ಚುನಾವಣೆ ಹಿನ್ನೆಲೆ: ಕೊನೆ ದಿನಕ್ಕೆ ಕಾಯದಿರಲು ಸೂಚನೆ
ಸುದ್ದಿ360: ಸಿ.ಇ.ಟಿ ಮತ್ತು ನೀಟ್ನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಜಿ ಸೈನಿಕರ ಮಕ್ಕಳು ಮೀಸಲಾತಿ ಪಡೆಯಲು ಮಾಜಿ ಸೈನಿಕ ದೃಢೀಕರಣ ಪತ್ರವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಪಡೆಯುವುದು ಕಡ್ಡಾಯವಾಗಿದೆ.
ಈ ದೃಢೀಕರಣ ಪತ್ರವನ್ನು ವಿಶೇಷ ವರ್ಗಗಳ ದಾಖಲೆ ಮಂಡನೆ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ. ಪ್ರಸ್ತುತ ಸರ್ಕಾರಿ ನೌಕರರು, ಅಧಿಕಾರಿಗಳನ್ನು ಚುನಾವಣಾ ಕಾರ್ಯಗಳಲ್ಲಿ ಬಳಸಿಕೊಳ್ಳಬಹುದಾದ ಕಾರಣಗಳಿಂದ ಸಿ.ಇ.ಟಿ, ನೀಟ್ನಲ್ಲಿ ಮಾಜಿ ಸೈನಿಕನ ಮೀಸಲಾತಿ ಕೋರಿರುವ ಎಲ್ಲಾ ಮಾಜಿ ಸೈನಿಕರು ಕೊನೆಯ ದಿನಾಂಕದವರೆಗೆ ಕಾಯದೇ ಕೂಡಲೇ ಮಾಜಿ ಸೈನಿಕ ದೃಢೀಕರಣ ಪತ್ರವನ್ನು ಈ ಕಛೇರಿಯಿಂದ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.