ಬಿಜೆಪಿ ಮುಖಂಡ ಸಿದ್ದೇಶ್‍ ಯಾದವ್‍ ಹೃದಯಾಘಾತದಿಂದ ಸಾವು

ಸುದ್ದಿ360 ಬೆಂಗಳೂರು: ಬಿಜೆಪಿ(bjp obc morcha) ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ  ಹಾಗೂ ಚಿತ್ರದುರ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸಿದ್ದೇಶ್‍ ಯಾದವ್‍ (siddesh yadav)ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹೃದಯಾಘಾತ (heart attach) ದಿಂದ ಮೃತಪಟ್ಟಿದ್ದಾರೆ.

ಹಿರಿಯೂರು ತಾಲೂಕಿನ ಸಿದ್ದೇಶ್‍ ಯಾದವ್‍  ಜಿಲ್ಲಾ ಪ್ರಭಾರಿಗಳ ಸಭೆಗೆ ಪಾಲ್ಗೊಳ್ಳಲು ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಗಮಿಸಿದ್ದರು.

ಮಧ್ಯಾಹ್ನ ಸಭೆ ಮುಗಿಸಿ ಹೊರಗೆ ಬಂದ ಸಂದರ್ಭದಲ್ಲಿ ಸಿದ್ದೇಶ್‍ ಯಾದವ್ ಕುಸಿದುಬಿದ್ದಿದ್ದು, ಅವರನ್ನು ತಕ್ಷಣ ಕೆ.ಸಿ. ಜನರಲ್‍ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

Leave a Comment

error: Content is protected !!