5 ದಿನಗಳ ಹಿಂದೆಯೇ ಗುರೂಜಿ ಕೊಲ್ಲುವ ಸುಳಿವು?

ಸುದ್ದಿ360 ಹುಬ್ಬಳ್ಳಿ, ಜು.06 : ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಬಗ್ಗೆ ಆರೋಪಿ 5 ದಿನಗಳ ಹಿಂದೆಯೇ ಸುಳಿವು ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಆರೋಪಿ ಮಹಾಂತೇಶ ಶಿರೂರ ಜೂ.30ರಂದು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಪೋಸ್ಟ್ ಈ ಶಂಖೆಗೆ ಪುಷ್ಟಿ ನೀಡುತ್ತದೆ. ತನ್ನ ಮುಖಪುಟದಲ್ಲಿ ಭಗದ್ಗೀತೆಯ ಶ್ಲೋಕ ‘ಅಧರ್ಮ ತಾಂಡವವಾಡುತ್ತಿರುವಾ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನ ವಿಳಂಬವೇಕೆ ಪ್ರಭುವೇ? ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇ ಯುಗೇ…’ ಎಂಬುದಾಗಿ ಇರುವ ಅಕ್ಷರಗಳೊಂದಿಗೆ ಗುರೂಜಿಯವರ ಭಾವಚಿತ್ರ ಆರೋಪಿಯ facebook ಮುಖಪುಟದಲ್ಲಿದೆ.

ಇನ್ನು ಮಹಾಂತೇಶ ಶಿರೂರ ಗೆ ಅಧರ್ಮ ತಾಂಡವಾಡುತ್ತಿದೆ ಎಂದು ಎನಿಸಿದ್ದು ಏಕೆ ಮತ್ತು ಈತ ತನ್ನ ಕುಟುಂಬದ ಬಗ್ಗೆ, ಕಾನೂನು ಕ್ರಮದ ಬಗ್ಗೆಯೂ ಯೋಚಿಸದೆ ಇಂತಹ ದುಷ್ಕೃತ್ಕ್ಕೆ ಕೈ ಹಾಕಿದ್ದು ಏಕೆ ಎಂದು ತನಿಖೆಯಿಂದ ತಿಳಿಯಬೇಕಿದೆ.

Leave a Comment

error: Content is protected !!