ಮಕ್ಕಳಲ್ಲಿ ಶಿಸ್ತು- ಸಂಸ್ಕಾರಕ್ಕೆ ಶಿಕ್ಷಕರ ಪಾತ್ರ ದೊಡ್ಡದು: ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ಅಭಿಮತ

ಸುದ್ದಿ360, ದಾವಣಗೆರೆ: ಮಕ್ಕಳಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನ ಹೇಳಿಕೊಡುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ತಾಯಿಯೇ ಮೊದಲ ಗುರು ಹಾಗೂ ಶಿಕ್ಷಕರೇ ಎರಡನೇ ಗುರು ಎಂದು ತಿಳಿಸಿದರು. ಮಕ್ಕಳು ಉತ್ತಮ ಶಿಕ್ಷಣದೊಂದಿಗೆ ಭಾರತಾಂಬೆಯ ಹೆಮ್ಮೆಯ ಮಕ್ಕಳಾಗಿ ಹೊರಹೊಮ್ಮುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಕ.ರಾ.ಮ.ಸಾ.ಪ. ದಾವಣಗೆರೆ ದಕ್ಷಿಣ ವಿಭಾಗದ ಅಧ್ಯಕ್ಷರಾದ ಡಾ.ರವಿಕುಮಾರ್ ಎ.ಜೆ ಮಾತನಾಡಿ, ಮಕ್ಕಳು ಶಿಕ್ಷಕರ ಗುಣಗಳನ್ನು ಹಾಗೂ ವೇಷಭೂಷಣವನ್ನು ಗಮನಿಸುತ್ತಿರುತ್ತಾರೆ ಹಾಗಾಗಿ ಶಿಕ್ಷಕರು ಅವರನ್ನು ತಿದ್ದಿ ತಿದ್ದಿ ಬುದ್ದಿ ನೀಡುತ್ತಾ ಬಂದರೆ ಅವರನ್ನು ದೇಶಕ್ಕೆ ಉತ್ತಮ ಕೊಡುಗೆಯನ್ನಾಗಿ ಮಾಡಬಹುದು ಎಂದು ತಿಳಿಸಿದರು.

ಪತ್ರಕರ್ತರಾದ ಬಡಿದಾಳ್ ನಾಗರಾಜ್ ಮಾತನಾಡಿ, ಒಳ್ಳೆಯ ಗುಣಗಳನ್ನು ಬೆಳೆಸಿ ಪೋಷಿಸುವರು ಶಿಕ್ಷಕರು ಮಾತ್ರ, ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದರೆ ಅವರು ಮುಂದೊಂದು ದಿನ ಒಳ್ಳೆಯ ನಡತೆಗಳನ್ನು ಕಲಿತು ಮಾದರಿ ಯಾಗಿ ಬದುಕುತ್ತಾರೆ ಆ ಒಂದು ಶಕ್ತಿ ಶಿಕ್ಷಣದಲ್ಲಿ ಇದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ,  ಪರಿಷತ್ತಿನ ಕೆಲಸ ಕಾರ್ಯಗಳನ್ನು ಕೊಂಡಾಡಿದರು ನಾವು ಒಂದು ಗುರಿ ಮುಟ್ಟಬೇಕಾದರೆ ನಾವು ಕಲಿತ ವಿದ್ಯೆ ಶಿಕ್ಷಣದಿಂದಲೇ ನಾವು ಸಾಧಿಸಲು ಸಹಾಯವಾಗುತ್ತದೆ, ನಮಗೆ ಶಿಕ್ಷಣ ನೀಡಿದ ಗುರುಗಳನ್ನು ಮರೆಯಬಾರದು ಮತ್ತು ಶಿಕ್ಷಕರನ್ನ ನಾವು ಗೌರವಿಸಿ ಪೂಜಿಸಬೇಕು ಎಂದು ತಿಳಿಸಿದರು

ಪತ್ರಕರ್ತೆ ತೇಜಸ್ವಿನಿ ಪ್ರಕಾಶ್ , ಜಯಲಕ್ಷ್ಮಿ ಮಹೇಶ್, ಹೆಚ್ ಆಂಜನೇಯ ಮೂರ್ತಿ ಮಾತನಾಡಿ, ಶಿಕ್ಷಕರ ವೃತ್ತಿಯ ಪಾವಿತ್ರ್ಯತೆ ಮತ್ತು ಮಹತ್ವವನ್ನು ಕೊಂಡಾಡಿದರು.

ಇದೇ ವೇಳೆ ಮಂಜುಳಾ ಎಸ್ ಮತ್ತು ಶ್ರೀಕಾಂತ್ ಕೆ  ಉತ್ತಮ ಶಿಕ್ಷಕರು ಎಂದು ಗೌರವಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನ ತೆಲಗಿವೀರಭದ್ರಪ್ಪ ಮತ್ತು ಪ್ರಾರ್ಥನೆಯನ್ನು ಸುಮಾ, ಸ್ವಾಗತ ಭಾಷಣವನ್ನು ದೀಪ,  ನಿರೂಪಣೆಯನ್ನು ನಾಗರಾಜ್ ಮಾಡಿದರು ವಂದನಾರ್ಪಣೆಯನ್ನ ಕುಮಾರ್ ಮಾಡಿದರು ಪದಾಧಿಕಾರಿಗಳಾದ ಡಾ. ಅನ್ವಿತಾ, ಕೆ.ಟಿ ಗೋಪಾಲ್ ಗೌಡ್ರು, ಸುರೇಶ ರಾವ್, ಮಂಜುಳಾ ಕರ್ಜಗಿ  ಎಸ್ ಬೀರಪ್ಪ , ರೇಖಾ ಇತರರು ಹಾಜರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!