ದಾವಣಗೆರೆ: 05 ಜನ ದರೋಡೆ ಆರೋಪಿತರ ಬಂಧನ- ಸ್ವತ್ತು ವಶ

ಸುದ್ದಿ360 ದಾವಣಗೆರೆ ಮಾ.15: ನಗರದ ಹೊರ ವಲಯ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಮಾ.12ರಂದು ಬೆಳಗಿನ ಜಾವ ನಡೆದಿದ್ದ ದರೋಡೆ ಪ್ರಕರಣದ ದೂರಿನ ಮೇರೆಗೆ ತನಿಖೆ ನಡೆಸಿರುವ ಪೊಲೀಸರು 5 ಜನ ಆರೋಪಿತರನ್ನು ಪತ್ತೆ ಹಚ್ಚಿ ಸ್ವತ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾ.12ರಂದು ಬೆಳಗಿನ ಜಾವ 12.30 ಗಂಟೆಯಿಂದ 01.30 ಗಂಟೆ ಸಮಯದಲ್ಲಿ ದಾವಣಗೆರೆ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಯಾರೋ 06 ಜನ ಅಪರಿಚಿತರು ಹಲ್ಲೆ ಮಾಡಿ, ಮೊಬೈಲ್‌ ಪೋನ್, ಎ.ಟಿ.ಎಂ ಕಾರ್ಡ್‌ಗಳು … Read more

ಶಿವಮೊಗ್ಗದ ಹಂದಿ ಅಣ್ಣಿ ಕೊಲೆ ಆರೋಪಿಯ ಬರ್ಬರ ಹತ್ಯೆ

ಸುದ್ದಿ360 ದಾವಣಗೆರೆ ಮಾ.15: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿ ರೌಡಿ ಶೀಟರ್ ಆಂಜನೇಯ ಅಲಿಯಾಸ್ ಅಂಜನಿ ಎಂದು ಗುರುತಿಸಲಾಗಿದ್ದು, ಇನ್ನೋರ್ವ  ಮಧು(28) ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗದ ಹಂದಿ ಅಣ್ಣಿ ಕೊಲೆಯ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಂಟು ಮಂದಿಯ ಪೈಕಿ, ಇಬ್ಬರಿಗೆ ಜಾಮೀನು ಸಿಕ್ಕಿತ್ತು. ಮಧು ಮತ್ತು ಆಂಜನೇಯಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನಿನ ಮೇಲೆ ಇತ್ತೀಚೆಗಷ್ಟೇ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ … Read more

ಎರಡನೇ ದಿನಕ್ಕೆ ಕಾಲಿಟ್ಟ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಕೋವಿಡ್ ಸಮಯದ ಸೇವೆಯನ್ನೂ ಲೆಕ್ಕಿಸದೆ ಕಡೆಗಣಿಸಿರುವ ಸರ್ಕಾರ – ನೌಕರರ ಆಕ್ರೋಶ ಸುದ್ದಿ360 ದಾವಣಗೆರೆ, ಮಾ.15: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹೊರಗುತ್ತಿಗೆ ನೌಕರರಾದ ನಾನ್ ಕ್ಲಿನಿಕಲ್ ಮತ್ತು ಡಿ ಗ್ರೂಪ್ ದಿನಗೂಲಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.14ರಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ನೌಕರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸಂಜೆಯವರೆಗೂ ಸರ್ಕಾರದಿಂದ ಯಾವ ರೀತಿಯ ಸ್ಪಂದನೆ ಸಿಕ್ಕದೇ ಇರುವುದು ನೌಕರರಲ್ಲಿ ಪ್ರತಿಭಟನೆಯ ಕಿಚ್ಚನ್ನು ಹೆಚ್ಚಿಸಿದೆ. ಈ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ … Read more

