ಶಿಕಾರಿಪುರ: ದಾಖಲೆ ಇಲ್ಲದ 5.45 ಕೋಟಿ ಸೀಜ್

ಸುದ್ದಿ360 ಶಿವಮೊಗ್ಗ (ಶಿಕಾರಿಪುರ) : ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು, ಶಿರಾಳಕೊಪ್ಪ ಹಾಗೂ ಆನವಟ್ಟಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 5.45 ಕೋಟಿ ಹಣವನ್ನು ಪೊಲೀಸ್ ಹಾಗೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸೊರಬ ವೃತ್ತ ನಿರೀಕ್ಷಕಿ ಭಾಗ್ಯವತಿ ಬಂಟಿ, ಆನವಟ್ಟಿ ಠಾಣೆಯ ಪಿಎಸ್‌ಐಗಳಾದ ಶಿವಪ್ರಸಾದ್ ಹಾಗೂ ವಿಠ್ಠಲ್ ಅಗಸಿ ನೇತೃತ್ವದ ತಂಡ ಆನವಟ್ಟಿ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ 5ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಶಿಕಾರಿಪುರ ಟೌನ್ ಸರ್ಕಲ್ ಸಿಪಿಐ ರುದ್ರೇಶ್, ಶಿರಾಳಕೊಪ್ಪ ಪಿಎಸ್‌ಐ ಮಂಜುನಾಥ್ ನೇತೃತ್ವದ ತಂಡ ಶಿರಾಳಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

Leave a Comment

error: Content is protected !!