ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ

ಸುದ್ದಿ360 ದಾವಣಗೆರೆ, ಜೂನ್ 28: 3 ಲಕ್ಷ ರೂ. ಮೇಲ್ಪಟ್ಟು ಸಾಲ ಪಡೆಯುವ ರೈತರಿಗೂ ಸಿಬಿಲ್ ಸ್ಕೋರ್ ಪರಿಶೀಲನೆ ಕಡ್ಡಾಯ ಎಂಬ ಸರಕಾರದ ಆದೇಶದಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಅವರು ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರದ ಈ ನೀತಿಯಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ, ಬಹಳಷು ಕೃಷಿಕರು ಸರಕಾರದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಾರೆ. ಆದಕಾರಣ ಕೇಂದ್ರ ಸಚಿವರು ಹಾಗೂ ಆರ್‌ಬಿಐ ಜತೆ ಸಹಕಾರ ಸಚಿವರು ಚರ್ಚಿಸಿ, ಈ ನಿಯಮ ವಾಪಸ್ ಪಡೆಯಲು ಕೋರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಅಲ್ಲದೆ ತಾವು ಕೂಡ ಸಚಿವರು, ಆರ್‌ಬಿಐಗೆ ಪತ್ರ ಬರೆಯುವುದಾಗಿ ತಿಳಿಸಿದರು.

Leave a Comment

error: Content is protected !!