ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ – ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ. ಕೆನೆಡಿ ಶಾಂತಕುಮಾರ್

ಸುದ್ದಿ360 ದಾವಣಗೆರೆ, ಜ.13: ರಾಜ್ಯದಲ್ಲಿ ಈ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸೌಲಭ್ಯಗಳಿಗಾಗಿ 147 ಪ್ರಸ್ತಾವನೆಗಳು ಸರ್ಕಾರದ ಮುಂದಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಶೀಘ್ರದಲ್ಲೇ 28 ಕೋಟಿ ಅನುದಾನ ಬಿಡುಗಡೆ ಮಾಡಲಿದೆ. ಚಾಲ್ತಿಯಲ್ಲಿದ್ದ ಪ್ರಸ್ತಾವನೆಗಳಿಗಾಗಿ 14 ಕೋಟಿ ಅನುದಾನವನ್ನು ಈಗಾಗಲೇ ನೀಡಲಾಗಿದ್ದು, ಅಲ್ಪ ಸಂಖ್ಯಾತರ ಸರ್ವತೋಮುಖ ಪ್ರಗತಿಗಾಗಿ ವಿವಿಧ ಇಲಾಖೆಗಳಡಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿರುವುದಾಗಿ ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ. ಕೆನೆಡಿ ಶಾಂತಕುಮಾರ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ … Read more

ಜ.15:  ಗಿನ್ನಿಸ್ ವಿಶ್ವ ದಾಖಲೆ ಯೋಗಥಾನ್‍-2022 ದಾವಣಗೆರೆಯಲ್ಲಿ 8 ಸಾವಿರ ಯೋಗಪಟುಗಳು ಭಾಗಿಯಾಗುವ ನಿರೀಕ್ಷೆ

ಸುದ್ದಿ360 ದಾವಣಗೆರೆ ಜ.13: ಯೋಗಥಾನ್ 2022ರ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮ ಜ.15ರಂದು ಬೆಳಗ್ಗೆ 6 ಗಂಟೆಗೆ  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ದಾವಣಗೆರೆಯ ಎಂಟು ಸಾವಿರಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಗವನ್ನು ಕ್ರೀಡೆಯೆಂದು ಪರಿಗಣಿಸಿ ಆದೇಶ ಹೊರಡಿಸಿದ್ದು, ಯೋಗದ ಮಹತ್ವ ಕುರಿತು ಅರಿವು ಮೂಡಿಸಲು ಮತ್ತು … Read more

ನಿರ್ದೇಶಕ – ನಟ ಗುರುಪ್ರಸಾದ್ ಬಂಧನ – ಕೋರ್ಟ್ ಗೆ ಹಾಜರು

ಸುದ್ದಿ360 ಬೆಂಗಳೂರು ಜ.13: ಚೆಕ್ ಬೌನ್ಸ್‍ ಮೊಕದ್ದಮೆಗೆ ಸಂಬಂಧಪಟ್ಟಂತೆ ಸಿನಿಮಾ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನೆಗೋಶಿಯೇಬಲ್ ಇನ್ ಸ್ಟುಮೆಂಟ್ಸ್ ಕಾಯ್ದೆಯಡಿ ಗುರುಪ್ರಸಾದ್ ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ವಿಚಾರಣೆಗೆ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಶೀಘ್ರ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳದಿದ್ದರೆ ಹೋರಾಟ;
ಸಿದ್ದವೀರಪ್ಪ ಬಡಾವಣೆ ನಿವಾಸಿಗಳ ಎಚ್ಚರಿಕೆ

