ದಾವಣಗೆರೆಯಲ್ಲಿ ವಿಜೃಂಭಣೆಯ ಗಂಗಾಜಯಂತಿ

ಸುದ್ದಿ 360 ಬೆಂಗಳೂರು, ಜೂ. 24: ನಗರದ ಹಳೇ ಪೇಟೆ ಗಂಗಾ ಮತಸ್ಥರು ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಗಂಗಾಜಯಂತಿ ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ನೆರವೇರಿತು.

ಗಂಗಾ ಜಯಂತೋತ್ಸವದಲ್ಲಿ ನೂರಾಒಂದು ಪೂರ್ಣ ಕುಂಭ ಹೊತ್ತ ಮಹಿಳೆಯರು ಜಾನಪದ ಕಲಾ ತಂಡಗಳಾದ ನಾದಸ್ವರ, ವೀರಗಾಸೆ, ಡೊಳ್ಳಿನ ತಂಡಗಳ ನೃತ್ಯ ಪ್ರದರ್ಶನದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಯಶವಂತರಾವ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜನಳ್ಳಿ ಶಿವಕುಮಾರ್, ದಾವಣಗೆರೆ ಮೇಯರ್ ಜಯಮ್ಮ ಗೋಪಿನಾಯ್ಕ ಉಪ ಮೇಯರ್ ಗಾಯತ್ರಿ, ಶ್ರೀನಿವಾಸ್ ದಾಸ್ ಕರಿಯಪ್ಪ, ಜಿಲ್ಲಾಧ್ಯಕ್ಷ ಮಾಗಾನಹಳ್ಳಿ ಮಂಜುನಾಥ್, ಕಾರ್ಯದರ್ಶಿ ಉಮೇಶ್,ಟಿ .ಮಂಜುನಾಥ. ವಿಜಯನಗರ ಜಿಲ್ಲೆ  ಗಂಗ ಸಮಾಜ ದ  ಅಂಬಾಡಿ ನಾಗರಜ, ಗಣೇಶ್, ರವಿ, ವಾಗೇಶ್, ಬಾತಿ ಅಂಜಿನಪ್ಪ, ಕೆಂಚಪ್ಪ, ಅಶೋಕ್, ಗೋಪಿ, ಮತ್ತಿರರು ಉಪಸ್ಥಿತರಿದ್ದರು.

ಮೆರವಣಿಗೆಯು  ಹೊಂಡದ ಸರ್ಕಲ್ ನಲ್ಲಿ ಇರುವ ಜಿಲ್ಲಾ ಗಂಗಾಮತಸ್ಥರ ಸಮಾಜದ ವಾಣಿಜ್ಯ ಮಳಿಗೆಗಳ ಮುಂದೆ ಮುಕ್ತಾಯಗೊಂಡಿತು. ಮೆರವಣಿಗೆಯ ನಂತರ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. ಹದಿನೇಳು ವರ್ಷಗಳ ನಂತರ ನಡೆದ ಗಂಗಾಜಯಂತಿ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ವಿಜೃಂಭಣೆಯಿಂದ ನೆರವೇರಿದ ಗಂಗಾ ಜಯಂತೋತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ  ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

admin

admin

Leave a Reply

Your email address will not be published. Required fields are marked *

error: Content is protected !!