comment

error: Content is protected !!