ಡಾ.ಎ ಜೆ ರವಿಕುಮಾರ್ ಇವರಿಗೆ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ

ಸುದ್ದಿ360 ಶಿವಮೊಗ್ಗ: ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಜಾನಪದ ಕಲಾ ಕೇಂದ್ರ ಹೊಸಮನೆ ಶಿವಮೊಗ್ಗ ಸಂಸ್ಥೆಯ  25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಕನಕ ಕಲಾವೈಭವ ಜಾನಪದ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿಯನ್ನು ಡಾ.ಎ ಜೆ ರವಿಕುಮಾರ್, ಸಮಾಜ ಸೇವಕರು ದಾವಣಗೆರೆ ಇವರಿಗೆ  ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸಮಾರಂಭದ ಅಧ್ಯಕ್ಷತೆಯನ್ನುಗೌರವಾಧ್ಯಕ್ಷರಾದ ಎಂ ಈಶ್ವರಪ್ಪ ನವುಲೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಎಚ್ ಶ್ಯಾಮಲಾ, ಶಿವಾನಂದಪ್ಪ, ಪರಿಸರ ಪ್ರೇಮಿ  ರಮೇಶ್, ಡಾ.ಬಾಲಣ್ಣ  ಹಾಗೂ ರಾಜ್ಯ ಯುವ … Read more

ಗಣೇಶ ಚತುರ್ಥಿ- ಈದ್‍ ಮಿಲಾದ್‍ –ಸೌಹಾರ್ಧಯುತ  ಆಚರಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ

ಸುಳ್ಳು ಸುದ್ದಿ- ಪ್ರಚೋದನಾಕಾರಿ ಹೇಳಿಕೆ – ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್  ಸುದ್ದಿ360, ದಾವಣಗೆರೆ ಸೆ.8:  ಎಲ್ಲ ಧರ್ಮಗಳ ಜನರ ನಡುವಿನ ಬಾಂಧವ್ಯದಿಂದಾಗಿ ದಾವಣಗೆರೆ ಐಕ್ಯತೆಯ ನಾಡಾಗಿ ಗುರುತಿಸಿಕೊಂಡಿದೆ.  ಈ ಬಾರಿ ಎರಡು ಪ್ರಮುಖ ಧರ್ಮಗಳ ಹಬ್ಬಗಳು ಜತೆಜತೆಗೆ ಬಂದಿದ್ದು, ಸೌಹಾರ್ದತೆ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ. ಎಲ್ಲರೂ ಒಂದೇ ಗೂಡಿನ ಹಕ್ಕಿಗಳು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ ಮಾಡಿದರು. … Read more

ದಾವಣಗೆರೆಯಲ್ಲಿ ಹೀಗೊಂದು ದುಬಾರಿ ಹೈಟೆಕ್ ಶೌಚಾಲಯ!!!? – ಕುಚೇಷ್ಟೆ ಅಂದುಕೊಳ್ಳೋದಾದರೆ ಪ್ರತ್ಯಕ್ಷವಾಗಿ ನೋಡಬಹುದು ಅಂತಾರೆ ಇದನು ಕಂಡವರು. . .!

ಪ್ರಪಂಚದಲ್ಲಿಯೇ ದುಬಾರಿ ಹೈಟೆಕ್ ಶೌಚಾಲಯ ನಿರ್ಮಿಸಿದ ದಾವಣಗೆರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು – ಕೆ.ಎಲ್.ಹರೀಶ್ ಬಸಾಪುರ ಸುದ್ದಿ360: ದಾವಣಗೆರೆ ನಗರದಲ್ಲಿ ಸುಮಾರು 26 ಕೋಟಿ ರೂ ವೆಚ್ಚದಲ್ಲಿ ಎಸ್ಕಲೇಟರ್, ಲಿಫ್ಟ್, ಸಿಸಿ ಕ್ಯಾಮೆರಾ ಗಳು, ಬಹು ಮಹಡಿ ಮಳಿಗೆಗಳು ಸೇರಿದಂತೆ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣ ಕೇವಲ ಸಾರ್ವಜನಿಕರ ಶೌಚಾಲಯಕ್ಕೆ ಮೀಸಲಾಗಿರುವುದನ್ನು ನೋಡಿದ ನಾಗರಿಕರು ಪ್ರಪಂಚದಲ್ಲಿಯೇ ದುಬಾರಿ ಹೈಟೆಕ್ ಶೌಚಾಲಯ (high-tech toilet) ವನ್ನು ನಮ್ಮ ಸ್ಮಾರ್ಟ್ ಸಿಟಿ ಎಂಜಿನಿಯರ್ ಗಳು ಹಾಗೂ ಅಧಿಕಾರಿಗಳು ನಿರ್ಮಿಸಿದ್ದಾರೆ ಎಂದು … Read more

