ಸಾಲುಮರದ ತಿಮ್ಮಕ್ಕನಿಗೆ ಸಂಪುಟ ದರ್ಜೆ ಸ್ಥಾನಮಾನ

ಸುದ್ದಿ360, ಬೆಂಗಳೂರು ಜು.8: ರಾಜ್ಯ ಸರ್ಕಾರವು ಪರಿಸರ ರಾಯಭಾರಿಯನ್ನಾಗಿ ನೇಮಿಸಿರುವ ಸಾಲುಮರದ ತಿಮ್ಮಕ್ಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಮ್ಮಕ್ಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವುದಾಗಿ ಇತ್ತೀಚೆಗೆ ಘೋಷಿಸಿದ್ದರು.

ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ತಿಮ್ಮಕ್ಕ ಅವರಿಗೆ ವೇತನ, ಭತ್ಯೆ, ವಸತಿಗೃಹ, ಸಿಬ್ಬಂದಿ ಕಾರು ಸೇರಿದಂತೆ ಸಂಪುಟ ದರ್ಜೆ ಸಚಿವರಿಗೆ ದೊರೆಯವ ಸೌಲಭ್ಯಗಳು ದೊರೆಯಲಿವೆ.

Leave a Comment

error: Content is protected !!