ಕಬಿನಿ ಜಲಾಶಯ ಕ್ಕೆ ಮುಖ್ಯಮಂತ್ರಿ ಬಾಗಿನ

ಸುದ್ದಿ360 ಮೈಸೂರು,ಜುಲೈ 20: ಇಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಕಬಿನಿ ಜಲಾಶಯದ ಬಳಿ ಆಯೋಜಿಸಿರುವ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿಯವರ ಪತ್ನಿ ಚೆನ್ನಮ್ಮ, ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ್ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

ಹಂದಿ ಅಣ್ಣಿ ಹತ್ಯೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ

ಸುದ್ದಿ360, ಶಿವಮೊಗ್ಗ, ಜು.20: ಶಿವಮೊಗ್ಗದ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪನ ಕೊಲೆ ಮಾಡಿ ನಿನ್ನೆ ತಡರಾತ್ರಿ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಎದುರು ಶರಣಾಗಿದ್ದ 8 ಆರೋಪಿಗಳನ್ನು ಕಳೆದ ರಾತ್ರಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರ ತಂಡ ಆರೋಪಿಗಳಾದ ಕಾರ್ತಿಕ್(32), ನಿತಿನ್(29), ಮಧುಸೂಧನ್(32), ಫಾರುಖ್(40), ಆಂಜನೇಯ(26), ಮದನ್(25), ಮಧು (27), ಚಂದನ್(22) ಅವರುಗಳನ್ನು ಹೆಚ್ಚುವರಿ ತನಿಖೆಗಾಗಿ ಕರೆ ತರಲಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ … Read more

ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ

ಸುದ್ದಿ360, ದಾವಣಗೆರೆ, ಜು.19: ವಿಧಾನ ಪರಿಷತ್ ಶಾಸಕರಾದ ಆರ್ ಪ್ರಸನ್ನ ಕುಮಾರ್ ರವರ 2020-21ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಆಯ್ಕೆಯಾದ 03 ಜನ ದೈಹಿಕ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ (ರೆಟ್ರೋಫಿಟ್‍ಮೆಂಟ್ ಸಹಿತ)ಗಳನ್ನು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಜೆ. ಶಾಂತನಗೌಡ ಇವರ ಸಮಕ್ಷಮದಲ್ಲಿ ಜು.19 ರಂದು ವಿತರಿಸಿದರು. ಈ ವೇಳೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾ ಡಾ. ಕೆ.ಕೆ. ಪ್ರಕಾಶ್ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದೇಶದ ಪ್ರತಿ ಪ್ರಜೆ “ನನ್ನ ಮತ ಮಾರಾಟಕ್ಕಿಲ್ಲ” ಎಂದು ಜನಾಂದೋಲನ ನಡೆಸಬೇಕು

ಚುನಾವಣಾ ಸುಧಾರಣಾ ಕ್ರಮಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ ಸುದ್ದಿ360, ದಾವಣಗೆರೆ, ಜು.19: ಚುನಾವಣೆಗಳಲ್ಲಿ ದೇಶದ ಪ್ರತಿ ಪ್ರಜೆಯೂ ನನ್ನ ಮತ ಮಾರಾಟಕ್ಕಿಲ್ಲ ಎಂದು ಮುಕ್ತ, ನಿರ್ಭೀತ, ನ್ಯಾಯಸಮ್ಮತ ಚುನಾವಣೆಗೆ ಆಗ್ರಹಿಸುವ ಜನಾಂದೋಲನ ರೂಪಿಸುವ ದಿಕ್ಕಿನಲ್ಲಿ ಆಲೋಚಿಸಬೇಕಾಗಿದೆ ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು. ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. … Read more

ರಸ್ತೆಯಲ್ಲಿ ಅಪಾಯಕಾರಿ ಗುಂಡಿ – ಬರೀ ಆರೋಪ ಮಾಡದೆ ಪರಿಸ್ಥಿತಿಯ ಹತೋಟಿಗೆ ಮುಂದಾದ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್

ಸದಾ ಟೆಂಡರ್ ಪ್ರಕ್ರಿಯೆ, ಯೋಜನೆ ಸಿದ್ಧತೆಯ ಹಾರಿಕೆ ಉತ್ತರ ನೀಡುವ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಸುದ್ದಿ360, ದಾವಣಗೆರೆ, ಜು.19: ದಾವಣಗೆರೆ ಮಹಾನಗರ ಪಾಲಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡುವ ಸಂಗತಿಯೊಂದನ್ನು ಸ್ಥಳೀಯ ನಾಗರೀಕರು ಬಯಲಿಗೆಳೆದಿದ್ದಾರೆ. ನರಕಸದೃಶ ಗುಂಡಿಗಳಿಂದ ಬೇಸತ್ತ ಜನತೆ ಪಾಲಿಕೆ ನೀಡುವ ಪಾಲಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಮಹಾನಗರ ಪಾಲಿಕೆ ದಿವಾಳಿಯಾಗಿದೆ. ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ. ಸಣ್ಣ ಪುಟ್ಟ ರಿಪೇರಿ ಕೆಲಸಗಳೂ ಪಾಲಿಕೆಯಿಂದ ಆಗುತ್ತಿಲ್ಲ. ಎಲ್ಲದಕ್ಕೂ ಆಡಳಿತ ಪಕ್ಷ ಬಿಜೆಪಿಯಿಂದ ಬರೀ ಹಾರಿಕೆಯ … Read more

ಎಸ್.ಪಿ.ಇ. ಕಾಯಿದೆ ಜಾರಿಗೆ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಒತ್ತಾಯ – ಮನವಿ

