ನ್ಯಾಷನಲ್‍ ಲೆವೆಲ್ ಅಬಾಕಾಸ್ ಸ್ಪರ್ಧೆಯಲ್ಲಿ ವಿಜೇತರಾದ ಸೀಮಾಸ್‍ ಅಕಾಡೆಮಿ ಮಕ್ಕಳು: ಸಂಸ್ಥೆಯಿಂದ ಅಭಿನಂದನೆ

ಸುದ್ದಿ360 ದಾವಣಗೆರೆ, ಸೆ.30: 19ನೇ ನ್ಯಾಷನಲ್ ಲೆವೆಲ್ ಅಬಾಕಾಸ್ ಸ್ಪರ್ಧೆಯಲ್ಲಿ ದಾವಣಗೆರೆಯ ಸೀಮಾಸ್ ಅಕಾಡೆಮಿಯಿಂದ ಭಾಗವಹಿಸಿದ ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ.

ಗ್ಲೋಬಲ್ ಅಸೋಸಿಯೇಷನ್ ಆಫ್ ಜಪಾನೀಸ್ ಸೋರ್ಬನ್ ಮತ್ತು ಮೆಂಟಲ್ ಅರ್ಥಮೆಟಿಕ್ (ಜೆ.ಎ.ಜೆ.ಎಂಎ.) ಇಂಡಿಯಾ, ಅಂತರಾಷ್ಟ್ರೀಯ ಸಂಸ್ಥೆಯಿಂದ ಆಗಸ್ಟ್ 27ರಂದು ಸ್ಪರ್ಧೆಗಳು ನಡೆದಿದ್ದವು. ದಾವಣಗೆರೆಯ ಪಿ.ಜೆ. ಬಡಾವಣೆಯಲ್ಲಿರುವ ವನಿತಾ ಸಮಾಜದಲ್ಲಿ ತರಗತಿಗಳನ್ನು ನಡೆಸುತ್ತಿರುವ ಸೀಮಾಸ್ ಅಕಾಡೆಮಿಯಿಂದ 21 ಮಕ್ಕಳು ಭಾಗವಹಿಸಿದ್ದರು. ಇವರಲ್ಲಿ 3 ಸೂಪರ್ ಚಾಂಪಿಯನ್, 2 ಚಾಂಪಿಯನ್, 4 ಪ್ರಥಮ ಸ್ಥಾನ, 2 ದ್ವಿತೀಯ ಸ್ಥಾನ  ಹಾಗೂ  6 ತೃತೀಯ ಸ್ಥಾನದೊಂದಿಗೆ ಮಕ್ಕಳು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಸೀಮಾಸ್ ಅಕಾಡೆಮಿಯ ಮಕ್ಕಳ ಫಲಿತಾಂಶಗಳು ಈ ರೀತಿ ಇದೆ.

  • ಉನ್ನತಿ ವಿ.                               ಸೂಪರ್ ಚಾಂಪಿಯನ್
  • ಕನಿಷ್ಕ ಬಿ.                                ಸೂಪರ್ ಚಾಂಪಿಯನ್
  • ಬೀರೇಶ್. ಕೆ.ಜಿ.                       ಸೂಪರ್ ಚಾಂಪಿಯನ್
  • ನಂದೀಶ್ ಎ.ಸಿ.                      ಚಾಂಪಿಯನ್
  • ಚಿರಂತ್ ಜಿ.ಎಸ್.                  ಚಾಂಪಿಯನ್
  • ನಿಶ್ಚಿತಾ ಎಸ್.                         ಪ್ರಥಮ ಸ್ಥಾನ
  • ನಿವೇದಿತಾ ಹೆಚ್.ಆರ್.       ಪ್ರಥಮ ಸ್ಥಾನ
  • ಅದಿತಿ ಜಿ.ಕೆ.                             ಪ್ರಥಮ ಸ್ಥಾನ
  • ರಾಘವೇಂದ್ರ ಇ.ಆರ್.         ಪ್ರಥಮ ಸ್ಥಾನ
  • ಶ್ರೇಯಾ ಕೆ.ಆರ್.                    ದ್ವಿತೀಯ ಸ್ಥಾನ
  • ರಾಮ್ ಎನ್.                           ದ್ವಿತೀಯ ಸ್ಥಾನ
  • ಪೂರ್ವಿ ಎಸ್.ಆರ್.             ದ್ವಿತೀಯ ಸ್ಥಾನ
  • ತೃಪ್ತಿ ಅಂದನೂರು              ದ್ವಿತೀಯ ಸ್ಥಾನ
  • ಗುಲ್ಷನ್ರಾವ್                            ದ್ವಿತೀಯ ಸ್ಥಾನ
  • ಸೈಯಮ್ ವಿ.                         ತೃತೀಯ ಸ್ಥಾನ
  • ಅಂಕುಶ್ ಆರ್.ಎಸ್.           ತೃತೀಯ ಸ್ಥಾನ
  • ಲಿಖಿತ್ ಎಲ್.ಎನ್.               ತೃತೀಯ ಸ್ಥಾನ
  • ಪ್ರತೀಕ್ ಎ.ಪಿ.                        ತೃತೀಯ ಸ್ಥಾನ
  • ತನುಷಾ ಹೆಚ್.ಎನ್.           ತೃತೀಯ ಸ್ಥಾನ
  • ಬೃಂದಾ ಆರ್.ಎಸ್.             ತೃತೀಯ ಸ್ಥಾನ

ಈ ವರ್ಷದ ಅಂತರಾಷ್ಟ್ರೀಯ ಅಬಾಕಾಸ್ ಸ್ಪರ್ಧೆ ದುಬೈ ನಲ್ಲಿ ನಡೆಯಲಿದ್ದು, ಸೂಪರ್‍ ಚಾಂಪಿಯನ್‍ ಪಡೆದ ಮೂವರು, ಹಾಗೂ ಚಾಂಪಿಯನ್‍ ಆಗಿರುವ ಇಬ್ಬರು ಮಕ್ಕಳು ಅಂತರಾಷ್ಟ್ರೀಯ ಅಬಾಕಾಸ್‍ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Leave a Comment

error: Content is protected !!