ಕೆರೆಯಲ್ಲಿ ಮುಳುಗಿದ ನಂದಿನಿ ಹಾಲಿನ ವಾಹನ

ಸುದ್ದಿ360 ದಾವಣಗೆರೆ.ಜು.04:  ನಂದಿನಿ ಹಾಲಿನ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆರೆಯಲ್ಲಿ ಮುಳುಗಿರುವ ಘಟನೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ವಾಹನದಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿನ ಹಾಲಿನ ಶಾಪ್ ಗಳಿಗೆ ಹಾಲು ಪೂರೈಸುತ್ತಿದ್ದ ವಾಹನ ಇದಾಗಿದ್ದು, ವಾಹನದಲ್ಲಿದ್ದ 500ಕ್ಕೂ ಅಧಿಕ ಲೀಟರ್ ಹಾಲು ನೀರು ಪಾಲಾಗಿದೆ. ದೇವರಹಳ್ಳಿ ಅಂಗಡಿಗಳಿಗೆ ಹಾಲು ವಿತರಿಸುವ ಸಲುವಾಗಿ ನಲ್ಲೂರು ಕಡೆ ಹೊರಟಿದ್ದ ವಾಹನ ಇದಾಗಿತ್ತು. ಸಂತೆಬೆನ್ನೂರು … Read more

ಕೆವಿಪಿವೈನಲ್ಲಿ ಸರ್‌ಎಂವಿ ಪಿಯು ಕಾಲೇಜಿನ 11 ವಿದ್ಯಾರ್ಥಿಗಳಿಗೆ ರ‍್ಯಾಂಕ್

ಸುದ್ದಿ360 ದಾವಣಗೆರೆ.ಜು.04: ರಾಷ್ಟ್ರಮಟ್ಟದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ನಗರದ ಸರ್ ಎಂವಿ ಕಾಲೇಜಿನ 11 ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸುವ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಎಲ್ಲಾ 11 ವಿದ್ಯಾರ್ಥಿಗಳಿಗೆ ನಗರದ ಎಸ್.ಎ. ರವೀಂದ್ರನಾಥ ನಗರದಲ್ಲಿರುವ ಸರ್ ಎಂವಿ ಕಾಲೇಜಿನ ನೂತನ ಕ್ಯಾಪಸ್‌ನಲ್ಲಿ ಭಾನುವಾರ ಅಭಿನಂದನಾ ಸಮಾರಂಭ ಎರ್ಪಡಿಸಲಾಗಿತ್ತು. ರ‍್ಯಾಂಕ್ ಪಡೆದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಟಿ.ಎಚ್. ಭರತೇಶ್ (108), ಎಸ್.ಆರ್. … Read more

ಯೋಗಿದಿಂದ ಬದುಕಿನಲ್ಲಿ ಸುಯೋಗ: ಬಸವಪ್ರಭು ಸ್ವಾಮೀಜಿ

ಸುದ್ದಿ360 ದಾವಣಗೆರೆ.ಜು.03: ಯಾವುದೇ ಕೆಲಸದಲ್ಲಿ ಯಶಸ್ವಿಗಳಾಗಬೇಕಾದರೆ ಏಕಾಗ್ರತೆ ಬಹಳ ಮುಖ್ಯ. ಯೋಗ ಏಕಾಗ್ರೆಯನ್ನು ತಂದು ಕೊಡುತ್ತೆ, ಏಕಾಗ್ರತೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಅಲ್ಲದೆ ಯೋಗದಿಂದ ಒಳ್ಳೆಯ ಭಾವನೆ ಮೂಡುತ್ತದೆ ಆ ಮೂಲಕ ಸಮಾಜ ಸ್ವಾಸ್ತ್ಯದಿಂದ ಕೂಡಿರುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ, ದಾವಣಗೆರೆ-ಹರಿಹರ ಇವರ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ನಡೆದ ನೋಬೆಲ್ ವರ್ಲ್ಡ್  ರೆಕಾರ್ಡ್ ಯೋಗಾಸನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. … Read more

