ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುಧ್ಧ ಜಿಲ್ಲಾ ಯುವ ಕಾಂಗ್ರೆಸ್ ಆಕ್ರೋಶ

ಸುದ್ದಿ360, ದಾವಣಗೆರೆ, ಜು.9:  ಅಗತ್ಯ ವಸ್ತುಗಳ ಬೆಲ ಏರಿಕೆ ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುಧ್ಧ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಶನಿವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ತೀವ್ರ ಆಕ್ರೋಶ ವ್ಯಕ್ತ ಪಡಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಕೇಂದ್ರ ಸರ್ಕಾರವು ಸಾಮಾನ್ಯ ಜನರನ್ನ ಅಕ್ಷರಶಃ ಬೀದಿಗೆ ತಳ್ಳಿದೆ ದಿನೇ ದಿನೇ ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕು ದುಸ್ತರವಾಗಿಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಉಪಾಧ್ಯಕ್ಷ  ರಂಜಿತ್ ಮಾತನಾಡಿ ಕೇಂದ್ರ ಸರ್ಕಾರವು ಕೂಡಲೇ ದಿನಬಳಕೆಯ ವಸ್ತುಗಳಾದ ಅಡುಗೆ ಅನಿಲ ಹಾಗೂ ಇನ್ನಿತರೆ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ವಕ್ತಾರರಾದ ಚಿರಂಜೀವಿ ಮಾತನಾಡಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಲಿದೆ ಇದೇ ಬಿಜೆಪಿ ಸರ್ಕಾರದ ಅಚ್ಛೇ ದಿನದ ವಾಗ್ದಾನವಾಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮೊಹಮ್ಮದ್ ಸಮಿವುಲ್ಲಾ, ಯುವ ಕಾಂಗ್ರೆಸ್ ಮುಖಂಡರಾದ ಇರ್ಫಾನ್, ನವೀನ್ ನಲವಾಡಿ, ಮಹಬೂಬ್ ಬಾಷಾ, ಹಬೀಬಾ,ಸುರೇಶ್.ಎಂ.ಜಾಧವ್,ಮನು,ಹಲೇಶ್,ಪ್ರವೀಣ್,ವಿನಯ್ ಜೋಗಪ್ಪನವರ್,ತಿಪ್ಪೇಶ್, ಫಯಾಜ್,ಇಮಾಮ್,ಸುಹೈಲ್,ಅವಿನಾಶ್ ಇನ್ನಿತರರು ಭಾಗವಹಿಸಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!