ಯಶವಂತರಾವ್ ಜಾಧವ್ ಜನ್ಮದಿನಾಚರಣೆ (ಜೂ.29)

ಸುದ್ದಿ360 ದಾವಣಗೆರೆ, ಜೂ.27: ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಅವರ ಜನ್ಮದಿನವನ್ನು ಜೂ.29ರಂದು ಯಶವಂತ ರಾವ್ ಜಾಧವ್ ಸ್ನೇಹಬಳದಿಂದ ಆಯೋಜಿಸಲಾಗಿದೆ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 62ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಯಶವಂತರಾವ್ ಜಾಧವ್ ಅವರು ಕಳೆದ 35 ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಸಮಾಜಮುಖಿ ಕಾರ್ಯಗಳು ಕಾರ್ಯಕರ್ತರಿಗೆ ಪ್ರೇರಣೆ ನೀಡುವಂತವಾಗಿವೆ ಎಂದರು.

ಜನ್ಮದಿನಾಚರಣೆ ಅಂಗವಾಗಿ ಕಳೆದ ಎರಡು ದಿನಗಳಿಂದ ಧಾರ್ಮಿಕ ಕಾರ್ಯಕ್ರಮ,  ಆರೋಗ್ಯ ತಪಾಸಣಾ ಶಿಬರ, ರಕ್ತದಾನ ಶಿಬಿರ, ಗ್ರಾಮಾಂತರ ಭಾಗ ತುರ್ಚಿಘಟ್ಟದಲ್ಲಿ, ನಿರಾಶ್ರಿತರಿಗೆ ಬಟ್ಟೆಮತ್ತು ಪಠ್ಯಪುಸ್ತಕಗಳ ವಿತರಣೆ, ಗೋಶಾಲೆಗಳಲ್ಲಿ ಮೇವು ವಿತರಣೆ ಹೀಗೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಪಕ್ಷ ಇಷ್ಟು ಬಲಿಷ್ಟವಾಗಿದೆ ಎಂದರೆ ಅದಕ್ಕೆ ಕಾರಣ ಯಶವಂತರಾವ್ ಜಾಧವ್ ಅವರೂ ಕೂಡ ಕಾರಣೀಕರ್ತರು. ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಸಂದರ್ಭದಲ್ಲಿ  ದೌರ್ಜನ್ಯದ ದಿನಗಳನ್ನು ಎದುರಿಸಿ, ಧೈರ್ಯವಾಗಿ ನಿಂತು ಕಾರ್ಯಕರ್ತಪಡೆಯನ್ನು ಕಟ್ಟುವಲ್ಲಿ ಅವರ ಕೊಡುಗೆ ಅಪಾರವಾಗಿದೆ.

-ರಾಜನಹಳ್ಳಿ ಶಿವಕುಮಾರ್

ಜೂ.29ರ  ಬೆಳಗ್ಗೆ 11 ಗಂಟೆಗೆ  ನಗರದ ದೇವರಾಜ ಅರಸು ಬಡಾವಣೆಯ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಹುಟ್ಟು ಹಬ್ಬ ಆಚರಣೆಯನ್ನು ಆಯೋಜಿಸಲಾಗಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ,  ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕರಾದ  ಎಸ್ ಎ ರವೀಂದ್ರನಾಥ್, ಎಂ.ಪಿ ರೇಣುಕಾಚಾರ್ಯ,  ಎಸ್.ವಿ ರಾಮಚಂದ್ರಪ್ಪ, ಮಾಡಾಳು ವಿರುಪಾಕ್ಷಪ್ಪ, ಪ್ರೊ. ಲಿಂಗಣ್ಣ, ಹರಿಹರ ಕ್ಷೇತ್ರದ ಮಾಜಿ ಶಾಸಕ ಬಿ.ಪಿ. ಹರೀಶ್, ರಾಜ್ಯ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೀವನ್ ಮೂರ್ತಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಹನಗವಾಡಿ ವೀರೇಶ್, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್,  ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಎ ಎಚ್ ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಹಾನಗರ ಪಾಲಿಕೆ ಮಹಾಪೌರರು ಹಾಗೂ ಎಲ್ಲಾ ಸದಸ್ಯರು, ವಿವಿಧ ಸಮಾಜದ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಯಶವಂತರಾವ್ ಜಾಧವ್ ಅವರಿಗೆ ಶುಭ ಕೋರಲಿದ್ದಾರೆ. ಜೂ.30ರಂದು ಸಂಜೆ 7 ಗಂಟೆಗೆ ದುರ್ಗಾಂಭಿಕ ದೇವಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಾಟಕವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಿಸಿ ಶ್ರೀನಿವಾಸ್, ಉಪಮೇಯರ್ ಗಾಯತ್ರಿ ಖಂಡೋಜಿರಾವ್, ಗೋಪಾಲ್ ರಾವ್ ಮಾನೆ, ಶಾಂತಕುಮಾರ್ ಸೋಗಿ,  ಶಂಕರ್ ಬಿರಾದರ್, ಸಂದೀಪ್ ಜೈನ್, ಹನುಮಂತರಾವ್ ಪವಾರ್, ಟಿಂಕರ್ ಮಂಜಣ್ಞ, ಎಲ್ ಡಿ. ಗೋಣಪ್ಪ, ನರೇಂದ್ರ, ನೀಲಗುಂದ ರಾಜು ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!