ಅ.12: ಕನಕ‌ಜಯಂತಿ ಆಚರಣೆ ಪೂರ್ವಬಾವಿ ಸಭೆ

ಸುದ್ದಿ360, ದಾವಣಗೆರೆ ಅ.11: ನವೆಂಬರ್‌ ನಲ್ಲಿ ನಡೆಯಲಿರುವ ದಾಸ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಅಂಗವಾಗಿ ಗುರುವಾರ ಅಕ್ಟೋಬರ್ 12 ರಂದು ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ  ಸಂಜೆ 5 ಗಂಟೆಗೆ ಸರಿಯಾಗಿ ಮಾಜಿ‌ ಕನಕ ಬ್ಯಾಂಕ್ ಅಧ್ಯಕ್ಷರು, ಕುರುಬಸಮಾಜದ ಹಿರಿಯ ಮುಖಂಡರು ಆದ ಪೈಲ್ವಾನ್ ‌ಹೆಚ್.ಜಿ.ಸಂಗಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿನಗರಸಭೆ ಸದಸ್ಯರಾದ ಎನ್.ಜೆ.ನಿಂಗಪ್ಪನವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

ಸಭೆಗೆ ಸಮಾಜ‌ಭಾಂದವರು  ಹಾಗೂ ಸಮಾಜದ ವಿವಿದ ಸಂಘಸಂಸ್ಥೆಗಳ ಪಧಾದಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜಯಂತ್ಯೋತ್ಸವ ಅರ್ಥಪೂರ್ಣ ಆಚರಣೆಮಾಡಲು ಸಲಹೆ, ಸಹಕಾರ ನೀಡಬೇಕಾಗಿ ಸಮಾಜದ ಮುಖಂಡರಾದ ಪರಶುರಾಮ್ ಕೆ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!