ಸುದ್ದಿ360, ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಶಾಲೆಯ ತುಂಬೆಲ್ಲಾ ಕೃಷ್ಣ- ರಾಧೆಯ ಅಲಂಕಾರದೊಂದಿಗೆ ಆಗಮಿಸಿದ್ದ ಚಿಣ್ಣರ ಕಲರವ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಮಕ್ಕಳು ಶ್ರೀಕೃಷ್ಣನ ನುಡಿಗಳು, ಭಗವದ್ಗೀತಾ ಪಠಣ, ಹಾಡು ಮತ್ತು ನೃತ್ಯಗಳನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಂತರದಲ್ಲಿ ಕಟ್ಟಿದ್ದ ಬೆಣ್ಣೆಯ ಮಡಕೆಯನ್ನು ಒಡೆದು ಬೆಣ್ಣೆ ಕದಿಯುವ ರೂಪಕವನ್ನು ನೃತ್ಯದ ಮೂಲಕ ನಡೆಸಿಕೊಟ್ಟ ಕೃಷ್ಣ ಮತ್ತು ರಾಧೆ ವೇಶಾಧಾರಿ ಮಕ್ಕಳ ಗುಂಪು ನೆರೆದವರ ಕಣ್ಮನ ಸೆಳೆಯಿತು.
ಮುಖ್ಯ ಅತಿಥಿಗಳಾಗಿ ಖಾಸಗಿ ಶಾಲೆಗಳ ಅಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ಹಾಗೂರಾಜಕೀಯ ಮುಖಂಡರು ಆದ ಕೆ.ಸಿ.ಲಿಂಗರಾಜ್, ದಾವಣಗೆರೆಯ ಡಿ.ಕೆ.ಡಿ.ಫೈನಲಿಸ್ಟ್ ಕು. ಆಶ್ರಿತ , ಫ್ಯಾಷನ್ ಡಿಸೈನರ್ ಡಾನ್ಸರ್ ಆಯೇಷಾ ಶ್ರೀನಾಥ್, ಶಾಲೆಯ ಅಧ್ಯಕ್ಷರಾದ ಶಂಕರ್ ಎನ್ ವಿಠಲಕರ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರಶಾಂತ ವಿ ವೆರ್ಣೇಕರ್, ದೈವಜ್ಞ ಬ್ರಾಹ್ಮಣ ಸಮಾಜದ ಕಾರ್ಯದರ್ಶಿಗಳಾದ ಸತೀಶ್ ಎಸ್ ಸಾನು, ಹಾಗೂ ದೈವಜ್ಞ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಯೋಗರಾಜ್ ಆರ್ ಅಣ್ವೇಕರ್, ಸೀತಾರಾಂ ಎಂ ಶೇಟ್ ಹಾಗೂ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಡಿ ವೆರ್ಣೇಕರ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಪೋಷಕರು ಹಾಜರಿದ್ದರು.
ಪದ್ಮಾವತಿ ಡಿ ವೆರ್ಣೇಕರ್ ಇವರಿಗೆ ಪ್ರತಿಭಾ ಅಕಾಡೆಮಿಯಿಂದ ಬೆಸ್ಟ್ ಟೀಚರ್ ಪ್ರಶಸ್ತಿ
ಇದೇ ಸಂದಭರ್ಭದಲ್ಲಿ ಶಿಕ್ಷಕರ ದಿನಾಚರಣೆಯನ್ನೂ ಸಹ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಡಿ ವೆರ್ಣೇಕರ್ ರವರಿಗೆ ಪ್ರತಿಭಾ ಅಕಾಡೆಮಿ ಬೆಂಗಳೂರು ಇವರು ಬೆಸ್ಟ್ ಟೀಚರ್ ಪ್ರಶಸ್ತಿ ನೀಡಿ ಗೌರವಿಸಿದರು.