ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ : ಜಿಲ್ಲಾ ಕ ಸಾ ಪ ಅಧ್ಯಕ್ಷ  ಬಿ.ವಾಮದೇವಪ್ಪ.

kasapa-davangere

ಸುದ್ದಿ360 ದಾವಣಗೆರೆ:  ಯಾರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮತ್ತು ಹವ್ಯಾಸ  ಇಟ್ಟುಕೊಳ್ಳುತ್ತಾರೋ ಅವರಲ್ಲಿ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ. ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ ಎಂಬುದಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಬಿ . ವಾಮದೇವಪ್ಪ ಹೇಳಿದರು.

ಅವರು ದಾವಣಗೆರೆ ನಗರದ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ  ಆಯೋಜನೆ ಗೊಂಡಿದ್ದ  “ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ  ಅಧ್ಯಕ್ಷರ ಭಾಷಣಗಳು” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತ  ಇಂದು ಜ್ಞಾನ ಸಂಪಾದನೆಯಲ್ಲಿ  ವಿಶ್ವಗುರುವಿನ ಸ್ಥಾನದಲ್ಲಿದೆ.  ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚು ಮಹತ್ವವಿದೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ನೆನ್ನೆ ತಾನೆ ಚಂದ್ರಯಾನ – 3  ಉಡಾವಣೆಗೊಂಡ   ಬಾಹ್ಯಾಕಾಶ ನೌಕೆಯ ಯಶಸ್ಸು ಇಡೀ ವಿಶ್ವವನ್ನೇ ನಿಬ್ಬರಗಾಗಿಸಿದೆ ಎಂದು ತಿಳಿಸಿದರು. ಯಶಸ್ಸಿನ ಹಿಂದೆ ಕನ್ನಡದ ವಿಜ್ಞಾನಗಳ ಪಾತ್ರವು  ಇದೆ  ಎಂದು ಹೆಮ್ಮೆಯಿಂದ ಹೇಳಿ ಇದಕ್ಕಾಗಿ ಶ್ರಮಿಸಿದ ಇಸ್ರೋ ವಿಜ್ಞಾನಗಳ ತಂಡವನ್ನು ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹರಿಹರದ ಹಿರಿಯ ಕವಿಯಾದ ಹುಲಿಕಟ್ಟೆ ಚನ್ನಬಸಪ್ಪ ತಮ್ಮ ಅಧ್ಯಕ್ಷ ನುಡಿಗಳಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಪ್ರತಿಯೊಬ್ಬರೂ ಕನ್ನಡದ ಇತಿಹಾಸವನ್ನು ತಿಳಿದುಕೊಂಡು ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣಭೂತರಾಗಬೇಕೆಂದು ಪ್ರತಿಯೊಬ್ಬರು ಪ್ರಶ್ನಿಸಿ ಜ್ಞಾನ ಸಂಪಾದನೆ  ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು .

ಆರಂಭದಲ್ಲಿ   ಪ್ರಕಾಶಕರು ಹಾಗೂ  ಲೇಖಕರು ಆದ ಸಿರಿಗೇರಿ ಯರಿಸ್ವಾಮಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಕವಾಗಿ ಮಾತನಾಡುತ್ತಾ 30 ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಸಮ್ಮೇಳನ  ಅಧ್ಯಕ್ಷರುಗಳ ಭಾಷಣವನ್ನು ಕೃತಿ ರೂಪದಲ್ಲಿ ಹೊರ ತರುವ ಉದ್ದೇಶ ನನಗಾಗಿದೆ ಎಂದು ತಿಳಿಸಿದರು .ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು .ನನ್ನ ಕೃತಿ ಬಿಡುಗಡೆಗೆ ಸಹಾಯ ಮಾಡಿದ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ  ಶಾಮನೂರು ಮಹಾಲಿಂಗಪ್ಪ  ಅವರನ್ನು ಅಭಿನಂದಿಸಿದರು .

ಇದೇ ಸಂದರ್ಭದಲ್ಲಿ ಕೃತಿಯ ಲೇಖಕರಾದ ಸಿರಿಗೇರಿ ಯರಿಸ್ವಾಮಿ ಅವರಿಗೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಿ  ಸನ್ಮಾನಿಸಿತು.

ವೇದಿಕೆ ಮೇಲೆ ಕಾಲೇಜಿನ ಮುಖ್ಯಸ್ಥರಾದ ಸಂಜನಾ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಬಿ ದಿಳ್ಯಪ್ಪ, ಸಾಹಿತಿ ಬಾಮ ಬಸವರಾಜಯ್ಯ ವಿಶ್ರಾಂತ ಕಂದಾಯ ಅಧಿಕಾರಿ ಗುರುಮೂರ್ತಿ ಮುಂತಾದವರು ಉಪಸ್ಥಿತರಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಲ್ಲಿ ನೆರವಾದರು. ಆರಂಭದಲ್ಲಿ ಪಿಯುಸಿ ವಿದ್ಯಾರ್ಥಿನಿಯರ ಪ್ರಾರ್ಥನೆಯಾದ ನಂತರ ಕಾಲೇಜಿನ ಪ್ರಾಚಾರ್ಯರಾದ ಎಂಎಸ್ ಮಲ್ಲಿಕಾರ್ಜುನಯ್ಯ ಅವರು ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು  ಕನ್ನಡ ಅಧ್ಯಾಪಕರಾದ   ಸರ್ವ ಮಂಗಳಮ್ಮ ಅವರು ಸರ್ವರಿಗೂ ವಂದಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!