ಶಿವಮೊಗ್ಗ ಗಲಭೆ: ಸರ್ಕಾರದ ಓಲೈಕೆ ರಾಜಕಾರಣದ ಫಲ – ತಪ್ಪಿತಸ್ಥರಿಗೆ ಕ್ಲೀನ್‍ ಚಿಟ್‍: ಬಸವರಾಜ ಬೊಮ್ಮಾಯಿ -ಆರೋಪ

Shimoga riots were the result of the government's appeasement policy-basavaraj bommai

ಸುದ್ದಿ360 ಬೆಂಗಳೂರು ಅ.4: ಶಿವಮೊಗ್ಗ (shivamogga) ದಲ್ಲಿ ಉಂಟಾದ ಗಲಭೆ  ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದ ಫಲ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಕ್ಕೆ  ಪ್ರೇರಣೆಯಾಗಿದೆ. ತಪ್ಪಿತಸ್ಥರು ಯಾರೆ ಇರಲಿ ಅವರನ್ನು ಹಿಡಿದು ಒಳೆಗೆ ಹಾಕಬೇಕು. ಬದಲಿಗೆ ಸಚಿವರು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja bommai) ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಬಿಜೆಪಿಯವರು ಗಲಭೆ ಮಾಡಿಸುತ್ತಿದ್ದಾರೆಂದು ಸಚಿವರೇ ದಾರಿ ತಪ್ಪಿಸುತ್ತಿದ್ದಾರೆ‌.‌ ಯಾರು ಕ್ರಮ ಕೈಗೊಳ್ಳಬೇಕೊ ಅವರೇ ಹೀಗೆ ಹೇಳಿದರೆ ಸರ್ಕಾರದ ಮೆಲೆ ಜನ ಭರವಸೆ  ಇಡುವುದು ಹೇಗೆ ? ಗೃಹ ಸಚಿವರು ಇದು ಸಣ್ಣ ಘಟನೆ ಅಂತ ಹೇಳಿದ್ದಾರೆ. ಈ ಸರ್ಕಾರದ ತುಷ್ಟೀಕರಣದ ನೀತಿಯೇ ಸಮಾಜ ಘಾತುಕ ಶಕ್ತಿಗಳು ಹೆಚ್ಚಾಗಲು ಕಾರಣವಾಗಿದೆ. ಗಡಿ ಜಿಲ್ಲೆಗಳಲ್ಲಿ ಸಮಾಜ ಘಾತುಕ‌ಶಕ್ತಿಗಳು ಜಾಲ ವ್ಯಾಪಿಸಿಕೊಳ್ಳಲು ಕಾರಣವಾಗಿದೆ‌ ಎಂದರು.

ಇಷ್ಟೇ ಅಲ್ಲದೇ ಈ ಥರದ ಕೇಸ್ ಗಳಲ್ಲಿ ಆರೆಸ್ಟ್ ಆದವರನ್ನು ಬಿಡುಗಡೆ ಮಾಡುವಂತೆ ಸಚಿವರು, ಶಾಸಕರು ಒತ್ತಾಯ ಮಾಡುವುದನ್ನು ನೋಡಿದರೆ ಈ ಸರ್ಕಾರ ಏನು ಮಾಡಲು ಹೊರಟಿದೆ ಅಂತ ತಿಳಿಯುತ್ತಿಲ್ಲ. ಹಿಂದೆ ಪಿಎಫ್‍ಐ ನಲ್ಲಿ ಇದ್ದವರೆ ಹುಬ್ಬಳ್ಳಿ ಗಲಭೆಯಲ್ಲಿ  ಇದ್ದರು. ಡಿಸಿಎಂ ಶಿವಕುಮಾರ್ ಅವರೇ ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡವರ ಪ್ರಕರಣ ವಾಪಸ್ ಪಡೆಯಲು ಪತ್ರ ಬರೆದಿದ್ದಾರೆ ಎಂದರೆ ಏನರ್ಥ. ಶಿವಮೊಗ್ಗ ಘಟನೆ ಸಣ್ಣ ಘಟನೆ ಅಂತ ಗೃಹ ಸಚಿವರು ಹೇಳಿದ್ದಾರೆ. ಈಗ ತಪ್ಪಿನ ಅರಿವಾಗಿ ತಾವು ಹೇಳಿಲ್ಲ ಅಂತ ತಿರುಗಿಸುತ್ತಿದ್ದಾರೆ. ಉಡುಪಿಯಲ್ಲಿ ಹಿಂದೂ ಸಂಘಟನೆಗಳು ಕಾರ್ಯಕ್ರಮಕ್ಕೆ ಹಾಕಿರುವ ಬ್ಯಾನರ್ ಗಳನ್ನು ತೆರವುಗೊಳಿಸುವುದು ಓಲೈಕೆ ರಾಜಕಾರಣದ ಸ್ಪಷ್ಟ ಉದಾಹರಣೆ ಎಂದು ಹೇಳಿದರು.

admin

admin

Leave a Reply

Your email address will not be published. Required fields are marked *

error: Content is protected !!