ಸುದ್ದಿ360 ದಾವಣಗೆರೆ, ಜೂನ್ 18: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಗರದ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಎಚ್.ಡಿ. ಸುಪ್ರೀತಾ 591 ಅಂಕ (ಶೇ.98.5) ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರೀತಮ್ ವಿ. ದಿವಾಕರ 587(ಶೇ.97.83), ಜೆ. ಸಹನಾ 584(ಶೇ.97.33), ಕೆ.ಜೆ. ತೇಜಸ್ವಿನಿ 584(ಶೇ.97.33) ಹಾಗೂ ಸಿ.ಎ. ಯಶೋಧಾ 584(ಶೇ.97.33) ಅಂಕ ಪಡೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಹಂಚಿಕೊAಡಿದ್ದಾರೆ. ಉಳಿದಂತೆ ಕೆ. ಧನುಷಾ 583 (ಶೇ.97.16), ಹಾಗೂ ಬಿ. ಅನುಷಾ 582 (ಶೇ.97) ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಗಣಿತದಲ್ಲಿ 20 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 5, ಜೀವಶಾಸ್ತ್ರದಲ್ಲಿ 2 ಹಾಗೂ ಭೌತಶಾಸ್ತ್ರದಲ್ಲಿ ಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದಿದ್ದಾರೆ. ಒಟ್ಟಾರೆ 47 ವಿದ್ಯಾರ್ಥಿಗಳು ಅತ್ಯುತ್ತಮ ಹಾಗೂ 151 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಉತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.