ಸುದ್ದಿ360 ದಾವಣಗೆರೆ (davangere), ಅ.09: ನಗರದ ಗುರುಭವನದಲ್ಲಿ ಇಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಚದುರಂಗ (chess) ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಸ್ಪರ್ಧಿಗಳ ಆಯ್ಕೆ ನಡೆಯಿತು.
ಸ್ಪರ್ಧೆಯಲ್ಲಿ 14/17 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ಎರಡು ವಿಭಾಗದಲ್ಲಿ ಆಯ್ಕೆ ನಡೆಸಲಾಯಿತು. 14 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಹೊನ್ನಳ್ಳಿಯ ಆಕಾಶ್ ಕೆಪಿ ಪ್ರಥಮ ಸ್ಥಾನ, ಜನಾರ್ಧನ್ ದ್ವಿತೀಯ ಸ್ಥಾನ, ದಾವಣಗೆರೆಯ ಶರತ್ ಎಂ ಎನ್ ತೃತೀಯ ಸ್ಥಾನ, ಹರಿಹರದ ಚಂದನ್ ಎಸ್ ಜಾದವ್ ನಾಲ್ಕನೇ ಸ್ಥಾನ ಮತ್ತು 5ನೇ ಸ್ಥಾನದಲ್ಲಿ ದಾವಣಗೆರೆಯ ಅಜಯ್ ವಿ ಆಯ್ಕೆಯಾದರು.
14 ವರ್ಷದ ಬಾಲಕಿಯರ ವಿಭಾಗದಲ್ಲಿ ನಿಶ್ಚಿತ ಎಸ್ ಯು, ಸಂಜನಾ ಎಂ, ಸಾಕ್ಷಿ, ಚಂದನ ಬಿ, ಕಾವ್ಯಶ್ರೀ ಎಮ್ ಆಯ್ಕೆಯಾದರು.
17 ವರ್ಷದ ಬಾಲಕರ ವಿಭಾಗದಲ್ಲಿ ಯಶ್ವಂತ್, ಚಿನ್ಮಯ್ ಪಿ ಎಂ, ದೀಕ್ಷಿತ್ ಪಿಎಂ, ಅರ್ಜುನ್ ಕುಮಾರ್ ಸಿ ಎಸ್, ರಕ್ಷಿತ್ ಎಂ ಮೆಗಾವತ್ ಆಯ್ಕೆಯಾಗಿದ್ದಾರೆ.
17 ವರ್ಷದ ಬಾಲಕಿಯರ ವಿಭಾಗದಲ್ಲಿ ಗಂಗೋತ್ರಿ ಕೆ ಸಿ, ಸೌಜನ್ಯ ವೈ, ಗುಪ್ತ ವೈಷ್ಣವಿ, ಧನ್ಯ ಆರ್ ಪಟೇದ್, ಕಾವ್ಯ ಡಿಬಿ ಆಯ್ಕೆಯಾದರು.
ಆಯ್ಕೆಯಾದ ಮಕ್ಕಳಿಗೆ ಜಿಲ್ಲಾ ಪ್ರಭಾರಿಯಾದ ದೈಹಿಕ ಶಿಕ್ಷಣಾಧಿಕಾರಿಗಳಾದ ಮಂಜುಳಾ ಹಾಗೂ ದೈಹಿಕ ಶಿಕ್ಷಕರಾದ ಶ್ರೀನಿವಾಸ್, ಸೋಮಶೇಖರ್ ಬಿರಾದಾರ್ ಮತ್ತು ದಾವಣಗೆರೆ ಜಿಲ್ಲಾ ಅಸೋಸಿಯೇಷನ್ ಕಾರ್ಯದರ್ಶಿಗಳಾದ ಯುವರಾಜ್ ಅವರು ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಮಕ್ಕಳು ಇದೇ ತಿಂಗಳು 12, 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ.