ಸುದ್ದಿ360 ದಾವಣಗೆರೆ.ಜು.06: ಹಿರಿಯ ನಾಗರೀಕರಿಗೆ ಮತ್ತು ಅಂಗವಿಕಲರಿಗೆ ಉಚಿತ ಕಿವಿ ಮೂಗು ಮತ್ತು ಗಂಟಲು ತಪಾಸಣೆ ಶಿಬಿರವು ಜುಲೈ 9ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1: 30 ಗಂಟೆವರೆಗೆ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ (ಹಳೆ ಅಶ್ವಿನಿ ಆಸ್ಪತ್ರೆ)ಯಲ್ಲಿ ನುರಿತ ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸೆ ತಜ್ಞ ವೈದ್ಯರಿಂದ ನಡೆಯಲಿದೆ.
ಶಿಬಿರದಲ್ಲಿ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಔಷಧಿ ವಿತರಣೆ ಮತ್ತು ಉಚಿತವಾಗಿ ಶ್ರವಣಯಂತ್ರಗಳನ್ನು ನೀಡಲಾಗುತ್ತಿದ್ದು, ಶಾ ಫೂಲ್ಚಂದ್ ಅಂಬಾಲಾಲ್ ಇವರು ಶ್ರವಣಯಂತ್ರಗಳನ್ನು ಕೊಡುಗೆಯಾಗಿ ನೀಡುವರು. ಸೌಲಭ್ಯ ಪಡೆಯಲು ಇಚ್ಛಿಸುವವರು ಜುಲೈ.8ರೊಳಗೆ ಆಸ್ಪತ್ರೆ ಮೊ. 96060 48423ಗೆ ಸಂಪರ್ಕಿಸುವಂತೆ ಆಸ್ಪತ್ರೆಯ ಕಮಿಟಿ ಟ್ರಸ್ಟ್ ನ ಅಧ್ಯಕ್ಷರಾದ ಸಂಘವಿ ಮಹಾವೀರ್ ಜೈನ್ ತಿಳಿಸಿದ್ದಾರೆ.