ದಾವಣಗೆರೆ: ಸಮೀಪದ ಆವರಗೊಳ್ಳದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ರಥದ ಕಳಶಕ್ಕೆ ಬಾಳೆಹಣ್ಣನ್ನು ಶ್ರದ್ಧಾಭಕ್ತಿಯಿಂದ ಎಸೆಯುವ ಮೂಲಕ ತಮ್ಮ ಮನೋಅಭಿಲಾಶೆಯನ್ನು ದೇವರಿಗೆ ಅರ್ಪಿಸಿದರು.
ಜಾತ್ರೋತ್ಸವಕ್ಲೆ ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ಮು ಮಾಡಲಾಗಿತ್ತು.