ಸುದ್ದಿ೩೬೦ ದಾವಣಗೆರೆ ಜ.೧೨: ಆಂಜನೇಯ ಬಡಾವಣೆಯಿಂದ ಹದಡಿ ರಸ್ತೆ ಸೀಳಿಕೊಂಡು ಶಾಮನೂರು ರಸ್ತೆಗೆ ಜೋಡಿಸುವ ಅತೀ ಪ್ರಮುಖ ರಸ್ತೆ ಉನ್ನತೀಕರಿಸಿ ಹೊಸ ಡಾಂಬರು ರಸ್ತೆ ಕಾಮಗಾರಿಗೆ ಮಂಜೂರಾತಿ ದೊರೆತು ಒಂದು ವರ್ಷವಾದರು ಇದುವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ ನಗರದ ಸಿದ್ದವೀರಪ್ಪ ಬಡಾವಣೆ ಸುತ್ತಮುತ್ತನ ನಾಗರೀಕರು ಕಿಡಿಕಾರಿದ್ದಾರೆ. ಇದು ಮುಖ್ಯ ರಸ್ತೆಯಾಗಿದ್ದು, ಜನ ಸಂಚಾರ, ಸರಕು ಸಾಗಣೆ ಮತ್ತು ಇತರೆ ಕಾರಣಗಳಿಂದ ಕಾಂಕ್ರೀಟ್ ರಸ್ತೆ ಮಾಡುವಂತೆ ಈಗಾಗಲೇ ಮಹಾಪೌರರು, ಆಯುಕ್ತರು, ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ನಾಲ್ಕೈದು … Read more

ಆರ್‌ಜೆಡಿ ನಾಯಕ ಶರದ್ ಯಾದವ್ ವಿಧಿವಶ

ಸುದ್ದಿ360 ನವದೆಹಲಿ ಜ.12: ಮಾಜಿ ಕೇಂದ್ರ ಸಚಿವ ಮತ್ತು ಆರ್‌ಜೆಡಿ ನಾಯಕ ಶರದ್ ಯಾದವ್ ಅವರು ಜ. 12 ರಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟರ್ನಲ್ಲಿ “ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)” ಎಂದು ತಂದೆಯ ನಿಧನ ವಾರ್ತೆಯನ್ನು ಖಚಿತಪಡಿಸಿದ್ದಾರೆ.ಮಾಜಿ ಸಚಿವ ಶರದ್ ಯಾದವ್ ಅವರ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಡಿ ದಾಳಿ: 17 ಕೋಟಿ ರೂ. ಮೌಲ್ಯದ ಆಸ್ತಿ ವಶ

ಸುದ್ದಿ360 ಮಂಗಳೂರು ಜ.12: ಮುಕ್ಕ ಗ್ರೂಪ್ ಆಫ್ ಕಂಪೆನೀಸ್ ನ ಮೊಹಮ್ಮದ್ ಹ್ಯಾರಿಸ್ ಅವರ ಹೆಸರಿನಲ್ಲಿದ್ದ 17.34 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಹ್ಯಾರಿಸ್‍ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ವಶಪಡಿಸಿಕೊಂಡಿರುವ  ಜಾರಿ ನಿರ್ದೇಶನಾಲಯ, ಮಂಗಳೂರಿನಲ್ಲಿರುವ ಎರಡು ಫ್ಲ್ಯಾಟ್ ಗಳು ಮತ್ತು ಒಂದು ಕೈಗಾರಿಕಾ ನಿವೇಶನ ವಶಕ್ಕೆ ಪಡೆದಿದೆ. ಹ್ಯಾರಿಸ್ ಅವರು ಫೆಮಾ  (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ) ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಸ್ಥಿರಾಸ್ತಿ, … Read more

ಪ್ರದೀಪ್ ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ವಿಚಾರಣೆ

ಸುದ್ದಿ360 ರಾಮನಗರ ಜ.12: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಮೊದಲ ಆರೋಪಿ ಗೋಪಿ ತಲೆಮರಿಸಿಕೊಂಡಿದ್ದು, ಮೊದಲ ಆರೋಪಿಯ ಹೇಳಿಕೆ ಪಡೆದ ನಂತರ ಮತ್ತೊಬ್ಬ ಆರೋಪಿಯಾಗಿರುವ ಶಾಸಕ ಅರವಿಂದ ಲಿಂಬಾವಳಿ ಅವರ ಹೇಳಿಕೆ ಪಡೆಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಐವರು ಆರೋಪಿಗಳಿಗೆ ಕಗ್ಗಲೀಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಇವರಲ್ಲಿ ಎರಡನೇ ಆರೋಪಿ ಸೋಮಯ್ಯ, ನಾಲ್ಕನೇ ಆರೋಪಿ ರಮೇಶ್ ರೆಡ್ಡಿ, ಐದನೇ ಆರೋಪಿ ಜಯರಾಮ್‌ ರೆಡ್ಡಿ … Read more

