ಕುವೆಂಪು ಕನ್ನಡ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಸುದ್ದಿ360 ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿನೂತನ ಮಹಿಳಾ ಸಮಾಜ (ರಿ.) ವಿನಾಯಕ ಬಡಾವಣೆ ದಾವಣಗೆರೆ. ಇವರ ಸಂಯುಕ್ತಾಶ್ರಯದಲ್ಲಿ ಆ.15ರ ಮಂಗಳವಾರ ಬೆಳಗ್ಗೆ8.30ಕ್ಕೆ ಕುವೆಂಪು ಕನ್ನಡ ಭವನದ ಮುಂಭಾಗದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು  ದ್ವಜಾರೋಹಣ ಮಾಡಿ ಧ್ವಜ  ವಂದನೆ ಸ್ವೀಕರಿಸುವರು.

ಬೆಳಗ್ಗೆ 11 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ  ಚಂದ್ರಿಕಾ ಮಂಜುನಾಥ್ ಅವರ  ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ ವಾಮದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ದವನ ಕಾಲೇಜಿನ ಉಪನ್ಯಾಸಕರಾದ ರಶ್ಮಿ ಎಂ. ಶ್ರೀಕಾಂತ್ ಭಾಗವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಉಪಸ್ಥಿತರಿರುವರು.

ನಿವೃತ್ತ ಯೋಧರಾದ ಕಲ್ಯಾಣಕುಮಾರ್ ಮತ್ತು ಪ್ರಕಾಶ್ ರೆಡ್ಡಿ ಬೇತೂರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಪತ್ರಕರ್ತರೂ ಆದ ಇ ಎಂ ಮಂಜುನಾಥ್ ಏಕಬೋಟೆ ಇವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಬಹುಮಾನ ನೀಡಿ  ಗೌರವಿಸಲಾಗುವುದು. ಈ ಸಂದರ್ಭದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು, ಆಜೀವ ಸದಸ್ಯರುಗಳು  ಮತ್ತು ವಿನೂತನ ಮಹಿಳಾ ಸಮಾಜದ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಕನ್ನಡದ ಮನಸ್ಸುಗಳು  ಉಪಸ್ಥಿತರಿದ್ದು ಯಶಸ್ವಿಗಳಿಸಿ ಕೊಡಬೇಕೆಂದು, ಸರ್ವರಿಗೂ ಆದಾರಣೀಯ  ಸ್ವಾಗತ ಕೋರಲಾಗಿದೆ ಎಂದು  ಬಿ. ವಾಮದೇವಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!