ಹಾಲು ವ್ಯಾಪಾರಿಗೆ ಚಾಕು ತೋರಿಸಿ ದರೋಡೆ

ಸುದ್ದಿ360,ಶಿವಮೊಗ್ಗ ಜು.06 : ಎಂದಿನಂತೆ ನಸುಕಿನಲ್ಲಿ ಬಂದು ಹಾಲಿನ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿದ್ದ ಹಾಲು ವ್ಯಾಪಾರಿಯೋರ್ವರಿಗೆ ಚಾಕುವಿನಿಂದ ಬೆದರಿಕೆಯೊಡ್ಡಿ, ನಗದು ಮತ್ತು ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ.

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕುವೆಂಪು ರಸ್ತೆಯಲ್ಲಿರುವ ಹಾಲಿನ ಬೂತ್ ನಲ್ಲಿ ಪ್ಯಾಕೆಟ್ ಹಾಲು ವ್ಯಾಪಾರ ಮಾಡುತ್ತಿದ್ದ ಹೊಸಮನೆ ಬಡಾವಣೆ ನಿವಾಸಿ ಮೋಹನ್  ದರೋಡೆಗೊಳಗಾದ ಹಾಲಿನ ವ್ಯಾಪಾರಿ ಎಂದು ಗುರುತಿಸಲಾಗಿದೆ.

ವ್ಯಾಪಾರದಲ್ಲಿ ತೊಡಗಿದ್ದ ಮೋಹನ್ ನನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಬೆದರಿಕೆ ಹಾಕಿ ಸುಮಾರು 5000 ನಗದು ಹಾಗೂ ಮೊಬೈಲ್ ಹೊತ್ತೊಯ್ದಿದ್ದಾರೆ.

Leave a Comment

error: Content is protected !!