ದಸರಾ ಸಿಎಂ ಕಪ್ ಬಾಕ್ಸಿಂಗ್ ನಲ್ಲಿ ಮೀನಾಕ್ಷಿಗೆ ಪದಕ

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 3ರಿಂದ 5 ರವರೆಗೆ ಆಯೋಜಿಸಿದ
ಸಿಎಂ ಕಪ್ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ
ಬೆಂಗಳೂರು ಗ್ರಾಮಾಂತರ ವಿಭಾಗದಿಂದ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ
ಶಿವಮೊಗ್ಗದ ಹೆಮ್ಮೆಯ ಮಹಿಳಾ ಬಾಕ್ಸರ್ ಮತ್ತು ಶಿವಮೊಗ್ಗ ದ ಮೊದಲ ಮಹಿಳಾ ಎನ್ಐಎಸ್ ಕೋಚ್ ಆದ ಮೀನಾಕ್ಷಿ 60-63 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ
ತೃತೀಯ ಸ್ಥಾನ ಪಡೆದು
ಜಿಲ್ಲೆಗೆ ಕೀರ್ತಿ ತಂದಿದ್ದು
ವಿಜೇತ ಕ್ರೀಡಾಪಟು ಕಳೆದ ಬಾರಿಯ ದಸರಾ ಪಂದ್ಯಾವಳಿ ಯಲ್ಲೂ ಜಿಲ್ಲೆಗೆ ಪದಕ ತಂದಿದ್ದು
ಇವರು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿದ್ದು
ಸ್ವತಹ ಕೋಚ್ ಹಾಗೂ ಬಾಕ್ಸಿಂಗ್ ಸಂಸ್ಥೆ ಪದಾಧಿಕಾರಿಯಾಗಿದ್ದರು
ಕ್ರೀಡಾಪಟುವಾಗಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಹೊಂದಿರುವ
ಮೀನಾಕ್ಷಿ ರವರಿಗೆ ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಸೇರಿದಂತ ಬಾಕ್ಸಿಂಗ್ ಸಂಸ್ಥೆಯ ಎಲ್ಲರೂ ಅಭಿನಂದಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment

error: Content is protected !!