ಸುದ್ದಿ360 ದಾವಣಗೆರೆ (Davangere) : ನಗರದ ಪಿ.ಬಿ. ರಸ್ತೆಯ ಬಾತಿ ಕೆರೆ ಬಳಿ ಇರುವ ಆಯುರ್ವೇದ ಕಾಲೇಜು (ayurvedic college) ಸಮೀಪ ರಸ್ತೆ ದಾಟುತ್ತಿದ್ದ ಆಯುರ್ವೇದ ವಿದ್ಯಾರ್ಥಿಗೆ ಹಾಲಿನ ಡೇರಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆಯುರ್ವೇದ ವಿದ್ಯಾರ್ಥಿ (ayurvedic student) ಆಸ್ಪತ್ರೆಗೆ (hospital) ಸಾಗಿಸುತ್ತಿದ್ದ ಮಾರ್ಗಮಧ್ಯೆ ಮೃತ ಪಟ್ಟಿರುವ (passed away) ಘಟನೆ ಬುಧವಾರ ಸಂಜೆ ನಡೆದಿದೆ.
ಮೃತ ವಿದ್ಯಾರ್ಥಿ ಡಾ. ಮನೋಜ್ ಕುಮಾರ್(20) ದಾವಣಗೆರೆಯ ಎಚ್‌ಕೆಆರ್ ನಗರ ನಿವಾಸಿ ಶಿವಕುಮಾರಸ್ವಾಮಿಯವರ ಪುತ್ರ. ಇವರು ಅಶ್ವಿನಿ ಆಯುರ್ವೇದ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಎಂಎಸ್ ವ್ಯಾಸಂಗ ಮಾಡುತ್ತಿದ್ದು, ಬಧವಾರ ಸಂಜೆ 4.30ರ ವೇಳೆ ಕಾಲೇಜು ಮುಗಿಸಿಕೊಂಡು ಹತ್ತಿರದ ಬಸ್ ನಿಲ್ದಾಣಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಹಾಲಿನ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ : ಸೂಕ್ತ ಪರಿಹಾರಕ್ಕೆ ಆಗ್ರಹ
ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ಮನೋಜ್ ಕುಮಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಎಐವೈಎಫ್ ನೇತೃತ್ವದಲ್ಲಿ ಅಶ್ವಿನಿ ಆರ್ಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ ಹಳೆ ಪಿಬಿ ರಸ್ತೆ ತಡೆದು ಪ್ರತಿಭಟನೆ (protest) ನಡೆಸಿದರು.
ಹಂಪ್ ಅಳವಡಿಸಿ
ಮೃತ ಮನೋಜ್ ಕುಮಾರ್ ಕುಟುಂಬಕ್ಕೆ ಸರಕಾರಿ ನೌಕರಿ ಹಾಗೂ ಸೂಕ್ತ ಪರಿಹಾರ ನೀಡಬೇಕು. ಈ ಜಾಗದಲ್ಲಿ ಪದೇ, ಪದೇ ಅಪಘಾತ ಸಂಭವಿಸಲು ಹಂಪ್ಸ್ ಅಳವಡಿಸದಿರುವುದೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಕಾಲೇಜು ಸಮೀಪದ ರಸ್ತೆಯಲ್ಲಿ ಹಂಪ್ಸ್ ಅಳವಡಿಸಬೇಕು. ಸಮೀಪದ ಬಾತಿ ಕೆರೆಗೆ ತಡೆಗೊಡೆ ನಿರ್ಮಿಸಬೇಕು.
ಪ್ರತಿಭಟನಾಕಾರರ ಕೂಗು
ಪ್ರತಿಭಟನೆಯಲ್ಲಿ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ವಕೀಲ ಪರಮೇಶ್ವರ್, ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.