ಸುದ್ದಿ360, ದಾವಣಗೆರೆ, ಜು.19: ಔಷಧ ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇರುವ ಎಸ್.ಪಿ.ಇ. ಕಾಯಿದೆಯನ್ನ ಜಾರಿಗೊಳಿಸದೇ  ಔಷಧ ತಯಾರಕ ಕಂಪನಿಗಳು  ಪ್ರತಿನಿಧಿಗಳನ್ನ ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿ ನಗರದಲ್ಲಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ದಾವಣಗೆರೆ ಜಿಲ್ಲಾ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು. ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಔಷಧ ಮಾರಾಟಗಾರರು ನಂತರ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೇಂದ್ರದ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು. ನಮ್ಮ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಸರ್ಕಾರಗಳ … Read more

ಅಗತ್ಯ ವಸ್ತುಗಳ ಬೆಲೆ ಏರಿಕೆ: ಸೌದೆ ಒಲೆ ಹೊತ್ತಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ

ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್ಟಿ ಹೇರಿಕೆಗೆ ಗುಡುಗಿದ ಮಹಿಳಾಮಣಿಯರು ಸುದ್ದಿ360, ದಾವಣಗೆರೆ, ಜು.19: ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಆಹಾರ ಧಾನ್ಯ ಮತ್ತು ಮೊಸರು ಸೇರಿದಂತೆ ಜನಸಾಮಾನ್ಯರು ದಿನನಿತ್ಯ ಬಳಸುವ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹೇರಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ನಗರದ ರಿಂಗ್ ರಸ್ತೆಯ ಕ್ಲಾಕ್ ಟವರ್ ಬಳಿ ಇರುವ ಸೈನಿಕ ಉದ್ಯಾನವನದ  ಎದುರಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್ … Read more

ಸಿಎಂ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ ಕೆಎಂಎಫ್ – ನೂತನ ದರ ಇಲ್ಲಿದೆ ನೋಡಿ

ಸುದ್ದಿ360, ಬೆಂಗಳೂರು, ಜು.18: ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. 5 ರಷ್ಟು ಜಿಎಸ್ ಟಿ ಯಿಂದ ದರ ಹೆಚ್ಚಾಗಿತ್ತು ನಂದಿನಿ‌ ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಶೇ.5 ಜಿಎಸ್ ಟಿ ಆಕರಣೆಯಿಂದ ಹೆಚ್ಚಾಗಿದ್ದ ದರ ಮರು ಪರಿಷ್ಕರಣೆ ಮಾಡಿದ ಕೆ ಎಂ ಎಫ್. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. 5 ರಷ್ಟು ಜಿಎಸ್ ಟಿ ಯಿಂದ ದರ ಹೆಚ್ಚಾಗಿತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ … Read more

ಆಗಸ್ಟ್ 12ಕ್ಕೆ ಗಾಳಿಪಟ-2 ರಾಜ್ಯಾದ್ಯಂತ ತೆರೆಗೆ

ಸುದ್ದಿ360, ಬೆಂಗಳೂರು, ಜು.18: ರೋಚಕ ತಿರುವುಗಳನ್ನೊಳಗೊಂಡ, ಹಾಸ್ಯಭರಿತ ಪ್ರಸಂಗಗಳೊಂದಿಗೆ ಸಾಗುವ ಪ್ರಯಾಣದ ಮೂವರು ಹುಡುಗರು ಮತ್ತು ಅವರ ಪ್ರೇಮಗಳ ಕತೆ ಹೊಂದಿರುವ ಗಾಳಿಪಟ-2 ಚಲನಚಿತ್ರ ಮುಂಬರುವ ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಮಡೆನೂರು ಮನು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಕಲಾವಿದರು, ಗಣೇಶ್, ದಿಗಂತ್ ಹಾಗೂ ಭೂಷಣ್ ಎನ್ನುವ ಮೂವರು ಪ್ರಾಣ ಸ್ನೇಹಿತರ ನಡುವೆ ನಡೆಯುವ ಕಥೆಯ ಹಂದರವನ್ನು ಹೊಂದಿದೆ. ಮೂವರು ಪ್ರಾಣ ಸ್ನೇಹಿತರು ನೀರುಕೋಟೆ ಎನ್ನುವ ಊರಿನ … Read more

ಜು.20ರಿಂದ 5 ದಿನಗಳ ಯೋಗ ಜೀವನ ದರ್ಶನ-2022

ಸುದ್ದಿ360, ಬೆಂಗಳೂರು, ಜು.18: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ವತಿಯಿಂದ ಜುಲೈ, 20 ರಿಂದ 24 ರವರೆಗೆ ನಗರದ 8 ಕಡೆಗಳಲ್ಲಿ ಯೋಗ ಜೀವನ ದರ್ಶನ-2022 ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಫೌಂಡೇಶನ್ನಿನ ಸಂಚಾಲಕ ಟಿ.ವಿ.ವಿ ಸತ್ಯನಾರಾಯಣ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ವಿದ್ಯೆಯ ಮುಖಾಂತರ ಸಮಾಜವನ್ನು ಪುಷ್ಟೀಕರಿಸುವ ಕಾರ್ಯವನ್ನು ಮಾಡುತ್ತಿರುವ ಸಂಘಟನೆಯಾಗಿದೆ.  ಅಂತಾರಾಷ್ಟ್ರ-ರಾಷ್ಟ್ರ-ರಾಜ್ಯ ಮಟ್ಟದ ಯೋಗ ಶಿಕ್ಷಕರ ಪ್ರಾಂತ … Read more

error: Content is protected !!