ಶಿವಾನಂದ ದಳವಾಯಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಸುದ್ದಿ360 ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಾವಣಗೆರೆ ಜಿಲ್ಲಾ ಶಾಖೆಯಿಂದ ಯಿಂದ ರಾಜ್ಯ ಸಂಘಕ್ಕೆ ಜಿಲ್ಲಾ ಔಷಧ ಉಗ್ರಾಣದ ಫಾರ್ಮಸಿ ಅಧಿಕಾರಿ ಶಿವಾನಂದ ದಳವಾಯಿ  ನೇಮಕಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಶಿವಾನಂದ ದಳವಾಯಿಯವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಿ  ಆದೇಶ ಹೊರಡಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಶಾಖೆಯ ಅಧ್ಯಕ್ಷರಾದ  ವೀರೇಶ್ ವಡೆನ್ಪೂರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಕಾರ್ಯದರ್ಶಿ  ಗುರುಮೂರ್ತಿ ಹಾಗೂ ಜಿಲ್ಲಾ ಸಂಘದ ಖಜಾಂಚಿಗಳಾದ ತಿಪ್ಪೇಸ್ವಾಮಿ ಬಿ ಆರ್ ಹಾಗೂ ನಿಕಟಪೂರ್ವ ಅಧ್ಯಕ್ಷ ಬಿ ಪಾಲಾಕ್ಷ, ನಿರ್ದೇಶಕರುಗಳಾದ  ಸಿದ್ದಲಿಂಗ ಸ್ವಾಮಿ, ವಿಶ್ವನಾಥ್ ಹಾಗೂ ಸಿ ಜಿ ಆಸ್ಪತ್ರೆಯ ಸುಶ್ರುಶಾಧಿಕಾರಿ  ಕುಬೇಂದ್ರ ಕುಮಾರ್ ಇವರು ಹಾಜರಿದ್ದರು.

Leave a Comment

error: Content is protected !!