ದಸರಾ: ಸರೋದ್‍ ದಿಗ್ಗಜರ ಬಳಿ ಅಧಿಕಾರಿ ಕೇಳಿದ್ದ ಕಮಿಷನ್ ಎಷ್ಟು. . .!?

dussehra-commission-asked-by-the-official-from-the-sarod-giant pt-taranath

ಸುದ್ದಿ360 ಅ.15: ವಿಶ್ವ ವಿಖ್ಯಾತ ದಸರಾ (Dussehra) ಮಹೋತ್ಸವದಲ್ಲಿ ಖ್ಯಾತ ಸರೋದ್ (sarodh) ವಾದಕ ಪಂ. ರಾಜೀವ್ ತಾರಾನಾಥ್ (Pt. Rajeev Taranath) ಅವರಿಗೆ ಕಾರ್ಯಕ್ರಮ ನೀಡಲು ದಸರಾ ಅಧಿಕಾರಿಗಳು ಕಮಿಷನ್ (commission) ಕೇಳಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‍ ವಾದಕ ಪಂ. ರಾಜೀವ ತಾರಾನಾಥ್‍ ಅವರನ್ನು ದಸರಾ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ  ನೀಡುವಂತೆ  ಆಹ್ವಾನಿಸಿರುವ ದಸರಾ ಅಧಿಕಾರಿಗಳು ಕಮಿಷನ್‍ ಬೇಡಿಕೆ ಇಟ್ಟಿರುವುದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ.

ಕಾರ್ಯಕ್ರಮ ನೀಡುವಂತೆ ಪಂ. ತಾರಾನಾಥರನ್ನು ಖುದ್ದಾಗಿ ಭೇಟಿ ಮಾಡಿರುವ ಅಧಿಕಾರಿಗಳು, ತಾರಾನಾಥರು ಕೇಳಿದ ಸಂಭಾವನೆಗಿಂತ 3 ಲಕ್ಷ ರೂ. ಅಧಿಕ ಹಣವನ್ನು ಆರ್‍ ಟಿ ಜಿಎಸ್‍ ಮೂಲಕ ಖಾತೆಗೆ ಹಾಕಲಾಗುವುದು. ಹೆಚ್ಚುವರಿಯಾಗಿ ಜಮೆಯಾಗುವ 3 ಲಕ್ಷ ಹಣವನ್ನು ನಮಗೆ ವಾಪಾಸ್‍ ನೀಡಬೇಕು ಎಂಬ ಕೋರಿಕೆಯನ್ನು ಅಧಿಕಾರಿಗಳು ಪಂ. ತಾರಾನಾಥರ ಮುಂದಿಟ್ಟಿದ್ದಾರೆ. ಇಚಕ್ಕೆ ಕೆರಳಿದ ತಾರಾನಾಥರು ಅಧಿಕಾರಿಗಳಿಗೆ ಛೀಮಾರಿ ಹಾಕಿ ಕಳಿಸಿದ್ದಾರೆ.

ನಂತರ ತಾರಾನಾಥರನ್ನು ದಸರಾ ಕಾರ್ಯಕ್ರಮ ಪಟ್ಟಿಯಿಂದ ಕೈಬಿಟ್ಟಿರುವುದು ಬೆಳಕಿಗೆ ಬಂದಿದೆ.

ವಿಶ್ವದೆಲ್ಲೆಡೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ, ಪದ್ಮಶ್ರೀ ಪುರಸ್ಕೃತ 91ರ ಹರೆಯದ ಚೇತನ ಪಂ.ತಾರಾನಾಥರ ಬಳಿ ಈ ರೀತಿ ನಡೆದು ಕೊಂಡಿರುವ ಅಧಿಕಾರಿಗಳ ಮತ್ತು ಸರ್ಕಾರದಲ್ಲಿ ನಡೆಯುತ್ತಿರುವ ಕಮಿಷನ್‍ ದಂಧೆ ವಿರುದ್ಧ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommi) ಯವರು ಟ್ವೀಟ್‍ ಮಾಡಿದ್ದಾರೆ.

ಅಧಿಕಾರಿಗಳ ವರ್ಗಾವಣೆಗೆ, ಕಾಂಟ್ರಾಕ್ಟರ್ ಗಳಿಗೆ ಬಿಲ್ ನೀಡಲು ಕಮಿಷನ್ ಪಡೆಯುತ್ತಿದ್ದ ಈ ಸರ್ಕಾರದ ಕಮಿಷನ್ ದಂಧೆ ವಿಶ್ವ ವಿಖ್ಯಾತ ಮೈಸೂರು  ದಸರಾಗೂ ವಿಸ್ತರಿಸಿದ್ದು ನಾಡಿನ ದುರಂತ.

ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರಿಗೆ ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲು ಅಧಿಕಾರಿಗಳು ಕಮಿಷನ್ ಕೇಳಿದ್ದು ಕರ್ನಾಟಕದ ಮಾನ ಹರಾಜಾಗುವಂತೆ ಮಾಡಿದೆ. ಇಂತ ಅತಿ ಭ್ರಷ್ಟ ಸರ್ಕಾರವನ್ನು ಸ್ವಾತಂತ್ರ ಭಾರತದ ಇತಿಹಾಸಸಲ್ಲಿಯೇ ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ಖ್ಯಾತ ಸರೋದ್ ವಾದಕ ಪಂ. ರಾಜೀವ್  ತಾರಾನಾಥ್ ಅವರೇ ಕಮಿಷನ್ ಬೇಡಿಕೆಯನ್ನು  ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿದ್ದು, ಕಮಿಷನ್ ಕೇಳಿದ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!