ಸಂಕ್ರಾಂತಿಯಂದು ಪಿಂಚಣಿ ಕ್ರಾಂತಿಗೆ ಮುಂದಾದ ಅನುದಾನಿತ ಶಾಲೆ ಕಾಲೇಜುಗಳ ನೌಕರರು

ಕುಟುಂಬ ಸಮೇತ ಕ್ರಾಂತಿಗಿಳಿದ ಪಿಂಚಣಿ ವಂಚಿತ ನೌಕರರು ಸುದ್ದಿ360 ದಾವಣಗೆರೆ ಜ.12: ನಾಡೆಲ್ಲ ಸಂಕ್ರಾಂತಿಯ ಸಡಗರಕ್ಕೆ ಸಜ್ಜಾಗುತ್ತಿದ್ದರೆ ಹತ್ತಿಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ತಮ್ಮ ಸೇವೆಗೆ ಜೀವನದ ಕೊನೆಯಘಟ್ಟದಲ್ಲಿ ಪಿಂಚಣಿಯ ಬೆಳ್ಳಿಗೆರೆ ಮೂಡಲಿ ಎಂಬ ಉದ್ದೇಶದಿಂದ ಕ್ರಾಂತಿಗೆ ಮುಂದಡಿ ಇಟ್ಟಿದ್ದಾರೆ. ಈ ಕುರಿತು ಇಂದು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ … Read more

ನರ್ಸಿಂಗ್ ಮರು ಪರೀಕ್ಷೆಗೆ ವಿದ್ಯಾರ್ಥಿಗಳಿಂದ ವಿರೋಧ

ಸುದ್ದಿ360 ದಾವಣಗೆರೆ ಜ.12: ಕರ್ನಾಟಕ ಸ್ಟೇಟ್ ಡಿಪ್ಲೋಮ ಇನ್ ನರ್ಸಿಂಗ್ ಎಕ್ಸಾಮಿನೇಷನ್ ಬೋರ್ಡ್ ಕಳೆದ ನ.22ರಿಂದ 25ರವರೆಗೆ ನಡೆಸಿದ ಪರೀಕ್ಷೆಗಳ ಮರು ಪರೀಕ್ಷೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ನಗರದ ನರ್ಸಿಂಗ್ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ನೂರಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಮರು ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ  ನರ್ಸಿಂಗ್ ವಿದ್ಯಾರ್ಥಿ ಶಿವಕುಮಾರಸ್ವಾಮಿ “ಕಳೆದ ನವೆಂಬರ್ ನಲ್ಲಿ ನಡೆದಿರುವ ಮೊದಲನೇ ಮತ್ತು … Read more

‘ಪಠಾಣ್’ಚಿತ್ರದ ಪೋಸ್ಟರ್ ಹರಿದು ಹಾಕಿ ಚಿತ್ರ ಬ್ಯಾನ್ ಮಾಡಲು ಎಚ್ಚರಿಕೆ

ಸುದ್ದಿ360, ಧಾರವಾಡ ಜ.11: ಇಲ್ಲಿನ ಸಂಗಮ ಚಿತ್ರ ಮಂದಿರದಲ್ಲಿ ‘ಪಠಾಣ್’ಚಿತ್ರದ ಪೋಸ್ಟರ್ ಗಳನ್ನು  ಬಜರಂಗದಳ ಕಾರ್ಯಕರ್ತರು ಹರಿದು ಹಾಕಿದ ಘಟನೆ ಬುಧವಾರ ನಡೆದಿದೆ. ಪಠಾಣ್ ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದ್ದು, ಈಗಾಗಲೇ ದೇಶಾದ್ಯಂತ ಹಿಂದೂ ಪರ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಹಿಂದೆ ಪಠಾಣ್ ಚಿತ್ರದ ಬೇಶರಮ್ ಹಾಡಿಗೆ ನಟಿ ದೀಪಿಕಾ ಪಡಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿ ಡಾನ್ಸ್ ಮಾಡಿದ್ದನ್ನು ವಿರೋಧಿಸಿ, ಹಾಡು ಬಿಡುಗಡೆಯಾದಾಗಿನಿಂದ ಹಾಡಿನಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುವ ದೃಶ್ಯಗಳು ಕಂಡು ಬಂದಿವೆ ಎಂದು … Read more

error: Content is protected !!