ಗೆಲ್ಲುವ ಪಕ್ಷದಲ್ಲಿ ಅಭ್ಯರ್ಥಿಗಳ ಪೈಪೋಟಿ ಸಹಜ- ಹೈಕಮಾಂಡ್ ಸಮರ್ಥವಾಗಿ ನಿರ್ವಹಿಸಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ, ಮಾರ್ಚ್ 15 : ಭಾಜಪ ಪಕ್ಷ ಸಂಘಟನೆಯಲ್ಲಿ ಗಟ್ಟಿಯಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಬಹಳಷ್ಟು ಉತ್ಸಾಹವಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯುವ ಆತ್ಮವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ವಿವಿಧ ಮೋರ್ಚಾ, ಸಮ್ಮೇಳನ , ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ, ಫಲಾನುಭವಿಗಳ ಕಾರ್ಯಕ್ರಮ, ರಥಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ರಾಜ್ಯದಲ್ಲಿ ನಡೆಯುತ್ತಿದೆ.  ಬಿಜೆಪಿಯಲ್ಲಿ … Read more

ರಾಜಕಾರಣಿಗಳು ಕೆಡುವುದಕ್ಕೆ ಮತದಾರರೇ ಕಾರಣ

ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಸಭೆಯಲ್ಲಿ ದಿನೇಶ್ ಅಮೀನ್ ಮಟ್ಟು ಅಭಿಮತ ಸುದ್ದಿ360, ಶಿವಮೊಗ್ಗ: ಇಂದು ರಾಜಕಾರಣಿಗಳು ಕೆಡುವುದಕ್ಕೆ ಅವರನ್ನು ಆರಿಸಿ, ಅಧಿಕಾರ ನೀಡಿರುವ ಜನರೇ ಕಾರಣವಾಗಿದ್ದಾರೆ. ಇಂದಿನ ರಾಜಕಾರಣಿಗಳು ಶಾಂತವೇರಿ ಗೋಪಾಲ ಗೌಡರ ಹತ್ತಿರಕ್ಕೂ ತಲುಪಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ಪೀಪಲ್ಸ್ ಲಾಯರ್ಸ್ ಗಿಲ್ಡ್ , ಅಹರ್ನಿಶಿ ಪ್ರಕಾಶನ ಶಿವಮೊಗ್ಗ .ಜನ ಪ್ರಕಾಶನ ಬೆಂಗಳೂರು ಏರ್ಪಡಿಸಿದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಹಾಗೂ … Read more

ರಂಗೋಲಿ ಸ್ಪರ್ಧೆ: ಹೆಸರು ನೋಂದಣಿ ದಿನಾಂಕ ವಿಸ್ತರಣೆ

ಸುದ್ದಿ360 ದಾವಣಗೆರೆ ಮಾ. 15: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಅವರವರ ಮನೆಯ ಮುಂದೆ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ”ಗೆ ಹೆಸರು ನೊಂದಾಯಿಸುವ ದಿನಾಂಕವನ್ನು 20-3-2023ರವರೆಗೆ ವಿಸ್ತರಿಸಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ. ಮಾರ್ಚ್ 22 ರಂದು ಬುಧವಾರ ಯುಗಾದಿ ಹಬ್ಬದಂದು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ  ಬೆಳಿಗ್ಗೆ 8 ರಿಂದ … Read more

ಮಾ.16: ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಸುದ್ದಿ360 ದಾವಣಗೆರೆ: ಬಿಸಿಯೂಟ ತಯಾರಕರು ಮಾರ್ಚ್ 16ರ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಸಿಯೂಟ ತಯಾರಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. ಮಧ್ಯಾಹ್ನ ಉಪಹಾರ ಯೋಜನೆಯನ್ನು ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಲು ಬಿಸಿಊಟ ತಯಾರಕರಾದ ಮುಖ್ಯ ಅಡುಗೆಯವರನ್ನು ಬ್ಯಾಂಕ್ ಜಂಟಿ ಖಾತೆಯಿಂದ ಬದಲಾಯಿಸಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲು ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿರುವುದನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ … Read more

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 25 ಸಾವಿರಕ್ಕೂ ಅಧಿಕ ಶಾಲಾ‌ ಕೊಠಡಿಗಳ ನಿರ್ಮಾಣ : ಸಿಎಂ ಬೊಮ್ಮಾಯಿ

