ಸುದ್ದಿ360, ದಾವಣಗೆರೆ: ಸುಖವಿಲ್ಲದ ಭೋಗ ನೀರಲ್ಲಿ ಅಕ್ಷರ ಭರೆದಂತೆಯೇ ವ್ಯರ್ಥ. ಸುಖಕ್ಕೆ ಭೋಗದ ಪರಿಕಲ್ಪನೆ ಬೇಕಾಗಿಲ್ಲ. ಅರಮನೆಯಂತೂ ಬೇಡವೇ ಬೇಡ ಎಂಬುದನ್ನು ‘ಅಮೃತಮತಿ’ ಚಿತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಅಮೃತಮತಿ’ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಜನ್ನ ಕವಿ ವಿರಚಿತ `ಯಶೋಧರ ಚರಿತ್ರೆ’ ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ 90 ನಿಮಿಷಗಳ ಈ ಚಿತ್ರ ಪ್ರದರ್ಶನವನ್ನು ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾಜ, ಪ್ರಜಾಪ್ರಭುತ್ವದ ಕಟ್ಟುಪಾಡುಗಳು, ಅಹಿಂಸೆ, ಸ್ತ್ರೀಸ್ವಾತಂತ್ರ್ಯ ವೇ ಮೊದಲಾದವುಗಳು ಚಿತ್ರದ ಮುಖ್ಯಾಂಶಗಳಾಗಿದ್ದು, ಹಿಂಸೆಯನ್ನು ತ್ಯಜಿಸಬೇಕು ಎಂಬುದು ಚಿತ್ರದ ಒಟ್ಟಾರೆ ಆಶಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಮಾಜದ ಕಟ್ಟುಪಾಡುಗಳು ನಿಸರ್ಗದತ್ತವಾದ ಸುಖಗಳನ್ನು ಯಾವ ರೀತಿ ನಿರ್ಬಂಧಿಸುತ್ತವೆ ಎಂಬುದನ್ನು ಈ ಚಿತ್ರ ಹೇಳುತ್ತದೆ. ಭೋಗ-ಸುಖ, ಅರಮನೆ-ನೆಲಮನೆ, ಶಿಷ್ಟ-ಜಾನಪದದ ನಡುವಿನ ಸಂಘರ್ಷವನ್ನು ಬರಗೂರು ರಾಮಚಂದ್ರಪ್ಪ ಅವರು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು. ಪ್ರಿನ್ಸಿಪಾಲ್ ಎಸ್.ಎ. ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಡಾ.ಎ.ಬಿ. ರಾಮಚಂದ್ರಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ಮಂಜಣ್ಣ, ಎಂ.ಪಿ. ಭೀಮಣ್ಣ, ಡಾ. ಕಾವ್ಯಶ್ರೀ, ಮಲ್ಲಿಕಾರ್ಜುನಗೌಡ, ಟಿ. ಶೇಷಪ್ಪ ಇತರರಿದ್ದರು.
Hi there,
We run a YouTube growth service, which increases your number of subscribers both safely and practically.
– We guarantee to gain you 700-1500+ subscribers per month.
– People subscribe because they are interested in your channel/videos, increasing likes, comments and interaction.
– All actions are made manually by our team. We do not use any ‘bots’.
– Channel Creation: If you haven’t started your YouTube journey yet, we can create a professional channel for you as part of your initial order.
The price is just $60 (USD) per month, and we can start immediately.
If you have any questions, let me know, and we can discuss further.
Kind Regards,
Katelyn