ಸುದ್ದಿ360 ದಾವಣಗೆರೆ: ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಇಂಥ ಭವ್ಯವಾದ ಸಂಸ್ಕಾರವಿರುವ ದೇಶದಲ್ಲಿ ಇನ್ನೊಬ್ಬ ಹೆಣ್ಣುಮಕ್ಕಳ ಬಗ್ಗೆ ತುಚ್ಚಾವಾಗಿ ಮಾತನಾಡುವ ಕಲ್ಲಡ್ಕ ಭಟ್ ಅವರ ಹೇಳಿಕೆ ಅವರ ಸಂಸ್ಕೃತಿ ಅವರ ಸಂಸ್ಕಾರವನ್ನು ಸೂಚಿಸುತ್ತದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗೆ ಸಭೆಯೊಂದರಲ್ಲಿ ಮಾತನಾಡಿದ ಕಲ್ಲಡ್ಕ ಭಟ್ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹೀನಾಯಕ ವಾದ ಹೇಳಿಕೆ ನೀಡಿದ್ದಾರೆ ಅಲ್ಲದೆ ಈ ಹೇಳಿಕೆಗೆ ಸನ್ಮಾನ್ಯ ಪ್ರಧಾನಿಯವರ ಹೆಸರನ್ನೂ ಸಹ ಸೇರಿಸಿರುವುದು ಸುಸಂಸ್ಕೃತ ಭಾರತದ ದುರ್ದೈವವೇ ಸರಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೇವಲ ಒಂದು ಧರ್ಮವನ್ನು ವಿರೋಧಿಸಲೆಂದೆ ಅನೇಕ ವಿವಾದಿತ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುವ ಭಟ್ಟರು ಈ ದೇಶಕ್ಕೆ ಈ ಸಮಾಜಕ್ಕೆ ತಮ್ಮ ಕೊಡುಗೆ ಏನೆಂಬುದನ್ನು ಮೊದಲು ತಿಳಿಸಬೇಕು ಮತ್ತು ಕೇವಲ ಧರ್ಮಗಳ ನಡುವೆ ಬೆಂಕಿ ಹಚ್ಚಿ ಮಜಾ ತೆಗೆದುಕೊಳ್ಳುವ ಭಟ್ಟರ ಈ ಧೋರಣೆ ಖಂಡನಾರ್ಹವಾಗಿದೆ ಎಂದು ಕಿಡಿ ಕಾರಿದರು.
ಭಾರತವು ಸರ್ವಧರ್ಮಗಳ ಸಮ್ಮಿಲನವಾದ ದೇಶವಾಗಿದೆ ಇಲ್ಲಿ ಎಲ್ಲಾ ಧರ್ಮದವರಿಗೂ ಸಮಾನವಾದ ಬದುಕುವ ಜೀವನ ನಡೆಸುವ ಹಕ್ಕು ನಮ್ಮ ಪವಿತ್ರ ಸಂವಿಧಾನ ನಮಗೆ ನೀಡಿದೆ ಅದರಂತೆ ನಾವು ಸಹ ಬದುಕುತಿದ್ದೇವೆ ಆದರೆ ಭಟ್ಟರಂಥ ವಿಷಜಂತುಗಳಿಗೆ ಈ ಸಮಾಜದ ಶಾಂತಿ ಬೇಕಾಗಿಲ್ಲ ಆದ್ದರಿಂದ ದೇಶದ ಹೆಣ್ಣುಮಕ್ಕಳ ಬಗ್ಗೆ ತುಚ್ಚಾವಾಗಿ ಹೇಳಿಕೆ ನೀಡುತ್ತಿದ್ದಾರೆ ಈ ಕೂಡಲೇ ಭಟ್ಟರು ಬಹಿರಂಗವಾಗಿ ದೇಶದ ಎಲ್ಲಾ ಹೆಣ್ಣುಮಕ್ಕಳ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಕಲ್ಲಡ್ಕ ಭಟ್ಟರೆ ಜವಾಬ್ದಾರಿಯಾಗುತ್ತಾರೆ ಎಂದು ಎಚ್ಚರಿಸಿದರು.
ಸರ್ಕಾರವು ತನ್ನ ಜವಾಬ್ದಾರಿಯ ಅಂಗವಾಗಿ ಮುಸ್ಲಿಂ ಸಮುದಾಯದ ತಲಾಕ್ ಪದ್ದತಿಯನ್ನು ನಿಷೇಧಗೋಳಿಸಿದ್ದಾರೆ ಅದು ಒಳ್ಳೆಯದೋ ಕೆಟ್ಟದ್ದೋ ಅನುಕೂಲವೋ ಅನಾನುಕೂಲವೋ ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿರುತ್ತಾರೆ ಕಲ್ಲಡ್ಕ ಭಟ್ ಅವರು ಸರ್ಕಾರದ ಭಾಗವಾಗದೆ ಒಬ್ಬ ಪಂಚಾಯ್ತಿ ಸದಸ್ಯನು ಆಗದೆ ಸಮಾಜದ ಸಾಮರಸ್ಯ ಕೆಡಿಸಲೆಂದೆ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದು ಅವರ ವಯಸ್ಸಿಗೆ ಹಾಗೂ ಅವರಿಗೆ ಶೋಭೆ ತರುವಂಥದ್ದಲ್ಲ ಆದ್ದರಿಂದ ಈ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಸರ್ಕಾರ ಈ ಕೂಡಲೇ ಅವರನ್ನು ಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಸೈಯದ್ ಖಾಲಿದ್ ಅಹ್ಮದ್ ಅವರು ಒತ್ತಾಯ ಮಾಡಿದ್ದಾರೆ