ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸುದ್ದಿ360 ದಾವಣಗೆರೆ, ಜೂ.29:  ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ  ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರೆದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಪ್ರತಿಭಟನೆ ನಡೆಸಿತು. ಇಲ್ಲಿನ  ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ 60 ವರ್ಷ ವಯಸ್ಸಾಗಿ ಬಿಡುಗಡೆಗೊಳಿಸುತ್ತಿರುವ ಬಿಸಿಯೂಟ … Read more

ಟ್ಯಾಂಕರ್ ಗೆ ಬೆಂಕಿ ಇಬ್ಬರು ಸಜೀವ ದಹನ –ನಾಲ್ವರಿಗೆ ಗಾಯ

ಸುದ್ದಿ360 ಧಾರವಾಡ,ಜೂ.29: ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಬೆಂಕಿ ಹತ್ತಿ ಉರಿದ ಘಟನೆ ಬೈಪಾಸ್ ನ ಯರಿಕೊಪ್ಪ ಬಳಿ ಬುಧವಾರ ರಾತ್ರಿ ಸಂಭವಿಸಿದ್ದು, ಘಟನೆಯಲ್ಲಿ ಟ್ಯಾಂಕರ್ ಚಾಲಕ ಸೇರಿ ಇಬ್ಬರು ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ. ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಲಾರಿ ಎದುರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ ಉರುಳಿ ಬಿದ್ದಿದೆ. ಆಗ ಟ್ಯಾಂಕರ್‌ನಲ್ಲಿದ್ದ ಡೀಸೆಲ್ ಸೋರಿಕೆಯಾಗಿ ಹೊತ್ತಿದ ಬೆಂಕಿ ಇಡೀ ಟ್ಯಾಂಕರ್ ಗೆ ಆವರಿಸಿದೆ. ಅಪಘಾತದಲ್ಲಿ ಇಬ್ಬರು ಸಾವನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ … Read more

ಸಾಮೂಹಿಕ ಸನ್ನಿಯಂತೆ ಕಾಡುತ್ತಿರುವ ಮಾದಕ ವಸ್ತು ಸೇವನೆ

ಯುವಪೀಳಿಗೆ ಜಾಗರೂಕರಾಗಲು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಕರೆ ಸುದ್ದಿ360 ದಾವಣಗೆರೆ. ಜೂ.29: ಸಾಮಾಜಿಕ ಜಾಲತಾಣಗಳು ಇಂದಿನ ಯುವಪೀಳಿಗೆಗೆ ದೊಡ್ಡ ಪಿಡುಗಾಗಿ ಮಾರ್ಪಟ್ಟಿದ್ದು ಯುವಪೀಳಿಗೆಯನ್ನು ಸಮಸ್ಯೆಯತ್ತ ದೂಡುತ್ತಿವೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಹೇಳಿದರು. ನಗರದ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ … Read more

ದೇವನಗರಿಯಲ್ಲಿ ಜು.1ಕ್ಕೆ ಶ್ರೀ ಜಗನ್ನಾಥ ರಥಯಾತ್ರೆ

ಸುದ್ದಿ360 ದಾವಣಗೆರೆ. ಜೂ.29:  ದೇವನಗರಿಯಲ್ಲಿ ಇದೇ ಮೊದಲ ಬಾರಿಗೆ ಜು. 1 ರಂದು ಶ್ರೀ ಜಗನ್ನಾಥ ರಥಯಾತ್ರೆ ಮಹಾ ಮಹೋತ್ಸವ ನಡೆಯಲಿದೆ ಎಂದು ಅಂತರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ಅವಧೂತ ಚಂದ್ರದಾಸ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶುಕ್ರವಾರ ಮಧ್ಯಾಹ್ನ 2ಕ್ಕೆ ದೊಡ್ಡಪೇಟೆಯ  ಶ್ರೀ ಗಣೇಶ ದೇವಸ್ಥಾನದಿಂದ ರಥೋತ್ಸವ ಪ್ತಾರಂಭವಾಗಲಿದೆ.  ಹಾಸಭಾವಿ ವೃತ್ತ, ಚಾಮರಾಜ ಪೇಟೆ, ಮಂಡಿಪೇಟೆ, ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಕಾರ್ಯಕ್ರಮ ನಡೆಯುವ ಶ್ರೀ … Read more

ಸುಶ್ರುತ ಆಯುರ್ವೇದ ವೈದ್ಯಕೀಯ ಕಾಲೇಜು , ಸಂಶೋಧನ ಕೇಂದ್ರ ಲೋಕಾರ್ಪಣೆ (ಜು.1)

ಸುದ್ದಿ360 ದಾವಣಗೆರೆ. ಜೂ.29:  ಸುಶ್ರುತ ಆರೋಗ್ಯ ಪ್ರತಿಷ್ಠಾನದಿಂದ ನಗರದ ಲೋಕಿಕೆರೆ ರಸ್ತೆಯ ಶ್ರೀರಾಮ ನಗರದ ಶ್ರೀದೇವಿ ರೈಸ್ ಮಿಲ್ ಹತ್ತಿರ ನೂತನವಾಗಿ ನಿರ್ಮಿಸಿರುವ ಸುಶ್ರುತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದ ಉದ್ಘಾಟನೆಯು ಬರುವ ಜು.1ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸುಶ್ರುತ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಬಿ.ಜಿ. ಸತೀಶ್  ಇಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಸಾಧಕರಿಗೆ ಸನ್ಮಾನಿಸಲಾಗುವುದು. ಮತ್ತು … Read more

