ಸುದ್ದಿ360 ದಾವಣಗೆರೆ: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳನ್ನು ಟೀಕಿಸುವ ಮೂಲಕ ಪ್ರತಿ ಪಕ್ಷಗಳು ಬಡವರ ಹಸಿವು ಮತ್ತು ಅಗತ್ಯವನ್ನು ಅಣಣಕಿಸುತ್ತಿರುವ ಕ್ರಮ ಅತ್ಯಂತ ಖಂಡನೀಯ ಎಂದು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಬೂಬ್ ಭಾಷಾ ಹೇಳಿದ್ದಾರೆ.
ಬಡವರ ದೀನದಲಿತರ, ಶೋಷಿತರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಸಾರಿಗೆ,ನಿರುದ್ಯೋಗ ಪದವೀಧರರಿಗೆ ನಿರುದ್ಯೋಗ ಬತ್ಯೆ, ಗೃಹಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ, ನೀಡುವ ಮಹತ್ವದ ಯೋಜನೆಯನ್ನು ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಆದರೆ ವಿರೋಧ ಪಕ್ಷ ಬಿಜೆಪಿ ಹಾಗೂ ಬೆಂಬಲಿಗರು ಈ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ವಿರೋಧಿಸುತ್ತಿರುವುದು ಜನವಿರೋಧಿ ಮತ್ತು ಬಡವಿರೋಧಿ ದೋರಣಿಯಾಗಿದೆ, ಬಡವರಿಗೆ ಅಕ್ಕಿ ಕೊಟ್ರೆ ಅವರು ಮಾರಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಬಡವರ ಅನಿವಾರ್ಯತೆಗಳನ್ನು ಅಣಕಿಸಿ ಅಪಹಾಸ್ಯ ಮಾಡುವುದು ಉಳ್ಳವರ ಧೋರಣೆಯಾಗಿದೆ, ಬಡವರಿಗೆ ಯೋಜನೆಗಳನ್ನು ಇವರು ರೂಪಿಸುವುದು ಇಲ್ಲ ಇಂಥ ಯೋಜನೆಗಳನ್ನು ಜಾರಿಗೆ ತಂದರೆ ಸಹಿಸುವುದಿಲ್ಲ, ಅಕ್ಕಿ ಬದಲಾಗಿ ಬಡವರಿಗೆ ಖಾತೆಗೆ ಹಣ ಹೋಗುವುದರಿಂದ ಆ ಹಣ ಅವರ ಸಂಕಷ್ಟಕ್ಕೆ ನೆರವಾಗುತ್ತದೆ, ಅವರ ದುಡಿಯುವ ಶಕ್ತಿ ಮತ್ತಷ್ಟು ಇಮ್ಮಡಿಯಾಗುತ್ತದೆ. ಬದುಕಿಗೆ ನಿರ್ದಿಷ್ಟ ಆದಾಯದ ಭರವಸೆ ಸಿಕ್ಕರೆ ಅವರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ದುಡಿಯುವ ವರ್ಗಕ್ಕೆ ಹಸಿವು ಮತ್ತು ಮೂಲಭೂತ ಅಗತ್ಯಗಳನ್ನು ಸರ್ಕಾರ ಸದೃಢಗೊಳಿಸುತ್ತಿರುವುದರಿಂದ ಆರ್ಥಿಕ ಚಟುವಟಿಗಳು ಸಹ ಅಭಿವೃದ್ಧಿಯಾಗುತ್ತದೆ, ಬಡವರ ಬದುಕನ್ನು ಬಲಪಡಿಸುವ ಇಂತಹ ಯೋಜನೆಗಳ ಸಮರ್ಪಕ ಜಾರಿಗೆ ಎಲ್ಲರೂ ಸಹಕರಿಸಬೇಕು, ಆದರೆ ಪ್ರತಿಪಕ್ಷಗಳು ಹೆಜ್ಜೆ ಹೆಜ್ಜೆಗೂ ಅಡ್ಡಿ ಪಡಿಸಲು ಮುಂದಾಗುತ್ತಿದೆ ಇವರಿಗೆ ಜನ ತಕ್ಕ ಪಾಠ ಕಳಿಸಿದ್ದಾರೆ ಎಂದು ಮಹಬೂಬ್ ಭಾಷಾ ಹೇಳಿದ್ದಾರೆ.
ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಶಕ್ತಿ ಯೋಜನೆಗೆ ರಾಜ್ಯದಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೃಹ ಜ್ಯೋತಿ ಯೋಜನೆಗೆ ಲಕ್ಷಾಂತರ ಜನ ನೊಂದಣಿ ಮಾಡಿಸಿಕೊಂಡಿದ್ದಾರೆ, ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಈ ಎಲ್ಲಾ ಸರ್ಕಾರದ ಯೋಜನೆಗಳನ್ನು ಜಾರಿಗೊಂಡು ಸಂಕಷ್ಟ ನಿವಾರಣೆಯಾಗುವುದನ್ನು ಸಹಿಸದ ಪ್ರತಿಪಕ್ಷಗಳ ಪ್ರತಿಭಟನೆಗಳು, ಅನಗತ್ಯ ಟಿಕೆಗಳು ಅನರ್ಥ ಎಂದು ಮಹಬೂಬ್ ಭಾಷಾ ಪತ್ರಿಕಾ ಹೇಳಿಕೆ ನೀಡಿದ್ದಾರೆ.