ಖೋ-ಖೋ, ಕಬ್ಬಡ್ಡಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅತ್ತಿಗೆರೆ ಕಾಲೇಜು ವಿದ್ಯಾರ್ಥಿಗಳು

ಸುದ್ದಿ360 ದಾವಣಗೆರೆ, ಸೆ.30: ದಾವಣಗೆರೆ ಜಿಲ್ಲೆ ಅತ್ತಿಗೆರೆಯ ಶ‍್ರೀಮತಿ ಚನ್ನಪ್ಪ ಶಿವಲಿಂಗಮ್ಮ ಗುರುಬಸಪ್ಪ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದಾರೆ.

ಇಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲೀಲಾವತಿ ಎ.ಎಂ. ಖೋ-ಖೋ ಟೀಂಗೆ ಹಾಗೂ ರಮ್ಯಾ ಹೆಚ್‍.ಟಿ. ಕಬ್ಬಡ್ಡಿ ಟೀಂಗೆ ಆಯ್ಕೆ ಯಾಗಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಾಲೇಜು ಆಡಳಿತ ಮಂಡಳಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ  ಈ ಇಬ್ಬರು ವಿದ್ಯಾರ್ಥಿನಿಯರನ್ನು  ಪ್ರಶಂಸಿಸಿದೆ.  

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿನ ಘನತೆ ಗೌರವವನ್ನು  ಹೆಚ್ಚಿಸಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರೊ.ಚನ್ನಪ್ಪ ಪಲ್ಲಾಗಟ್ಟಿ, ಕಾರ್ಯದರ್ಶಿಯವರಾದ ಪ್ರೊ. ಕೆ.ಆರ್.ಸಿದ್ದಪ್ಪ, ಉಪಾಧ್ಯಕ್ಷರಾದ ಬಸವನಗೌಡ ಹಾಗೂ ಪ್ರಾಚಾರ್ಯರಾದ ಹೆಚ್‍.ಚಂದ್ರಪ್ಪ, ಕ್ರೀಡಾ ಕಾರ್ಯದರ್ಶಿಯಾದ ಸುಭಾಷ್‍ ರಾ. ಶಿಂಧೆ, ಹಾಗೂ ಪರಮೇಶ್ವರಪ್ಪ ಎನ್‍.ಎಸ್‍., ಕೆಎಂ. ಬಸವರಾಜಪ್ಪ, ಗುಡ್ಡಪ್ಪ, ಆರ್. ಓಲೇಕಾರ್ ಹಾಗೂ ನಾಗವೇಣಿ, ಸಲ್ಮಾ, ಸೌಮ್ಯ ಅಭಿನಂದಿಸಿದ್ದಾರೆ.

Leave a Comment

error: Content is protected !!