ಗ್ಯಾರೆಂಟಿ ದೋಖಾ- ನವೆಂಬರ್ ಗೆ ರಾಜ್ಯ ಕತ್ತಲೆ – ವರ್ಗಾವಣೆ ದಂಧೆ: ಬಸವರಾಜ ಬೊಮ್ಮಾಯಿ ಆರೋಪ

guarantee-dokha-state-will-bi-in-darkness-basavaraja-bommai

‘ರಾಜ್ಯ ಸರ್ಕಾರ ಒಂದು ಅಗಳು ಅಕ್ಕಿಯನ್ನು ನೀಡಿಲ್ಲ- ಜನರಿಗೆ ಅಕ್ಕಿ ಕೊಡುತ್ತಿರುವುದು ಮೋದಿ’ ಸುದ್ದಿ360 ಬೆಂಗಳೂರು ಸೆ.8: ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರೆಂಟಿ (Guarantee) ಗಳ ಹೆಸರಲ್ಲಿ ದೋಖಾ, ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹರಾಜು ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರ್ವೋಚ್ಚ ನಾಯಕ ಯಡಿಯೂರಪ್ಪ … Read more

‘ರಾಜ್ಯ ಸರ್ಕಾರದ ಜನ ವಿರೋಧಿ ನೀತಿ’ –  ಬಿಜೆಪಿ ಪ್ರತಿಭಟನೆ

ಸುದ್ದಿ360 ಬೆಂಗಳೂರು ಸೆ.8:  ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. “ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.‌ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ , ಮಾಜಿ ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮಾಜಿ ಸಚಿವರು ಶಾಸಕರು ಪಾಲ್ಗೊಂಡಿದ್ದಾರೆ.

ಸೆ.9: ದಾವಣಗೆರೆ ಜಿಲ್ಲಾ ಕ.ಸಾ.ಪ.ದಿಂದ ‘ಗ್ರಾಮೀಣ ಸಿರಿ’ – ‘ನಗರ ಸಿರಿ’ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ

ಸುದ್ದಿ360 ದಾವಣಗೆರೆ, ಸೆ. 7: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2022-23ನೇ ಸಾಲಿನ ದಾವಣಗೆರೆ ಜಿಲ್ಲಾ ಮಟ್ಟದ ‘ಗ್ರಾಮೀಣ ಸಿರಿ’ ಹಾಗೂ ‘ನಗರ ಸಿರಿ’ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ಸೆ.9ರ ಶನಿವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದೆ. ಸಮಾರಂಭವು ಅಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ ಇವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಬಿ. ವಾಮದೇವಪ್ಪನವರ  ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಾನಪದ … Read more

ಭಾರತ್ ಜೋಡೋ ಯಾತ್ರೆಯ ಮೊದಲ ವಾರ್ಷಿಕೋತ್ಸವ ಪಾದಯಾತ್ರೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್

ಸುದ್ದಿ360, ದಾವಣಗೆರೆ, ಸೆ.7: ಎಐಸಿಸಿ ನಿಕಟಪೂರ್ವ ಅಧ್ಯಕ್ಷರಾದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ 2022ರ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪನವರ ನೇತೃತ್ವದಲ್ಲಿ ದಾವಣಗೆರೆ ನಗರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಯನ್ನು ಡಾ. ಪ್ರಭ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಭಾರತ್ ಜೋಡೋ ಯಾತ್ರೆಯ ಮೊದಲ ವರ್ಷದ ವಾರ್ಷಿಕೋತ್ಸವದ ಶುಭಾಶಯ … Read more

