ಸುದ್ದಿ360 ದಾವಣಗೆರೆ : ದಾವಣಗೆರೆ ಜಿಲ್ಲಾ ವರದಿಗಾರರ ಕೂಟವು ಪ್ರತಿವರ್ಷದಂತೆ ಈ ಬಾರಿಯೂ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, 9 ಜನ ಪತ್ರಕರ್ತರನ್ನು ಆಯ್ಕೆ ಮಾಡಿದೆ.
ಇದೇ ಆ.27ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿರುವ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಾಧ್ಯಮ ಪ್ರಶಸ್ತಿ ನೀಡುವ ಸಲುವಾಗಿ ರಚಿಸಲಾಗಿದ್ದ ಸಮಿತಿ ಸೋಮವಾರ ನಡೆದ ಸಭೆಯಲ್ಲಿ ಒಂಭತ್ತು ಜನ ಪತ್ರಕರ್ತರನ್ನು ಆಯ್ಕೆ ಮಾಡಿದೆ.
ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರ್, ವಿಜಯವಾಣಿಯ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ವಾರ್ತಾ ವಿಹಾರ ಸುದ್ದಿ ಸಂಪಾದಕ ಎಂ.ವೈ. ಸತೀಶ್. ದಾವಣಗೆರೆ ಕನ್ನಡಿಗ ಸಂಪಾದಕ ಆರ್. ರವಿ, ಜನತಾವಾಣಿ ಹಿರಿಯ ವರದಿಗಾರ ಎಸ್.ಎ. ಶ್ರೀನಿವಾಸ, ನ್ಯೂಸ್ 18 ಕನ್ನಡ ಸುದ್ದಿವಾಹಿನಿ ಕ್ಯಾಮರಾ ಮ್ಯಾನ್/ ಜಿಲ್ಲಾ ವರದಿಗಾರ ಎ.ಪಿ. ಸಂಜಯ್, ರಾಜ್ ನ್ಯೂಸ್ ವರದಿಗಾರ ರಾಮಪ್ರಸಾದ್, ಸುವರ್ಣ ಕನ್ನಡ ವಾಹಿನಿಯ ಕ್ಯಾಮರಾ ಮ್ಯಾನ್ ಕಿರಣ್ ಕುಮಾರ್ ಇವರು ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಆಯ್ಕೆಗೊಂಡವರಿಗೆ ಮಾಧ್ಯಮ ದಿನಾಚರಣೆಯ ಕಾರ್ಯಕ್ರಮದಲ್ಲಿ ನಗದು ಮತ್ತು ಪ್ರಶಸ್ತಿಯನ್ನು ಗಣ್ಯರಿಂದ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರಾದ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ ತಿಳಿಸಿದ್ದಾರೆ.