ಸುದ್ದಿ360 ದಾವಣಗೆರೆ, ಜೂನ್ 18: ಪಿಯುಸಿ ಪರೀಕ್ಷೆಯಲ್ಲಿ ನಗರದ ಸರ್‌ಎಂವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿಯಾ ಎಂ. ಜೈನ್ 589 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಎಂ.ಎಸ್. ಶ್ರೇಷ್ಠ 587 ಹಾಗೂ ಜಿ. ಕಾರ್ತಿಕ 587 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಉತ್ತಮ್ ಹಂಸರಾಜ್ ಹಾಗೂ ಕುಮಾರಿ ಎಂ.ಎಸ್. ಸೃಷ್ಟಿ 590 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದು, ಕಿಶನ್ ಎಲ್. ಪಾಟೀಲ್ ಹಾಗೂ ಮಹಿಮ ಗೌಡ ತಲಾ 589 ಅಂಕ ಪಡೆದು ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ.
ಸರ್ ಎಂವಿ ಸಮೂಹ ಸಂಸ್ಥೆಯ 575 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಅಭೂತಪೂರ್ವ ಫಲಿತಾಂಶ ಲಭಿಸಿದೆ. ಭೌತಶಾಸ್ತ್ರದಲ್ಲಿ 34 ವಿದ್ಯಾರ್ಥಿಗಳು, ರಸಾಯನಶಾಸ್ತ್ರ 43, ಗಣಿತ 149, ಜೀವಶಾಸ್ತ್ರ 34, ಗಣಕ ವಿಜ್ಞಾನದಲ್ಲಿ 30, ಕನ್ನಡ 9, ಸಂಸ್ಕೃತ 3 ವಿದ್ಯಾರ್ಥಿಗಳು ಹಾಗೂ ಹಿಂದಿ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜು ಅಧ್ಯಕ್ಷ ಡಾ.ವಿ. ರಾಜೇಂದ್ರ ನಾಯ್ಡು, ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.