ಗಣೇಶ ಹಬ್ಬ – ಈದ್‍ ಮಿಲಾದ್‍ಗೆ ಮುನ್ನ ನಾಗರೀಕ ಸೌಹಾರ್ಧತೆ ಸಭೆ – ಅಭಿಪ್ರಾಯ ಸಲಹೆಗೆ ಕಿವಿಯಾದ ಜಿಲ್ಲಾ ವರಿಷ್ಠರು

ಸುದ್ದಿ360, ದಾವಣಗೆರೆ ಸೆ.6: ಮುಂಬರಲಿರುವ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ  ಇಂದು ನಗರ ಪೊಲೀಸ್ ಉಪವಿಭಾಗದ ವತಿಯಿಂದ ಉಮಾ ಪ್ರಶಾಂತ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಕಛೇರಿ ಸಬಾಂಗಣದಲ್ಲಿ ನಾಗರೀಕ ಸೌಹಾರ್ಧತೆ ಸಭೆ ನಡೆಯಿತು. ಸಭೆಯಲ್ಲಿ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬವನ್ನು ಎಲ್ಲಾ ನಾಗರಿಕರು ಸೌಹಾರ್ಧಯುತವಾಗಿ ಆಚರಿಸಲು ತಿಳಿಸಲಾಯಿತು.   ಸಭೆಯಲ್ಲಿ ವಿವಿಧ ಕೋಮಿನ ಮುಖಂಡರುಗಳು ಹಾಗು ಮಹಾನಗರ ಪಾಲಿಕೆಯ ಸದಸ್ಯರುಗಳು ಗಣೇಶ ಹಬ್ಬ ಹಾಗು ಈದ್ … Read more

ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣ-ರಾಧೆಯರ ಕಲರವ – ಪದ್ಮಾವತಿ ಡಿ ವೆರ್ಣೇಕರ್ ಇವರಿಗೆ ಪ್ರತಿಭಾ ಅಕಾಡೆಮಿಯಿಂದ ಬೆಸ್ಟ್ ಟೀಚರ್ ಪ್ರಶಸ್ತಿ

ಸುದ್ದಿ360, ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಶಾಲೆಯ ತುಂಬೆಲ್ಲಾ ಕೃಷ್ಣ- ರಾಧೆಯ ಅಲಂಕಾರದೊಂದಿಗೆ ಆಗಮಿಸಿದ್ದ ಚಿಣ್ಣರ ಕಲರವ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಮಕ್ಕಳು ಶ್ರೀಕೃಷ್ಣನ ನುಡಿಗಳು, ಭಗವದ್ಗೀತಾ ಪಠಣ, ಹಾಡು ಮತ್ತು   ನೃತ್ಯಗಳನ್ನು  ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಂತರದಲ್ಲಿ ಕಟ್ಟಿದ್ದ  ಬೆಣ್ಣೆಯ ಮಡಕೆಯನ್ನು ಒಡೆದು ಬೆಣ್ಣೆ ಕದಿಯುವ ರೂಪಕವನ್ನು ನೃತ್ಯದ ಮೂಲಕ ನಡೆಸಿಕೊಟ್ಟ  ಕೃಷ್ಣ ಮತ್ತು ರಾಧೆ ವೇಶಾಧಾರಿ … Read more

ಜಿಎಂಐಟಿ – ಎಂಬಿಎ ವಿಭಾಗದ “ದಿಶಾ ಫೋರಂ” ಸಮಾರೋಪ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಸುದ್ದಿ360, ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಲ್ಲಿ 2023 ನೇ ಸಾಲಿನ ಎಂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ವಿಭಾಗದ ದಿಶಾ ಪೊರಂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅದ್ದೂರಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಉಡುಗೆ ತೊಡುಗೆ ಗಳಲ್ಲಿ ಮಿಂಚುತ್ತಾ  ಲವಲವಿಕೆಯಿಂದ ಪಾಲ್ಗೊಂಡಿದ್ದು ಹರ್ಷವನ್ನುಂಟು ಮಾಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಟೆಕ್ಯೂಡ್ ಲ್ಯಾಬ್ಸ ಸಂಸ್ಥಾಪಕ ಮತ್ತು ವ್ಯವಸ್ಥಾಪಕ … Read more

error: Content is protected !!