ಜಿಲ್ಲಾ ಉಸ್ತವಾರಿ ಸಚಿವರ ಜಿಲ್ಲಾ ಪ್ರವಾಸ

byrathi basavaraj

ಸುದ್ದಿ360 ದಾವಣಗೆರೆ, ಜು.02: ಮಾನ್ಯ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಜು.03 ರ ಭಾನುವಾರ ದಂದು ಬೆಳಿಗ್ಗೆ 10 ರಿಂದ ಮ.12 ಗಂಟೆಯವೆರೆಗೆ ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಚಂದ್ರಗುಪ್ತ ಮೌರ್ಯ ಯುಪಿಎಸ್‍ಸಿ ಕೆಪಿಎಸ್‍ಸಿ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರೆಂದು ಅವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯದಿಂದ ಸಮಾಜದಲ್ಲಿನ ದೌರ್ಜನ್ಯ ತಡೆಯಲು ಸಾಧ್ಯ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಮತ ಸುದ್ದಿ360 ದಾವಣಗೆರೆ, ಜು.02: ಸಮಾಜದಲ್ಲಿ ನಡೆಯುವ ಅಸಮಾನತೆ, ದೌರ್ಜನ್ಯಗಳನ್ನು ತಡೆಯಲು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಇಂದು ನಮಗೆ ವಚನಗಳು ಇಷ್ಟೊಂದು ಸುಲಭವಾಗಿ ಸಿಗುತ್ತಿವೆ … Read more

ಮಡಿಕೇರಿಯಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವ

ಸುದ್ದಿ360 ಮಡಿಕೇರಿ ಜು.2: ತಾಲೂಕಿನ ಪರಾಜೆ ಗ್ರಾಮದಲ್ಲಿ ಶನಿವಾರ ರಾತ್ರಿ 8.25ರ ಸುಮಾರಿಗೆ ಭೂಮಿಯಿಂದ ಭಾರೀ ಪ್ರಮಾಣದ ಶಬ್ಧ ಕೇಳಿ ಬಂದಿದ್ದು, ಗ್ರಾಮಸ್ಥರನ್ನು ಭಯಬೀತಗೊಳಿಸಿದೆ. ಭೂಕಂಪನದ ಭಯದಿಂದ ಮನೆಯೊಳಗಡೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಇಲ್ಲಿನ ಚೆಂಬು, ಸಂಜಾಜೆ, ಗೂನಡ್ಕ ಭಾಗಗಳಲ್ಲಿ ಈ ಶಬ್ಧ ಕೇಳಿ ಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಇದು ಭೂಕಂಪನ ಹೌದೋ ಇಲ್ಲೋ ಎಂದು ಇನ್ನು ಸ್ಪಷ್ಟಪಡಿಸಿಲ್ಲ.

ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು – ಕವಿವಾಣಿ ಸ್ಮರಿಸಿದ ಸಿಎಂ

ಸುದ್ದಿ360 ಹೈದರಾಬಾದ್ ಜು.02: ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.’’ಎಂಬ ಕವಿವಾಣಿಯಂತೆ ಕನ್ನಡನಾಡಿನಿಂದ ಹೈದರಾಬಾದಿನಲ್ಲಿ ನೆಲೆಸಿದ್ದರೂ ಕನ್ನಡದ ಕಂಪು ಹಾಗೂ ಭಾಷೆಯನ್ನು ಬಿಟ್ಟಿಲ್ಲ. ನಮಗಿಂತ ಅಚ್ಚಕಟ್ಟಿನ ಕನ್ನಡದ ಪ್ರೇಮಿಗಳು ನೀವು’ ಎಂದು ಮುಖ್ಯಮಂತ್ರಿಗಳು ಬಸವರಾಜ ಬೊಮಾಯಿ ಅವರು ತಿಳಿಸಿದರು. ಅವರು ಇಂದು ಕಾಚಿಗುಡದ ಲಿಂಗಂಪಲ್ಲಿಯಲ್ಲಿರುವ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ನೃಪತುಂಗ ಕನ್ನಡದ ಆದಿಕವಿಯ ಹೆಸರಿನಲ್ಲಿ ಸಂಸ್ಥೆಯನ್ನು ಕಟ್ಟಿ ಸಾವಿರಾರು ಮಕ್ಕಳಿಗೆ ವಿದ್ಯೆ ನೀಡುತ್ತಿರುವುದು ದೊಡ್ಡ ಕೆಲಸ. ಇದರ ಸ್ಥಾಪಕರಿಗೆ ಹಾಗೂ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು. ಹೈದರಾಬಾದಿನ … Read more

