‘ಕನ್ನಡವನ’ ಧ್ವಜಸ್ತಂಭ ಧ್ವಂಸಕ್ಕೆ ಯತ್ನ: ಕರುನಾಡ ಕನ್ನಡಸೇನೆ ಖಂಡನೆ

ಸುದ್ದಿ360, ದಾವಣಗೆರೆ ಸೆ.9: ನಗರದ  ಎಂ.ಸಿ.ಸಿ. ಬಿ ಬ್ಲಾಕಿನಲ್ಲಿರುವ ಕನ್ನಡ ವನದಲ್ಲಿ ಇದ್ದಂತಹ ಧ್ವಜ ಸ್ತಂಭವನ್ನು ಧ್ವಂಸಗೊಳಿಸಲು ಯತ್ನಿಸಿದ್ದು, ಇದಕ್ಕೆ ಕಾರಣರಾದವರು ಸ್ಪಷ್ಟೀಕರಣ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು ಎಂಬುದಾಗಿ ಕರುನಾಡ ಕನ್ನಡ ಸೇನೆ ಮತ್ತು ಕನ್ನಡ ಪರ ಸಂಘಟನೆಗಳು ಒತ್ತಾಯಿಸುವುದಾಗಿ ಸಂಘಟನೆ ಅಧ್ಯಕ್ಷ ಗೋಪಾಲಗೌಡ ಕೆ.ಟಿ. ಆಗ್ರಹಿಸಿದ್ದಾರೆ.

ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಉದ್ಯಾನವನದಲ್ಲಿದ್ದ ಧ್ವಜಸ್ತಂಭವನ್ನು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಒಡೆಯಲು ಮುಂದಾಗಿರುವುದನ್ನು ನಾವು ಖಂಡಿಸುವುದರ ಜೊತೆಗೆ ಇದರ ವಿರುದ್ಧ ಉಗ್ರಹೋರಾಟವನ್ನು ನಡೆಸುವುದಾಗಿ ಅವರು ತಿಳಿಸಿದರು.

ಈಗ ಹಾನಿಮಾಡಲಾಗಿರುವ ಶ್ರೀನಿವಾಸಶ್ರೇಷ್ಠಿ ಉದ್ಯಾನವನ (ಕನ್ನಡ ವನ)ದಲ್ಲಿ ದಿ.ಪವರ್ ಸ್ಟಾರ್‍ ಪುನೀತ್‍ ರಾಜ್‍ಕುಮಾರ್‍ ಪ್ರತಿಮೆಯ ಮುಂದೆ ಕನ್ನಡ ಧ್ವಜಸ್ತಂಭವನ್ನು ನಿರ್ಮಿಸಲಾಗಿದ್ದು, ಪ್ರತಿವರ್ಷ ಕನ್ನಡ ರಾಜ್ಯೋತ್ಸವ, ಸ್ವತಂತ್ರ ದಿನಾಚರಣೆ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬರಲಾಗಿದೆ. ಅಲ್ಲದೆ ಈ ಉದ್ಯಾನವನಕ್ಕೆ ನ್ಯಾಯಾಲಯದಿಂದ ಪರ್ಮನೆಂಟ್‍ ಇಂಜಕ್ಷನ್‍ ಡಿಕ್ರಿಯಾಗಿದ್ದರೂ ಸಹ ಇದನ್ನು ದಿಕ್ಕರಿಸಿ ಇಲ್ಲಿನ ಧ್ವಜಸ್ತಂಭವನ್ನು ಹಾನಿ ಮಾಡಲಾಗಿದೆ. ನಂತರ ನಗರಪಾಲಿಕೆ ಇಂಜಿನಯರ್‍ ಇದನ್ನು ಮೊದಲಿದ್ದ ಸ್ಥಿತಿಗೆ ತರುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಹಾನಿಪಡಿಸಲಾಗಿದ್ದ ಧ್ವಜಸ್ತಂಭವನ್ನು  ಕರಗಾರರು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಧ್ವಜಸ್ತಂಭವನ್ನು ಧ್ವಂಸಗೊಳಿಸಲು ಮುಂದಾಗಿರುವುದು ಸಮಸ್ತ ಕನ್ನಡಗರಿಗೆ ಹಾಗೂ ದಿ.ಪವರ್‍ ಸ್ಟಾರ್‍ ಪುನೀತ್‍ ರಾಜ್‍ಕುಮಾರ್‍ರವರಿಗೆ ಮಾಡಿದ ಅಪಮಾನವಾಗಿದೆ ಇದರ ವಿರುದ್ಧ ಉಗ್ರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಮುಂದಾಗಬೇಕು ಎಂದು ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತ, ಪರಿಸರ ಪ್ರೇಮಿ ಎಂ.ಜಿ. ಶ‍್ರೀಕಾಂತ್‍ ಮಾತನಾಡಿ,  ಹಲವಾರು ವರ್ಷಗಳಿಂದ ಕನ್ನಡವನವನ್ನು ಕರುನಾಡ ಕನ್ನಡ ಸೇನೆ ಸ್ವಯಂಪ್ರೇರಿತವಾಗಿ ನಿರ್ವಹಿಸುತ್ತಾ ಬಂದಿದ್ದರೂ ಗೋಪಾಲಗೌಡರಿಗೆ ಅವಕಾಶ ಕಲ್ಪಿಸದೆ ಮಹಾನಗರಪಾಲಿಕೆಯಿಂದ ಟೆಂಡರ್‍ ನೀಡುವ ಮೂಲಕ ನಿರ್ವಹಣೆ ವೆಚ್ಚ ಭರಿಸಲಾಗುತ್ತಿದೆ. ನಗರದಲ್ಲಿ ಸಾಕಷ್ಟು ಉದ್ಯಾನವನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಹಲವಾರು ಸಂಘಸಂಸ್ಥೆಗಳು ಉತ್ಸುಕರಾಗಿದ್ದರೂ ಸಹ ಟೆಂಡರ್‍ ನೀಡುವ ಮೂಲಕ ಅನವಶ್ಯಕವಾಗೊ ನಿರ್ವಹಣೆ ವೆಚ್ಚವನ್ನು ಭರಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಕರ್ನಾಟಕ ನವನಿರ್ಮಾಣ ಸೇನೆ ವೆಂಕಟೇಶ್‍ ಕೆ.ಎನ್‍., ಎನ್‍. ರಾಜೇಂದ್ರ ಬಂಗೇರ, ಶಿವರಾಜ್‍, ಶಿವಕುಮಾರ್‍, ಮಾರುತಿ ಸೇರಿದಂತೆ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!