ಜಿಎಂಐಟಿಯಲ್ಲಿ ಡಿಆರ್ ಡಿಓ ಸೆಮಿನಾರ್ (ಜು.1)

ಸುದ್ದಿ360 ದಾವಣಗೆರೆ. ಜೂ.29:  ಜಿಎಂಐಟಿ ಕಾಲೇಜಿನಲ್ಲಿ  ಆಜಾದಿ ಕ ಅಮೃತ್ ಮಹೋತ್ಸವ ಟ್ಯಾಗ್ ಲೈನ್ ಅಡಿ  ಜುಲೈ 1 ರಿಂದ ಜುಲೈ 3 ರ ವರೆಗೆ ಮೂರು ದಿನಗಳ ಸೆಮಿನಾರ್ ಮತ್ತು ಪ್ರಾಜೆಕ್ಟ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾಹಿತಿ ನೀಡಿದರು. ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,  ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಡಿ ಆರ್ ಡಿ ಓ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಎಂಐಟಿ ಹಾಗೂ  ಡಿಆರ್ … Read more

ಹೆತ್ತವರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಪೊಲೀಸರ ಅತಿಥಿಯಾದ ಮಗ ಮಹರಾಯ !

ಸುದ್ದಿ360 ಉಡುಪಿ, ಜೂನ್ 28: ತನ್ನ ಮೊಬೈಲ್‌ನಿಂದ ಕರೆ ಮಾಡಿ ಆತಂಕದಿಂದ ಮಾತನಾಡಿದ್ದಮಗ ಮಹಾರಾಯ! ನನ್ನನ್ನು ಅಪಹರಣ ಮಾಡಿರುವುದಾಗಿ ಹೇಳಿ 5 ಲಕ್ಷ ರೂ. ಬೇಡಿಕೆ ಇಟ್ಟು ಹೆತ್ತವರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇನು ಕಾಲ ಬಂತಪ್ಪ. . . ಅಂತೀರಾ, ಏನ್‍ ಮಾಡೋದು ಸ್ವಾಮಿ ಮಕ್ಕಳು ದುಶ್ಚಟಗಳ ದಾಸರಾದರೆ ಎಂತಹ ಕೃತ್ಯಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಇಂತಹ ಕೆಲವು ಘಟನೆಗಳು ಉದಾಹರಣೆಯಾಗಿಬಿಡುತ್ತವೆ. ಮೋಜು ಮಸ್ತಿಯ ಬಲಿಗೆ ಬಿದ್ದ 25ರ ಹರೆಯದ ವರುಣ್‍ನಾಯಕ್‍ … Read more

ದಾವಣಗೆರೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವರು

ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್, ಸಚಿವರಾದ ಎಸ್ ಟಿ ಸೋಮಶೇಖರ್ ಇಂದು ದಾವಣಗೆರೆಗೆ ಆಗಮಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಸಂಸದರಾದ ಜಿಎಂ ಸಿದ್ದೇಶ್ವರ್, ಶಾಸಕರಾದ ರವೀಂದ್ರನಾಥ್,  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್ ಕುಮಾರ್, ಮಹಾಪೌರರಾದ ಜಯಮ್ಮ ಆರ್ ಗೋಪಿ ನಾಯ್ಕ್, ನಿಕಟಪೂರ್ವ ಮಹಾಪೌರರಾದ ಎಸ್ ಟಿ ವೀರೇಶ್ ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳಿಗೆ ಶಾಲಾ ಹಂತದಲ್ಲೆ ಸ್ಪರ್ಧಾತ್ಮಕ ಪರೀಕ್ಷೆ ಅರಿವು ಮೂಡಿಸಿ

ರಾಜ್ಯದ ಯುಪಿಎಸ್‌ಸಿ ಟಾಪರ್ ನಗರದ ವಿ. ಅವಿನಾಶ್ ಸಲಹೆ ಸುದ್ದಿ360 ದಾವಣಗೆರೆ, ಜೂನ್ 28: ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಾಧನೆಗಾಗಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು ಎಂದು ರಾಜ್ಯದ ಯುಪಿಎಸ್‌ಸಿ ಟಾಪರ್ ನಗರದ ವಿ. ಅವಿನಾಶ್ ಹೇಳಿದರು. ನಗರದ ಅಕ್ಕ ಮಹಾದೇವಿ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಐಕ್ಯುಎಸಿ ವಿಭಾಗ ಹಮ್ಮಿಕೊಂಡಿದ್ದ ‘ಪ್ರೇರಣಾ ನುಡಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಅವರು ಮಾತನಾಡಿದರು. ಶಾಲೆ ಹಂತದಿಂದಲೇ ಯುಪಿಎಸ್‌ಸಿ ಕುರಿತು ಮಾಹಿತಿ … Read more

ಸಾಲ ಮರುಪಾವತಿಯಲ್ಲಿ ರೈತರೇ ಮಾದರಿ – ಡಿಸಿಸಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಇಲ್ಲ

ದಾವಣಗೆರೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ಸುದ್ದಿ360 ದಾವಣಗೆರೆ, ಜೂನ್ 28: ರಾಜ್ಯ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕುಗಳಿಂದ ಸಾಲ ಪಡೆದ ಒಟ್ಟು ರೈತರಲ್ಲಿ ಶೇ.97 ಮಂದಿ ಸಕಾಲಕ್ಕೆ ಮರು ಪಾವತಿ ಮಾಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಶೂನ್ಯ ಬಡ್ಡಿ ಸಾಲ ಮೊತ್ತ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೊಮಶೇಖರ್ ಹೇಳಿದರು. ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ … Read more

error: Content is protected !!