ದಸರಾ ರಜೆ: ಏನಾದ್ರೂ ಕಲೀಬೇಕಲ್ಲಾ ಅನ್ನೋ ಮಕ್ಕಳಿಗೆ – ಚೆಸ್‍ ತರಬೇತಿ ಶಿಬಿರ

ಸುದ್ದಿ360 ದಾವಣಗೆರೆ (Davangere): ದಸರಾ ರಜೆ (Dussehra Holidays) ಶುರುವಾಯಿತು. ಮನೆಯಲ್ಲೇ ಉಳಿಯುವ ಮಕ್ಕಳನ್ನು ಒಂದಿಷ್ಟು ಯ್ಯಾಕ್ಟಿವ್‍ ಮಾಡೋಣ ಎಂದೆಣಿಸುವ ಪೋಷಕರಿಗೆ ಇಲ್ಲೊಂದು ಅವಕಾಶ ಇದೆ ನೋಡಿ.

ಏನು ಅಂತೀರ ಮಕ್ಕಳ ಮನಸನ್ನು ಹಿಡಿದಿಡುವ, ಹೊಸ ಹೊಸ ಟಾಸ್ಕ್ ಗಳನ್ನು ಮಕ್ಕಳ ಮುಂದಿರಿಸುವ ಗೇಮ್‍ ಚದುರಂಗ (chess) ಇದೇ ಅ.15ರಿಂದ 15 ದಿನಗಳ ಚೆಸ್‍ ತರಬೇತಿ ಶಿಬಿರ ಆರಂಭಗೊಂಡಿದೆ.

ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ  15 ದಿನಗಳ ಚೆಸ್‍ ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ಬುದ್ಧಿವಂತರಾಗಿ ಜೀವನದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬಹುದು. ಅಲ್ಲದೆ ಮಕ್ಕಳ ಕಲಿಕೆಗೂ ಸಹಕಾರಿಯಾಗಲಿದೆ.

-ದಿನೇಶ್ ಕೆ ಶೆಟ್ಟಿ, ಅಧ್ಯಕ್ಷರು,  ಜಿಲ್ಲಾ ಚೆಸ್‍ ಅಸೋಸಿಯೇಷನ್

ಭಾರತೀಯ ಪರಂಪರೆಯ  ಚದುರಂಗದಾಟ. ಬುದ್ದಿವಂತರ ಆಟ  ಎಂದೇ ಹೇಳಲಾಗುವ ಈ ಆಟವನ್ನು  ಆಡುವುದರಿಂದ  ಏಕಾಗ್ರತೆ, ಗ್ರಹಿಕೆ, ಮುಂದಾಲೋಚನಾ ಶಕ್ತಿಗಳು ಮಕ್ಕಳಲ್ಲಿ ಹೆಚ್ಚಾಗುತ್ತವೆ.  ದಿನನಿತ್ಯ ಶಾಲೆಗೆ ಹೋಗಿ ಬರುವುದು, ಹೋಂ ವರ್ಕ್‍ ಇಂತಹ ರೊಟೀನ್‍ನಿಂದ ಕೊಂಚ ರಿಲೀಫ್‍ ಕೂಡ ಸಿಗುತ್ತದೆ.

ಪ್ರತೀದಿನ ಶಾಲೆಗೆ ಹೋಗಿ ಬರುತ್ತಿದ್ದ ಮಕ್ಕಳು ರಜೆ ಬಂತೆಂದರೆ ಮೊಬೈಲ್‍ ಟಿವಿ, ವೀಡಿಯೋ ಗೇಮ್‍ ಇಂತಹವುಗಳಲ್ಲಿ ಮುಳುಗಿ ಹೋಗುವುದು  ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯ. ಇವುಗಳಿಂದ ಮಕ್ಕಳನ್ನು ತಪ್ಪಿಸಿ, ಅವರ ಬುದ್ದಿಮತ್ತೆಗೆ ಒರೆಹಚ್ಚುವ ಕೆಲಸ ಮಾಡುವುದಕ್ಕೆ ಈ ರಜೆ ದಿನಗಳು ಒಂದು ಸಕಾಲ ಎಂದೇ ಹೇಳಬಹುದು.

ಮತ್ತೆ ಇಂತಹ ಆಸಕ್ತ ಮಕ್ಕಳು ಮತ್ತು ಪೋಷಕರಿಗೆ ನೆರವಾಗುತ್ತಿರುವುದು ದಾವಣಗೆರೆ ಜಿಲ್ಲಾ ಚೆಸ್‍ ಅಸೋಸಿಯೇಷನ್‍, ದಸರಾ ರಜೆಗೆಂದು 15 ದಿನಗಳ ಕಾಲದ ಚದುರಂಗ ತರಬೇತಿಯನ್ನು ಹಮ್ಮಿಕೊಂಡಿದೆ.

ತರಗತಿಗಳು ನಗರದ ನಿಜಲಿಂಗಪ್ಪ ಬಡಾವಣೆ ಮತ್ತು ತರಳಬಾಳು ಬಡಾವಣೆಯಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಯುವರಾಜ್ ಟಿ  ಅವರನ್ನು ಸಂಪರ್ಕಿಸಲು ಮೊ. 9945613469, 7259310197 ನಂಬರ್‍ಗೆ ಕರೆ ಮಾಡಬಹುದಾಗಿದೆ.

admin

admin

Leave a Reply

Your email address will not be published. Required fields are marked *

error: Content is protected !!