ಸಾಮಾಜಿಕ ಜಾಲತಾಣದಲ್ಲಿ ಹೈವೋಲ್ಟೇಜ್‍ ಕ್ರಿಕೆಟ್‍ ಸಾಂಗ್‍ ‘ಗೆದ್ದು ಬಾ ಓ ಇಂಡಿಯಾ’

ಸುದ್ದಿ360 ದಾವಣಗೆರೆ, ಅ. 11: ವರ್ಲ್ಡ್‍ ಕಪ್‍ ಕ್ರಿಕೆಟ್‍ ಕಾವೇರುತ್ತಿರುವ ಈ ಹೊತ್ತಿನಲ್ಲಿ ದಾವಣಗೆರೆಯ ಸೃಜನಶೀಲ ತಂಡ “ಬ್ಲ್ಯಾಕ್‍ ಕ್ಯಾಟ್‍ ಕ್ರಿಯೇಟಿವ್ ಲ್ಯಾಬ್‍” ರಚಿಸಿರುವ  “ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಗೀತೆ ಸಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ.

ನಗರದ ಪಿಬಿ ರಸ್ತೆಯಲ್ಲಿರುವ ಬಿಸಿಎಲ್‍ ಕ್ರಿಯೇಟಿವ್‍ ಏಜೆನ್ಸಿಯ ಮೂವಿ ಹಾಲ್‍ನಲ್ಲಿ ಇಂದು ಬ್ಲ್ಯಾಕ್‍ ಕ್ಯಾಟ್‍ ತಂಡ ಈ ಒಂದು ಗೀತೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದವರೊಂದಿಗೆ ಗೀತೆಯ ರಚನೆಯ ಕುರಿತು ಮಾಹಿತಿ ನೀಡಿದರು.  ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ 5 ಭಾಷೆಗಳಲ್ಲಿ ರಚಿಸಲಾಗಿದ್ದು, ಗೀತೆಯ ಪರಿಕಲ್ಪನೆ, ನಿರ್ದೇಶನ ಮತ್ತು ಸಂಗೀತ ನಿರ್ದೇಶನ ಮಾಡಿರುವ ಬಾಲು ವಿಜಿಎಸ್‍ ಈ ಒಂದು ಯ್ಯಾಂಥಮ್‍ ಸಾಂಗ್‍ ಪ್ರೇಕ್ಷಕರಲ್ಲಿ ಹೈ ವೋಲ್ಟೇಜ್‍ ರಿಲೀಸ್‍ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ. . .

‘ಗೆದ್ದು ಬಾ ಓ ಇಂಡಿಯಾ-2023’ ಭಾರತೀಯ ಕ್ರಿಕೆಟ್‍ ಗೀತೆ ಲೋಕಾರ್ಪಣೆ

ದಾವಣಗೆರೆಯ ಕಲಾವಿದರಿಂದಲೇ ಮೂಡಿಬಂದಿರುವ  ಈ ಸಾಂಗ್‍ ಜನರ ಮೆಚ್ಚಗೆಯನ್ನು ಗಳಿಸಲಿದೆ. ಸತತ ಮೂರು ದಿನಗಳ ಕಾಲ, ಸುಮಾರು ಐದು ನೂರಕ್ಕೂ ಹೆಚ್ಚು ಕಲಾವಿದರನ್ನು ಸೇರಿಸಿಕೊಂಡು ರಚಿಸಲಾಗಿದೆ. ಅಲ್ಲದೆ, ರಾಷ್ಟ್ರದ ಸಾಂಸ್ಕೃತಿಕ ವೈವಿದ್ಯತೆಯನ್ನು ಇಲ್ಲಿ ಸೆರೆಹಿಡಿಯುವ ಪ್ರಯತ್ನವನ್ನೂ ಮಾಡಲಗಿದ್ದು, ಕ್ರಿಕೆಟ್‍ ಅಭಿಮಾನಿಗಳು ಈ ಒಂದು ಸಾಂಗ್‍ನ್ನು ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಕಾರ್ಯಕಾರಿ ನಿರ್ಮಾಪಕ ಚೇತನ್‍ ಎಂ.ಎಸ್‍. ಹೇಳಿದರು.

“ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಸಾಂಗ್‍ನ ಭಾಷಾವಾರು ಲಿಂಕ್‍ಗಳು:

ಕನ್ನಡ:  https://www.youtube.com/watch?v=bChFz8aw858

ಹಿಂದಿ:  https://www.youtube.com/watch?v=figxRUyASLM

ತೆಲುಗು: https://www.youtube.com/watch?v=gRjLryKDlpM

ತಮಿಳು: https://www.youtube.com/watch?v=kS40MsXwdgM

ಮಲಯಾಳಂ: https://www.youtube.com/watch?v=4nlZc6t-d38

ಈ ಸಂದರ್ಭದಲ್ಲಿ ಡಿ.ಶೇಷಾಚಲ, ಕಾರ್ತಿಕ್‍ ಬಿ.ಜಿ.,  ಅಮೀತ್ ಪಾಟೀಲ್, ನವೀನ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!