ಸುದ್ದಿ360 ದಾವಣಗೆರೆ, ಸೆ. 7: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2022-23ನೇ ಸಾಲಿನ ದಾವಣಗೆರೆ ಜಿಲ್ಲಾ ಮಟ್ಟದ ‘ಗ್ರಾಮೀಣ ಸಿರಿ’ ಹಾಗೂ ‘ನಗರ ಸಿರಿ’ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ಸೆ.9ರ ಶನಿವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದೆ.
ಸಮಾರಂಭವು ಅಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ ಇವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಬಿ. ವಾಮದೇವಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಾನಪದ ಆಶುಕವಿ ಯುಗಧರ್ಮ ರಾಮಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಅಭಿನಂದನಾ ನುಡಿ ನುಡಿಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೀರೇಶ ಎಸ್ ಒಡೇನಪುರ ಭಾಗವಹಿಸಲಿದ್ದಾರೆ.
‘ಗ್ರಾಮೀಣ ಸಿರಿ’
- ಪ್ರವಚನಕಾರರಾದ ದಾವಣಗೆರೆ ತಾಲ್ಲೂಕು ಹೊನ್ನನಾಯ್ಕನಹಳ್ಳಿಯ ಹೆಚ್.ಎಸ್. ಮುರುಗೇಂದ್ರಪ್ಪ ರವರನ್ನು ಹಾಗೂ ಕೌಶಲ್ಯಾಭಿವೃದ್ಧಿಗಾಗಿ ಬಿ.ಎಂ. ಪರಿಮಳ ಕುರ್ಕಿ ಇವರಿಗೆ
- ಸಾಹಿತ್ಯ ಮತ್ತು ಸಾಂಸ್ಕೃತಿಗಾಗಿ ಜಗಳೂರು ತಾಲ್ಲೂಕು ಬಸಪ್ಪನಹಟ್ಟಿಯ ಕೆ. ಕೃಷ್ಣಮೂರ್ತಿ, ಸಮಾಜ ಸೇವೆಗಾಗಿ ಎಂ. ಬಿ. ಉಷಾ ಮರಿಕುಂಟೆಯವರಿಗೆ
- ಕನ್ನಡಪರ ಹೋರಾಟಗಾರರಾದ ಹರಿಹರ ತಾಲ್ಲೂಕಿನ ಜಿ. ನಾಗಭೂಷಣ, ಉದಯೋನ್ಮುಖ ಸಾಹಿತ್ಯಕ್ಕಾಗಿ ಎ.ಬಿ. ಮಂಜಮ್ಮನವರಿಗೆ
- ರಂಗಭೂಮಿ ಕ್ಷೇತ್ರದಿಂದ ಚನ್ನಗಿರಿ ತಾಲ್ಲೂಕು ಮಾದಾಪುರದ ಎಂ.ಟಿ. ತಿಮ್ಮಪ್ಪ ಇವರನ್ನು ಹಾಗೂ ಸಮಾಜಸೇವೆಗಾಗಿ ಎಂ.ಜಿ. ಶಶಿಕಲಾ ಇವರಿಗೆ
- ನ್ಯಾಮತಿ ತಾಲ್ಲೂಕಿನಿಂದ ನಾಟಿ ವೈದ್ಯರಾದ ದುರ್ಗಮ್ಮ ದೊಡ್ಡೇರಿ ಹಾಗೂ ಮಾಳೇರ ದುರ್ಗಪ್ಪ ಇವರಿಗೆ
- ಹೊನ್ನಾಳಿ ತಾಲ್ಲೂಕಿನ ನಾಗರಾಜಪ್ಪ ಕತ್ತಿಗೆ ಇವರನ್ನು ಸಮಾಜ ಸೇವೆಗಾಗಿ ಹಾಗೂ ನಾಗರತ್ನ ಟಿ. ಇವರಿಗೆ ಆರೋಗ್ಯ ಸೇವೆಗಾಗಿ ‘ಗ್ರಾಮೀಣ ಸಿರಿ’ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.
‘ನಗರ ಸಿರಿ’
- ದಾವಣಗೆರೆಯ ಕೆ. ಇಮಾಂ ಇವರನ್ನು ಶಿಕ್ಷಣ ಕ್ಷೇತ್ರ, ನಾ. ರೇವನ್ ಚಿತ್ರಕಲೆ ಕ್ಷೇತ್ರ, ವಿದುಷಿ ಮಾಧವಿ ಡಿ.ಕೆ. ಇವರಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಇವರ ಕೊಡುಗೆಯನ್ನು ಗುರುತಿಸಿ ‘ನಗರ ಸಿರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
‘ಪ್ರತಿಭಾ ಪುರಸ್ಕಾರ’
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ತಲಾ ಮೂರು ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನಡೆಯಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.