ಹರಿಹರ ರೈಲ್ವೇ ಪ್ಲಾಟ್‍ಫಾರ್ಮ್‍ನಲ್ಲಿ ಅಪರಿಚಿತ ಶವ ಪತ್ತೆ

ದಾವಣಗೆರೆ: ಹರಿಹರ ರೈಲ್ವೇನಿಲ್ದಾಣದ ಪ್ಲಾಟ್‍ಫಾರ್ಮ್‍ ನಂ.1 ರ ಕಿ.ಮೀ. ನಂ 338/000-100 ರ ನಡುವೆ ಅಪರಿಚಿತ  ವ್ಯಕ್ತಿಯ ಶವ ಮೇ.29ರ ಬೆಳಗ್ಗೆ ಪತ್ತೆಯಾಗಿದ್ದು, ದಾವಣಗೆರೆ ರೈಲ್ವೇ ಪೊಲೀಸ್‍ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿ 35-40 ವರ್ಷ ವಯಸ್ಸಿನ ಅಪರಿಚಿತ ಪುರುಷ ವ್ಯಕ್ತಿಯಾಗಿದ್ದು, 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಸುಮಾರು ಒಂದು ಇಂಚು ಉದ್ದನೆಯ ಬಿಳಿ ಮಿಶ್ರಿತ ಕಪ್ಪು ಬಣ್ಣದ ತಲೆ ಕೂದಲು, ಕಪ್ಪು ಬಣ್ಣದ ಮೀಸೆ ಹೊಂದಿದ್ದು, ಗಡ್ಡವನ್ನು ಶೇವ್‍ ಮಾಡಿರುತ್ತಾನೆ. ಬಲಗೈ ಮೊಣಕೈ ಹತ್ತಿರ ಗಣಪತಿ ದೇವರ ಹಚ್ಚೆ ಇರುತ್ತದೆ.

ಮೃತನ ಮೈ ಮೇಲೆ ತಿಳಿ ನೀಲಿ ಬಣ್ಣದ ಕಪ್ಪುಗೆರೆಯ ತುಂಬು ತೋಳಿನ ಅಂಗಿ, ಬಿಳಿ ಹಸಿರು ಬಣ್ಣದ ಪ್ಯಾಂಟ್‍, ಹಸಿರು ಬಣ್ಣದ  ಒಳ ಉಡುಪು ಧರಿಸಿರುತ್ತಾನೆ. ಈ ಪ್ರಕಾರದ ಚಹರೆ ಗುರುತಿನ ವ್ಯಕ್ತಿಯ ವಾರಸುದಾರರು ಪತ್ತೆಯಾಗಿರುವುದಿಲ್ಲ. ಯಾರಾದರೂ ಪತ್ತೆಯಾದಲ್ಲಿ ಅಥವಾ  ಇದೇ ಹೋಲಿಕೆಯ ವ್ಯಕ್ತಿಯ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ದಾವಣಗೆರೆ ರೈಲ್ವೇ ಪೊಲೀಸ್‍ ಠಾಣೆಯ ದೂರವಾಣಿ ಸಂಖ್ಯೆ: 08192-259643, ಮೊಬೈಲ್‍ 9480802123 ಅಥವಾ, ಪೊಲೀಸ್‍ ಕಂಟ್ರೋಲ್‍ ರೂಂ. 080-22871291 ಇಲ್ಲಿಗೆ ತಿಳಿಸಲು ಪ್ರಕಟಣೆ ಕೋರಿದೆ.

Leave a Comment

error: Content is protected !!