ಪಠ್ಯದ ಜೊತೆ ಸಾಹಿತ್ಯ, ಸಂಸ್ಕೃತಿ, ಲಲಿತಕಲೆಗಳು ಶಿಕ್ಷಣಕ್ಕೆ ಭದ್ರ ಬುನಾದಿ: ಸಾಲಿಗ್ರಾಮ ಗಣೇಶ್ ಶೆಣೈ ಅಭಿಮತ

ಸುದ್ದಿ360 ದಾವಣಗೆರೆ.ಜು.05: ಶಿಕ್ಷಣ ಕೇವಲ ಅಂಕಪಟ್ಟಿ, ರ‍್ಯಾಂಕ್ ಮಾನದಂಡವಲ್ಲ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಎಲ್ಲಾ ಪ್ರಕಾರಗಳು ಪೂರ್ಣ ಪ್ರಮಾಣದಲ್ಲಿ ಭದ್ರವಾದ ಬುನಾದಿ ಇತ್ತೀಚಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಸಾಹಿತ್ಯ ಕಲಾಪ್ರಕಾರಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ. ಮಕ್ಕಳು ವಿದ್ಯಾಭ್ಯಾಸದ ಜತೆಯಲ್ಲಿ ಕವನ ರಚನೆ, ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿದರೆ ಶಿಕ್ಷಣಕ್ಕೆ ಸಾರ್ಥಕತೆ ಬರುತ್ತದೆ ಮತ್ತು ಮುಂದಿನ ಜೀವನದಲ್ಲಿ ಸಾಧನೆಗಳ ಹಾದಿ ಸುಗಮವಾಗುತ್ತದೆ ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕರೂರಿನಲ್ಲಿ ಇರುವ ಏಜು ಏಷ್ಯಾ ಅಂತರಾಷ್ಟ್ರೀಯ ವಸತಿಯುತ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ಮಕ್ಕಳಿಗೆ ಸಾಹಿತ್ಯ, ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನೆ ಮಾಡಿದ ಶೆಣೈಯವರು ಮಕ್ಕಳಿಗೆ ಸಾಮಾನ್ಯ ಜ್ಞಾನ ಹೆಚ್ಚಿಸಲು ರಸರಂಜನೆ, ಆಟೋಟ ಸ್ಪರ್ಧೆಯನ್ನು ನಡೆಸಿ ರಂಜಿಸಿದರು.

ಸಾವಿರಾರು ವರ್ಷಗಳ ಶತಶತಮಾನಗಳ ಇತಿಹಾಸ ಪರಂಪರೆಯ ಕನ್ನಡ ಭಾಷೆಯ ಈ ಪುಣ್ಯಭೂಮಿಯಲ್ಲಿ ನಾವು ಹುಟ್ಟಿದ್ದು ಪುಣ್ಯದ ಫಲ ಕನಿಷ್ಠ ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಮನದಾಳದಿಂದ ಸ್ವೀಕರಿಸಿ ಅದಕ್ಕೆ ಪ್ರಥಮ ಆದ್ಯತೆ, ಮಾನ್ಯತೆ ಕೊಟ್ಟಾಗ ಈ ಪವಿತ್ರ ಭೂಮಿಯ ಋಣ ತೀರಿಸಿದಂತೆ ಆಗುತ್ತದೆ ಎಂದು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಏಜು ಏಷ್ಯಾ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಕುಮಾರ್ ಮಾತನಾಡಿ ಮಕ್ಕಳಲ್ಲಿ ಹುದುಗಿರುವ ಪ್ರಬಲವಾದ ಅದ್ಭುತ ಪ್ರತಿಭೆಗಳನ್ನು ಹೊರತರಲು, ಜಾಗೃತಿ ಮೂಡಿಸಿ ಅವರ ಮುಂದಿನ ಜೀವನದ ಸಾಧನೆಗೆ ಅವರವರ ಆಸಕ್ತಿಗಳ ಮೇಲೆ ಅವಲಂಬಿತರಾಗಿ ಮಕ್ಕಳಲ್ಲಿ ವಿವಿಧ ಪ್ರಕಾರಗಳ ಪ್ರತಿಭೆಯನ್ನು ಗುರುತಿಸಿ ಆ ಹಂತದಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣದ ಜತೆಯಲ್ಲಿ ಸಾಹಿತ್ಯ ಸಂಸ್ಕೃತಿಯ ಅರಿವು ಮೂಡಿಸುವ ಈ ಪರಿಕಲ್ಪನೆ ಹಾಗೂ ಕನ್ನಡ ಸಾಹಿತ್ಯದ ಜತೆಯಲ್ಲಿ “ಆಡಿಯೋ ವಿಡಿಯೋ ಕ್ಲಬ್”, ‘ಕಲಾ ಕ್ಲಬ್”, `ಸ್ಟೇಮ್‌ಕ್ಲಬ್’ ಹೀಗೆ ಹೊಸ ಹೊಸ ತಂತ್ರಜ್ಞಾನದ ವಿವಿಧ ಸಂಘಟನೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಏಜು ಏಷ್ಯಾ ವಿದ್ಯಾಸಂಸ್ಥೆಯ ಸಂಯೋಜಕರಾದ ಸಹನಾ ಸಂತೋಷ್‌ರವರು ಪ್ರಾಸ್ತವಿಕ ಮಾತನಾಡಿ ಸಂಘಟನೆಗಳ ರೂಪರೇಷೆ, ಆಯೋಜನೆ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಬಿ.ಸಿ.ಎಲ್. ಸಹ ಸಂಸ್ಥಾಪಕರಾದ ಚೇತನ್ ಸಿ.ಎಂ, ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ರವೀಂದ್ರ ಹೆಚ್.ಅರಳಗುಪ್ಪಿ, ಬಿ.ಐ.ಇ.ಟಿ. ಕಾಲೇಜಿನ ಸಹ ಪ್ರಾಧ್ಯಾಪಕರಾದ ಶ್ರೇಯಸ್ ವರ್ಣೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಮಕ್ಕಳಲ್ಲಿ ಸ್ಪೂರ್ತಿ ಮೂಡಿಸಿದರು. ವಿವಿಧ ಸಂಘಟನೆಗಳ ಮುಖ್ಯಸ್ಥರಾದ ಪವಿತ್ರ ಎಂ., ನಾಗರತ್ನ ಎಲ್.ಹೆಚ್., ಭ್ರಮರಾಂಭರಾಜು, ಶೀಲಾವತಿ ವಿ.ಹೆಚ್.ಜಿನೇಂದ್ರ, ಡಿ.ಎಂ. ಶುಭಂ, ರಾಘವೇಂದ್ರ ಆಚಾರ್, ಆಶಾ ಪವಾರ್, ಸುನೀಲ್, ಅಕ್ಷತ, ಸ್ಮೃತಿ, ರುಹೀನಾ, ರೂಪ, ಶಾಹಿನ್ ನದಾಪ್ ಉಪಸ್ಥಿತರಿದ್ದರು.

ಎಲ್ಲಾ ಸಂಘಟನೆಗಳ ಉದ್ಘಾಟನಾ ಸಮಾರಂಭದ ಪ್ರಾರ್ಥನೆ, ಸ್ವಾಗತ, ನಿರೂಪಣೆ, ವಂದನಾರ್ಪಣೆ ಸೇರಿದಂತೆ ನಾಟಕ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳು ಸಮಾರಂಭ ಯಶಸ್ವಿಗೊಳಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!