ಮುಂದಿನ ಚುನಾವಣೆಯಲ್ಲಿ ರಾಜಕೀಯ ನಿರ್ಣಯ ನಮ್ಮದು ಎಚ್ಚರಿಕೆ

ಎಸ್ ಸಿ-ಎಸ್ ಟಿ ಸಂಘಟನೆಗಳ  ಒಕ್ಕೂಟದ ಮುಖಂಡ ಡಾ. ಎನ್. ಮೂರ್ತಿ ಹೇಳಿಕೆ ಸುದ್ದಿ360 ದಾವಣಗೆರೆ, ಜು.02:  ರಾಜ್ಯದಲ್ಲಿ ಎಲ್ಲ ದಲಿತ ಸಂಘಟನೆಗಳೂ ಒಂದಾಗಿವೆ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಗಳು ಎಸ್ ಸಿ, ಎಸ್ ಟಿಯ ಎಲ್ಲ ಸ್ವಾಮೀಜಿಗಳನ್ನು ಒಂದುಗೂಡಿಸುವಲ್ಲಿ, ದಲಿತ ಸಂಘಟನೆಗಳನ್ನು ಸಮಷ್ಠಿ ಶಕ್ತಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕರ್ನಾಟಕ ಎಸ್ ಸಿ-ಎಸ್ ಟಿ ಸಂಘಟನೆಗಳ  ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿಯ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ … Read more

ಅನುದಾನ ನೀಡಿಕೆಯಲ್ಲಿ ತಾರತಮ್ಯ – ಬಿಜೆಪಿಯಿಂದ ಸೇಡಿನ ರಾಜಕೀಯ

ಪಾಲಿಕೆ ವಿಪಕ್ಷ ನಾಯಕ : ಜಿ. ಎಸ್. ಮಂಜುನಾಥ್ ಗಡಿಗುಡಾಳ್‌ ಗಂಭೀರ ಆರೋಪ ಸುದ್ದಿ360 ದಾವಣಗೆರೆ, ಜು.02:  ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಯುಜಿಡಿ ತುರ್ತು ಕಾಮಗಾರಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಕೂಡ ಕಾಂಗ್ರೆಸ್ ವಾರ್ಡ್ಗಳಿಗೆ ಹಣ ನೀಡದೆ ಆಡಳಿತ ಪಕ್ಷ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ … Read more

ಗುಂಡಿಕ್ಕಿ ಎಂದವನ ಬಂಧಿಸಿ: ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹ

ಸುದ್ದಿ360 ದಾವಣಗೆರೆ, ಜು.02:  ಇತ್ತೀಚೆಗೆ ಸುದ್ದಿ ವಾಹಿನಿಯೊಂದರ ಫೋನ್ ಇನ್ ಕಾರ್ಯಕ್ರಮವೊಂದರಲ್ಲಿ ಕರೆ ಮಾಡಿದ ವ್ಯಕ್ತಿ, ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಹೇಳಿಕೆ ನೀಡಿದ್ದಾನೆ. ಈತನನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆಯ ವೀರಪ್ಪ ಎಂಬ ವ್ಯಕ್ತಿ ಈ ರೀತಿಯಾಗಿ ಮಾತನಾಡಿದ್ದು, ಒಂದು ಕೋಮಿನ ವಿರುದ್ಧ ಕೀಳಾಗಿ ಹೇಳಿಕೆ ನೀಡಿದ್ದಾನೆ. ಈ … Read more

error: Content is protected !!