AKSKA ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕ

ಶಿವಮೊಗ್ಗ :- ವರ್ಲ್ಡ್ ಕರಾಟೆ ಫೆಡರೇಷನ್‌ನಿಂದ ಮಾನ್ಯತೆ ಪಡೆದಿರುವ ಕರಾಟೆ ಇಂಡಿಯಾ ಆರ್ಗನೇಸೇಷನ್ ನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇ ಷನ್ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕರಾಗಿದ್ದಾರೆ.

ದಶಕಗಳ ಕಾಲ ಜಿಲ್ಲೆ ಹಾಗೂ ರಾಜ್ಯದಲ್ಲಿ ನಿರಂತರವಾಗಿ ಕರಾಟೆ ಕ್ರೀಡೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನಲೆ ಅವರನ್ನು ಬೆಂಗಳೂರಿ ನಲ್ಲಿ ನಡೆದ ಕರಾಟೆ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷ  ಸಿ.ಎಸ್. ಅರುಣ್ ಮಾಚಯ್ಯ, ಮತ್ತು ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಅವರು ಶಿವಮೊಗ್ಗ ವಿನೋದ್ ಅವರಿಗೆ ರಾಜ್ಯ ಉಪಾಧ್ಯಕ್ಷ ನೇಮಕಾತಿ ಪತ್ರ ನೀಡಿದರು.

Leave a Comment

error: Content is protected !!