ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ: ಇಸ್ರೊ ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ

world-space-week-at-davangere-biet-college-exhibition-of-space-equipment-by-isro

ಸುದ್ದಿ360 ದಾವಣಗೆರೆ, ಅ.05: ನಗರದ ಬಾಪೂಜಿ ಇಂಜಿನಿಯರಿಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಸ್ರೋ (ISRO) ದ ಅಂಗಸಂಸ್ಥೆಯಾದ ಯು.ಆರ್. ರಾವ್ ಸೆಟಲೈಟ್ ಸೆಂಟರ್ (U R RAO SATELLITE CENTRE) ಸಹಭಾಗಿತ್ವದಲ್ಲಿ ಅ.7 ರಂದು ಬೆಳಗ್ಗೆ 9.15 ಕ್ಕೆ ನಗರದ ಬಿಐಇಟಿ ಕಾಲೇಜಿ (BIET COLLEGE) ನ ಎಸ್ ಎಸ್ ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್ ನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಬಿ ಅರವಿಂದ್ ತಿಳಿಸಿದರು.ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ: ಇಸ್ರೊದಿಂದ ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ

ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯ ಅತಿಥಿಗಳಾಗಿ ಯುಆರ್ ರಾವ್ ಉಪಗ್ರಹ ಕೇಂದ್ರದ ಉಪ ನಿರ್ದೇಶಕ ಉಪಗ್ರಹ ಏಕೀಕರಣ ಹಾಗೂ ಪರೀಕ್ಷಣಾ ವಿಭಾಗದ ರಾಮನಗೌಡ ವಿ ನಾಡಗೌಡ, ಇಸ್ರೊ ಛೇರ್‍ ಪರ್ಸನ್ ಡಾ.ರಾಘವೇಂದ್ರ ಬಿ.ಕುಲಕರ್ಣಿ ಡಿಡಿಪಿಐ ಬಿ.ಕೊಟ್ರೇಶ್ ಆಗಮಿಸಲಿದ್ದು, ಬಿಐಇಟಿ ನಿರ್ದೇಶಕ ಪ್ರೊ.ವೈ ವೃಷಬೇಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಇಸ್ರೊ ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ

ಮಕ್ಕಳಲ್ಲಿ ಅಂತರಿಕ್ಷ ವಿಜ್ಞಾನ ಮತ್ತು ದೇಶೀಯ ತಂತ್ರಯಜ್ಞಾನಗಳ ಮೇಲಿನ  ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅ.7ರಂದು ನಗರದ  ಇಸ್ರೋ (ISRO)ದ ಕೃತಕ ಉಪಗ್ರಹಗಳು, ಉಡಾವಣೆ ಯಂತ್ರಗಳು ಮತ್ತು ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ಬಿಐಇಟಿ ನಿರ್ದೇಶಕ ವೈ. ವೃಷಭೇಂದ್ರಪ್ಪ ತಿಳಿಸಿದರು.

ವಿವಿಧ ಸ್ಪರ್ಧೆಗಳು

ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮತ್ತು ಕಾಲೇಜು ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ , ಆಶುಭಾಷಣ ಸ್ಪರ್ಧೆ ಹಾಗೂ ಸ್ಮರಣ ಶಕ್ತಿ ಪರೀಕ್ಷೆ ಸ್ಪರ್ಧೆಗಳನ್ನು ಇಸ್ರೋದ ಯು . ಆರ್ . ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿಗಳು ಆಯೋಜಿಸಿದ್ದಾರೆ . ಈ ಎಲ್ಲಾ ಸ್ಪರ್ಧೆಗಳ ವಿಜೇತರುಗಳಿಗೆ ಯು . ಆರ್ . ರಾವ್ ಉಪಗ್ರಹ ಕೇಂದ್ರ , ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯವರು ಬಹುಮಾನ ವಿತರಿಸಲಿದ್ದಾರೆ.

ಎಲ್ಲಾ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಈ ಕಾರ್ಯಕ್ರಮ ವೀಕ್ಷಿಸಲು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ಶಾಲೆಯ ವಿದ್ಯಾರ್ಥಿಗಳು ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಡಾ . ಸಂತೋಷ್ ಕುಮಾರ್ ( 8073286089 ) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಿ.ಜಿ. ಪ್ರವೀಣ್ ಕುಮಾರ್, ಸಿ.ಎಂ.ಕಲ್ಲೇಶಪ್ಪ, ಕುಲಕರ್ಣಿ, ಜಿ.ಬಿ. ದೇಸಾಯಿ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!