ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ : ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ.ವಾಮದೇವಪ್ಪ.
ಸುದ್ದಿ360 ದಾವಣಗೆರೆ: ಯಾರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮತ್ತು ಹವ್ಯಾಸ ಇಟ್ಟುಕೊಳ್ಳುತ್ತಾರೋ ಅವರಲ್ಲಿ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ. ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ ಎಂಬುದಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಬಿ . ವಾಮದೇವಪ್ಪ ಹೇಳಿದರು. ಅವರು ದಾವಣಗೆರೆ ನಗರದ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ “ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣಗಳು” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. … Read more