ಹಾವೇರಿ, ಮಾರ್ಚ್ 14: ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 25 ಸಾವಿರಕ್ಕೂ ಅಧಿಕ ಶಾಲಾ‌ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಕೋಣನಕೇರಿಯಲ್ಲಿ ಮಂಗಳವಾರ ಕರ್ನಾಟಕ ಮಾದರಿ ಶಾಲೆಗಳ ಮಾರ್ಗದರ್ಶಿ ಕಾರ್ಯಕ್ರಮದಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಹಾಗೂ ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಕಂಪ್ಯೂಟರ್ ಲ್ಯಾಬ್‌ ಉದ್ಘಾಟಿಸಿ ಅವರು ಮಾತಾನಾಡಿದರು. ನನ್ನ ಕ್ಷೇತ್ರದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರಸ್ತುತ ವರ್ಷ 151 … Read more

ದಾವಣಗೆರೆ ಉತ್ತರದಲ್ಲಿ ಪ್ರಜಾಧ್ವನಿ ಯಾತ್ರೆ – ಶಾಮನೂರಲ್ಲಿ ಎಸ್ ಎಸ್ ಎಂ ಪರ ಮತಯಾಚನೆ

ಬಿಜೆಪಿಯಂತೆ ಸುಳ್ಳು ಹೇಳಲ್ಲ- ನುಡಿದಂತೆ ನಡೆಯುತ್ತೇವೆ: ಸಿದ್ಧು ಸುದ್ದಿ360 ದಾವಣಗೆರೆ ಮಾ.14: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದ ಪ್ರಜಾಧ‍್ವನಿ ಯಾತ್ರೆ ಸಂಚರಿಸಿ, ಕಾಂಗ್ರೆಸ್ ಪಕ್ಷ ಹೊರಡಿಸಿರುವ ಗ್ಯಾರಂಟಿ ಕಾರ್ಡ್ಗಳನ್ನು ಮನೆಮನೆಗೆ ವಿತರಿಸಿತು. ಪ್ರಜಾಧ್ವನಿ ಯಾತ್ರೆಗಾಗಿ ರೂಪಿಸಿರುವ ಬಸ್‌ನಲ್ಲಿ ಶಾಮನೂರಿಗೆ ಬಂದಿಳಿದ ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್, ಹರಿಹರ ಶಾಸಕ ರಾಮಪ್ಪ, ಜಮೀರ್, ಸಲೀಂ ಅಹಮದ್, ಎಂಎಲ್ ಸಿ ಪ್ರಕಾಶ್ ರಾಥೋಡ್, ಮಾಜಿ ಸಭಾಪತಿ ಬಿ.ಕೆ. ಕೋಳಿವಾಡ ಸೇರಿದಂತೆ … Read more

ದಶಪಥ ಹೆದ್ದಾರಿ ತರಾತುರಿ ಉದ್ಘಾಟನೆ: ಟೋಲ್ ಸಂಗ್ರಹ ಸಲ್ಲ –  ಸಿದ್ಧು

ಸುದ್ದಿ360 ದಾವಣಗೆರೆ ಮಾ.14: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅರೆ ಬರೆಯಾಗಿದೆ. ಸರ್ವಿಸ್ ರಸ್ತೆಗಳೇ ಪೂರ್ಣಗೊಂಡಿಲ್ಲ. ಹೀಗಿರುವಾಗ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದಶಪಥ ರಸ್ತೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಸರ್ವಿಸ್ ರಸ್ತೆಗಳು ನಿರ್ಮಾಣವಾಗಿಲ್ಲ. ಅಲ್ಲಿನ್ನು ಬೈಪಾಸ್, ಹಲವು ಅಂಡರ್ ಪಾಸ್ ಕಾಮಗಾರಿಗಳೂ ಆಗಿಲ್ಲ. ಇದರಿಂದ ಅಲ್ಲಿನ ಸುತ್ತಮುತ್ತಲಿನ ಹಳ್ಳಿಜನರು ಬಹಳಷ್ಟು ತೊಂದರೆಗೆ ಈಡಾಗುತ್ತಾರೆ. … Read more

error: Content is protected !!