ಜಿಎಂಐಟಿ:  750 ವಿದ್ಯಾರ್ಥಿಗಳಿಗೆ ಜಾಬ್ ಆಫರ್ – ಜು.15 ರಂದು ‘ಆನ್ ಕ್ಯಾಂಪಸ್ ಎಂಪ್ಲಾಯ್ಮೆಂಟ್ ಆಫರ್ಸ್ ಸೆಲೆಬ್ರೇಶನ್ ಡೇ’

ಮಧ್ಯ ಕರ್ನಾಟಕ ಭಾಗದ ಜಿಎಂಐಟಿಯಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್

ಸುದ್ದಿ360, ದಾವಣಗೆರೆ, ಜು.07: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 750 ಜಾಬ್ ಆಫರ್ಸ್ ಸ್ವೀಕರಿಸಿದ್ದಾರೆ. ಇದರಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್ ಸ್ವೀಕರಿಸಿದ ಎಂಜಿನಿಯರಿಂಗ್ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ.

ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಿಹಿ ಹಂಚುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.

ವಿವಿಧ ಪ್ರತಿಷ್ಠಿತ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್, ಕ್ಯಾಪ್ಜೆಮಿನಿ, ಟಿಸಿಎಸ್,    ಎನ್ ಟಿಟಿ ಡೇಟಾ, ಹೆಚ್ ಸಿ ಎಲ್, ಮೈಂಡ್ ಟ್ರೀ, ಹೆಕ್ಸಾವೇರ್, ಬೈಜೂಸ್, ಐಸಿಐಸಿಐ, ಕ್ವಾಲಿಟೆಸ್ಟ್, ಟಾರ್ಗೆಟ್ ಕಾರ್ಪೊರೇಷನ್, ಇವೈ, ಡೆಲಾಯ್ಟ್, ಕಿರ್ಲೋಸ್ಕರ್ ಫೆರಸ್, ಇಟಾಚಿ, ಟೊಯೋಟಾ ಟೆಕ್ಸ್ಟೈಲ್, ಟಾಟಾ ಎಲೆಕ್ಸಿ, ವರ್ಕ ಫೋರ್ಸ್ ಸಾಫ್ಟ್ವೇರ್, ಎಪಿಸೋರ್ಸ್, ಮಿಲೇಕಲ್, ಎಲ್ ಜಿ ಸಾಫ್ಟ್, ವಗರಿಯಸ್ ಸಲ್ಯೂಷನ್ಸ್, ಓ ಜಿ ಹೆಲ್ತ್ ಕೇರ್, ಒಮೆಗ ಹೆಲ್ತ್ ಕೇರ್, ಡಿ ಮಾರ್ಟ್, ಟೆಕ್ ಮಹೇಂದ್ರ, 6ಡಿ ಟೆಕ್ನಾಲಜೀಸ್, ರೋಬೋಸಾಫ್ಟ್ ಟೆಕ್ನಾಲಜೀಸ್, ಮುಂತಾದ ಹಲವು ಪ್ರತಿಷ್ಠಿತ ಕಂಪನಿಗಳು ಸಂದರ್ಶನ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಂಡಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.

ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಇದೇ ಜು.15  ರಂದು ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಅದ್ದೂರಿಯ “ಆನ್ ಕ್ಯಾಂಪಸ್ ಎಂಪ್ಲಾಯ್ಮೆಂಟ್ ಆಫರ್ಸ್ ಸೆಲೆಬ್ರೇಶನ್ ಡೇ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಉಡುಗೊರೆಯ ಮೂಲಕ ಅಭಿನಂದನೆಗಳನ್ನು ತಿಳಿಸಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಪುಣೆ ಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಸಂಸ್ಥೆಯ ಜೊತೆಗೆ ಜಂಟಿಯಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರೊಡನೆ ಆಗಮಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಅತ್ಯುತ್ತಮ ಮೂರು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರುಗಳಿಗೆ ವಿಶೇಷ ರೀತಿಯಲ್ಲಿ ಸನ್ಮಾನದ ಮೂಲಕ ಅಭಿನಂದಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಮಧ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಗೊಂಡು ಕಾಲೇಜಿಗೆ ಮತ್ತು ತಮ್ಮ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!