ದಾವಣಗೆರೆ; ಏ.18 : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸೆಕ್ಷನ್ ಆಫೀಸರ್, ಸಹಾಯಕ ಲೆಕ್ಕ ಪರಿಶೋಧನಾ ಆಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ, ಇನ್ಸ್ಪೆಕ್ಟರ್, ಎಇಒ, ಸಬ್- ಇನ್ಸ್ಪೆಕ್ಟರ್, ಕಿರಿಯ ಅಂಕಿ ಅಂಶ ಅಧಿಕಾರಿ, ಎನ್‌ಹೆಚ್‌ಆರ್‌ಸಿ ಸಂಶೋಧನಾ ಸಹಾಯಕ, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಕ್ಲರ್ಕ್, ಅಂಚೆ ಸಹಾಯಕ, ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ 18 ರಿಂದ 27 ವರ್ಷ ಎಸ್ಸಿ, ಎಸ್.ಟಿ 5 ವರ್ಷ, ಓಬಿಸಿ, ಆರ್ಥಿಕ ಹಿಂದುಳಿದ ವರ್ಗದವರಿಗೆ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನಾಂಕವಾಗಿದ್ದು, ಹುದ್ದೆಗಳ ಭರ್ತಿಗೆ ಕಂಪ್ಯೂಟರ್ ಆಧಾರಿತ ಸ್ಫರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ www.ssckkr.kar.nic.in ಮತ್ತು https://ssc.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂ.ಸಂ:08192-259446/7406323294 ಅಥವಾ ಸಹಾಯವಾಣಿ ಸಂಖ್ಯೆ: 080-25502520/9483862020ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.