ಸುದ್ದಿ 360 ಔರಂಗಾಬಾದ್ ಜೂ.21: ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್ ಖರೀದಿಗೆ ಮುಂದಾಗಿದ್ದಾನೆ.
ಹೀಗೆ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ.
ರೈತ ಹೆಲಿಕಾಪ್ಟರ್ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ ನಡೆಸುವುದೇ ಈತನ ಕನಸಂತೆ!
ಕಳೆದ ಎರಡು ವರ್ಷಗಳಿಂದ ನನ್ನ ಜಮೀನಿನಲ್ಲಿ ಸೋಯಾಬೀನ್ ಬೆಳೆಯುತ್ತಿದ್ದೆ. ಆದರೆ ಅಕಾಲಿಕ ಮಳೆಯಿಂದಾಗಿ ಅದು ನನಗೆ ಉತ್ತಮ ಆದಾಯವನ್ನು ತರಲಿಲ್ಲ, ಬೆಳೆ ವಿಮೆಯ ಹಣವೂ ಸರಿಯಾದ ಪ್ರಮಾಣದಲ್ಲಿ ದೊರಕಲಿಲ್ಲ ಎಂದು ಈತ ಹೇಳಿದ್ದಾನೆ.
ಇತರ ವ್ಯವಹಾರಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಆದ್ದರಿಂದ ಇಂತಹ ಆಲೋಚನೆ ಬಂದಿದ್ದು, ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇನೆ. ಬ್ಯಾಂಕ್‍ನವರ ನೆರವು ಇದಕ್ಕೆ ಅಗತ್ಯವಿದೆ. ಬ್ಯಾಂಕ್‍ನ ನೆರವು ಸಿಗುವ ಭರವಸೆ ಇದೆ ಎಂದು ಪತಂಗೆ ಹೇಳಿದ್ದಾನೆ.
ರೈತನ ಈ ಕನಸು ನನಸಾಗುತ್ತದೆಯಾ. . . . ಕಾದು ನೋಡೋಣ.